ಕಳೆದ ಐದು ವರ್ಷಗಳಿಂದ ಭಾರತೀಯ ಸೇನೆ ಹಿಂದೆಂದಿಗಿಂತಲೂ ಹೆಚ್ಚಿನ ಬಲವನ್ನು ಪಡೆದುಕೊಂಡಿದೆ, ಯುದ್ಧ ವಿಮಾನದಿಂದ ಹಿಡಿದು ಘನ ಆರ್ಟಿಲರಿ, ಜಲಾಂತರ್ಗಾಮಿ ನಿರೋಧಕ ಯುದ್ಧ ವಿಮಾನ, ಸ್ಟೀಲ್ತ್ ಫ್ರಿಗೇಟ್ಸ್ ಇತ್ಯಾದಿಗಳನ್ನು ಹೊಂದುವ ಮೂಲಕ ಹೆಚ್ಚು ಬಲಿಷ್ಠವಾಗಿ ಹೊರಹೊಮ್ಮಿದೆ. ಸೈನಿಕರ ಅದರಲ್ಲೂ ಕಠಿಣ ಭೂಪ್ರದೇಶದಲ್ಲಿ ನಿಯೋಜನೆಗೊಂಡಿರುವ ಯೋಧರ ಜೀವನಮಟ್ಟವನ್ನೂ ನರೇಂದ್ರ ಮೋದಿ ಸರ್ಕಾರ ಸುಧಾರಿಸಿದೆ. ಬಹುಮುಖ್ಯವಾಗಿ, ಮೋದಿ ಸರ್ಕಾರದ ’ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಹೆಚ್ಚಿನ ಪ್ರಮಾಣದ ಮಿಲಿಟರಿ ಉಪಕರಣಗಳು ದೇಶೀಯವಾಗಿಯೇ ಉತ್ಪಾದನೆಗೊಂಡಿದೆ.
ಇತ್ತೀಚಿಗೆ ಭಾರತೀಯ ಸೇನೆ ಸೇರಿದ ದೇಶೀಯವಾಗಿ ಉತ್ಪಾದಿಸಿದ ವ್ಯವಸ್ಥೆಯೆಂದರೆ ಅದು ಕೆ9 ವಜ್ರ-ಟಿ 155ಎಂಎಂ ಸ್ವಯಂ ಚಾಲಿತ ಹೌವಿಟ್ಝರ್. ಲರ್ಸನ್ & ಟರ್ಬೋ ಇದನ್ನು ಉತ್ಪಾದಿಸಿದೆ. ಗುಜರಾತ್ನ ಹಝೀರದಲ್ಲಿ ಎಲ್ & ಟಿ ಅರ್ಮೋರ್ಡ್ ಸಿಸ್ಟಮ್ ಕಾಂಪ್ಲೆಕ್ಸ್ ಉದ್ಘಾಟನೆಯ ವೇಳೆ ಮೋದಿಯವರು ಇಂತಹ 10 ಹೌವಿಟ್ಝರ್ಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ. ಈ ಕಾಂಪ್ಲೆಕ್ಸ್ ಅತ್ಯಂತ ಹೈಪೈ ಆಗಿದ್ದು, ಇನ್ಫಾಂಟ್ರಿ ಕಂಬಾತ್ ವೆಹ್ಹಿಕಲ್, ಬ್ಯಾಟಲ್ ಟ್ಯಾಂಕ್, ಹೌವಿಟ್ಝರ್ಗಳನ್ನು ಉತ್ಪಾದಿಸುವ ಸಲುವಾಗಿಯೇ ಇದನ್ನು ವಿನ್ಯಾಸಪಡಿಸಲಾಗಿದೆ. ಮುಂದಿನ 22 ತಿಂಗಳುಗಳಲ್ಲಿ ಇಂತಹ 90 ಹೌವಿಟ್ಝರ್ಗಳನ್ನು ಮೋದಿ ದೇಶಕ್ಕೆ ಅರ್ಪಣೆ ಮಾಡಲಿದ್ದಾರೆ.
ಸ್ವಯಂ ಚಾಲಿತ ಹೌವಿಟ್ಝರ್ಗಳನ್ನು ಉತ್ಪಾದಿಸುವ ಸಲುವಾಗಿ ಎಲ್ & ಟಿ ರೂ.4,500 ಕೋಟಿ ಗುತ್ತಿಗೆಯನ್ನು ಪಡೆದುಕೊಂಡಿದೆ. ಅಲ್ಲದೇ, ತಂತ್ರಜ್ಞಾನ ವರ್ಗಾವಣೆಗಾಗಿ ಕೆ-9 ಥಂಡರ್ ಒರಿಜಿನಲ್ ಉತ್ಪಾದಕ, ದಕ್ಷಿಣ ಕೊರಿಯಾದ ಹನ್ವಾಹ ಲ್ಯಾಂಡ್ ಸಿಸ್ಟಮ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೆ-9 ವಜ್ರವನ್ನು ಮರುಭೂಮಿಗಳಲ್ಲಿ ಕಾರ್ಯಾಚರಿಸುವ ಸಲುವಾಗಿ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ. ಸ್ವಯಂಚಾಲಿತ ಗನ್ಗಳ ಕೊರತೆಯಿಂದಾಗಿ ಪಾಕಿಸ್ಥಾನದ ಕಡೆಯಿಂದ ಭಾರತೀಯ ಸೇನೆ ತೀವ್ರ ಸ್ವರೂಪ್ ಅನಾನುಕೂಲವನ್ನು ಎದುರಿಸುತ್ತಿದೆ.
2009ರಲ್ಲಿ ಪಾಕಿಸ್ಥಾನಕ್ಕೆ ಅಮೆರಿಕಾ 115 ಎಂ109A5 ಹೌವಿಟ್ಝರ್ಗಳನ್ನು ಪೂರೈಕೆ ಮಾಡಿತ್ತು. ಭಾರತಕ್ಕೆ ಫೀಲ್ಡ್ ಗನ್ನ ಅವಶ್ಯಕತೆ ಇದೆ ಎಂದು ಆಗಿನ ಯುಪಿಎ ಸರ್ಕಾರಕ್ಕೆ ಎಷ್ಟು ಬಾರಿ ಎಚ್ಚರಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎನ್ಡಿಎ ಅಧಿಕಾರಕ್ಕೆ ಬಂದ ಬಳಿಕ, ತಂತ್ರಜ್ಞಾನ ವರ್ಗಾವಣೆ ಒಪ್ಪಂದದ ಮೂಲಕ ಗನ್ಗಳನ್ನು ದೇಶೀಯವಾಗಿ ಉತ್ಪಾದನೆ ಮಾಡುವ ಪ್ರಕ್ರಿಯೆ ಆರಂಭಗೊಂಡಿತು.
ಈ ವರ್ಷದ ಮಾರ್ಚ್ನಲ್ಲಿ ಭಾರತೀಯ ಸೈನ್ಯಕ್ಕೆ ಯುಎಸ್ ನಿರ್ಮಿತ ಎಂ 777 ಹೌವಿಟ್ಝರ್ಗಳ ಸೇರ್ಪಡೆ ಕಾರ್ಯ ಆರಂಭವಾಗಲಿದೆ. ಇಂತಹ 145 ಹೌವಿಟ್ಝರ್ ಪೂರೈಕೆಗಾಗಿ ರೂ. 5,000 ಕೋಟಿ ಸರ್ಕಾರದಿಂದ ಒಪ್ಪಂದಕ್ಕೆ 2016ರ ನವೆಂಬರ್ನಲ್ಲಿ ಸಹಿ ಹಾಕಲಾಗಿದೆ ಮತ್ತು ಮೊದಲ ಐದು ಬಂದೂಕುಗಳು ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಾಗಿ ಮತ್ತು ತರಬೇತಿಗಾಗಿ ಭಾರತವನ್ನು ತಲುಪಿದೆ. 25ಎಂ777 ಹೌವಿಟ್ಝರ್ಗಳು ಮೊದಲ ಬಳಕೆಗೆ ಸಿದ್ಧಗೊಂಡು ಆಗಮಿಸಲಿವೆ, ಉಳಿದವುಗಳು ಮಹೀಂದ್ರಾ ಡಿಫೆನ್ಸ್ನ್ನು ಸೇರಲಿವೆ, ಇವುಗಳು ಗನ್ಗಳಿಗೆ ಮೌಲ್ಯವನ್ನು ಸೇರಿಸುತ್ತದೆ. ಮೂರು ದಶಕಗಳ ನಂತರ ಭಾರತೀಯ ಸೇನೆಗೆ ಸೇರ್ಪಡೆಯಾಗುತ್ತಿರುವ ಮೊತ್ತ ಮೊದಲ ಫೀಲ್ಡ್ ಗನ್ಗಳು ಇದಾಗಿವೆ. ಈ ಗನ್ಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾಪವು 2010 ರಿಂದಲೂ ನಡೆಯುತ್ತಿದ್ದವು. ಯುಪಿಎಯ ಅಡಿಯಲ್ಲಿನ ನಿಧಾನ ಸ್ವಾಧೀನ ಪ್ರಕ್ರಿಯೆ ಮತ್ತು ಸ್ವಾಧೀನಪಡಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳುವಲ್ಲಿನ ವಿಳಂಬ ಇದಕ್ಕೆ ಕಾರಣವಾಗಿದೆ.
ಮೇ 2014 ರಲ್ಲಿ ಎನ್ಡಿಎ ಸರಕಾರ ಯುಎಸ್ನಿಂದ ಹೌವಿಟ್ಝರ್ಗಳನ್ನು ಖರೀದಿಸಲು ತಾತ್ವಿಕವಾಗಿ ಒಪ್ಪಿಕೊಂಡಿತು. ಆದರೆ ಯುಪಿಎ ಸರಕಾರದ ಅಸಭ್ಯತೆಯ ಕಾರಣಕ್ಕೆ ಉಂಟಾದ ದೀರ್ಘ ವಿಳಂಬದಿಂದಾಗಿ ಗನ್ಗಳ ವೆಚ್ಚವು ಏರಿಕೆಯಾಗಿದೆ. ಒಪ್ಪಂದವನ್ನು ಮರು ಸ್ಥಾಪಿಸಿ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು, ಹೆಚ್ಚಿನ ಬಂದೂಕುಗಳನ್ನು ಭಾರತದಲ್ಲಿ ಇಟ್ಟುಕೊಳ್ಳುವ ಸಲುವಾಗಿ ಒಪ್ಪಂದವನ್ನು ಬದಲಾವಣೆ ಮಾಡಲಾಯಿತು. ಭವಿಷ್ಯದಲ್ಲಿ ಅಂತಹ ಬಂದೂಕುಗಳನ್ನು ತಯಾರಿಸಲು ಖಾಸಗಿ ವಲಯದ ಘಟಕದ ನಿರ್ಣಾಯಕ ಜ್ಞಾನವನ್ನು ಪಡೆಯಲು ಮಹೀಂದ್ರಾ ಡಿಫೆನ್ಸ್ ನೆರವಾಗಲಿದೆ. ಗಮನಾರ್ಹವಾಗಿ, ಈ ಬಂದೂಕುಗಳು ಭಾರತೀಯ ನಿರ್ಮಿತ ಸಾಮಗ್ರಿಗಳನ್ನು ಬಳಸುತ್ತವೆ.
22 ಅಪಾಚೆ ಎಚ್ 64ಟಿ ಲಾಂಗ್ಬೌ ಹೆಲಿಕಾಪ್ಟರ್ಗಳು ಎಲ್ಲಾ-ಹವಾಮಾನ ಮತ್ತು ರಾತ್ರಿ-ಕಾರ್ಯಾಚರಣೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಅತ್ಯಂತ ಮುಂದುವರಿದ ಬಹು-ಪಾತ್ರದ ಈ ಯುದ್ಧ ಹೆಲಿಕಾಪ್ಟರ್ ಭಾರತ ಹೊಂದಲಿದೆ. ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ 128 ಗುರಿಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಮತ್ತು, ಸಂಯೋಜಿತ ಡಿಜಿಟಲ್ ಕಾರ್ಯಸಾಧ್ಯತೆ, ಸುಧಾರಿತ ಬದುಕುಳಿಯುವಿಕೆ ಮತ್ತು ಅರಿವಿನ ನಿರ್ಧಾರ ನೆರವು, ರಹಸ್ಯ ಗುಣಲಕ್ಷಣಗಳು, ಮುಂದುವರಿದ ಸಂವೇದಕಗಳು ಮತ್ತು ದೃಶ್ಯ ವ್ಯಾಪ್ತಿಯ ಕ್ಷಿಪಣಿಗಳು ಸೇರಿದಂತೆ 16 ಗುಣಲಕ್ಷಣಗಳನ್ನು ಇದು ಹೊಂದಿದೆ. ಡೈನಮ್ಯಾಟಿಕ್ಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ನಂತಹ ಭಾರತೀಯ ಕೈಗಾರಿಕಾ ಪಾಲುದಾರರು ಈ ಹೆಲಿಕಾಪ್ಟರ್ಗಳ ಪ್ರಮುಖ ಅಂಶಗಳನ್ನು ಪೂರೈಸುತ್ತಿದ್ದಾರೆ. ಅಪಾಚೆಯು, ಎಜಿಎಂ-114 ಹೆಲ್ಫೈರ್ ಏರ್-ಟು-ಮೇಲ್ಮೈ ವಿರೋಧಿ ಟ್ಯಾಂಕ್ ಕ್ಷಿಪಣಿ, ಎಐಎಂ-62 ಸ್ಟಿಂಗರ್ ಏರ್-ಟು-ಏರ್ ಕ್ಷಿಪಣಿ ಮತ್ತು ಎಎನ್ / ಎಪಿಜಿ-78 ಲಾಂಗ್ಬೌ ಫೈರ್ ಕಂಟ್ರೋಲ್ ರಾಡರ್ಗಳನ್ನು ಪತ್ತೆ, ಸ್ಥಳ, ವರ್ಗೀಕರಣ ಮತ್ತು ತಾಂತ್ರಿಕ ಟಾರ್ಗೆಟ್ಗಳ ವಿಭಾಗೀಕರಣಕ್ಕಾಗಿ ಹೊಂದಿದೆ.
ಕಳೆದ ವರ್ಷ ಎನ್ಡಿಎ ಸರ್ಕಾರವು ಅಕ್ಟೋಬರ್ನಲ್ಲಿ ಏಳು ಭಾರತೀಯ ನೌಕಾಪಡೆಯ ಹಡಗುಗಳಿಗೆ ಲಾಂಗ್ ರೇಂಜ್ ಸರ್ಫೇಸ್-ಟು-ಏರ್ ಕ್ಷಿಪಣಿಗಳು (ಎಲ್ಆರ್ಎಸ್ಎಎಂ) ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ತಯಾರಿಸಲು ಐಎಐ ಮತ್ತು ಸಾರ್ವಜನಿಕ-ಕ್ಷೇತ್ರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಡುವೆ ಹೆಚ್ಚುವರಿ $777 ದಶಲಕ್ಷ ಒಪ್ಪಂದವನ್ನು ತ್ವರಿತಗತಿಯಲ್ಲಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಮಾತುಕತೆಯು ಯುಪಿಎ ಆಡಳಿತದ ಅವಧಿಯಲ್ಲಿ ನಡೆಯಿತು. ಆದರೆ ಇಲ್ಲೂ ವಿಳಂಬ ಮಾಡಲಾಯಿತು.
ಮೋದಿ ಆಡಳಿತವೂ ಸೇನಾ ಪಡೆಗಳಿಗೆ ಬೇಕಾದ ಎಲ್ಲಾ ಶಸ್ತ್ರಾಸ್ತ್ರ, ಉಪಕರಣಗಳ ವ್ಯವಸ್ಥೆಯನ್ನು ಕ್ಷಿಪ್ರಗತಿಯಲ್ಲಿ ಪೂರೈಸಿ ಸೇನೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.