ಅಹ್ಮದಾಬಾದ್: ತನ್ನ ವಿದ್ಯಾರ್ಥಿಗಳಲ್ಲಿ ಆರೋಗ್ಯಯುತ ಜೀವನಶೈಲಿಯನ್ನು ಉತ್ತೇಜಿಸುವ ಸಲುವಾಗಿ ಗುಜರಾತ್ನ ವಿಶ್ವವಿದ್ಯಾಲಯವೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ತನ್ನ ಆವರಣದೊಳಗೆ ಪೆಟ್ರೋಲ್ ಮತ್ತು ಡಿಸೇಲ್ ವಾಹನಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ. ಕೇವಲ ಸೈಕಲ್ಗೆ ಮಾತ್ರ ಕ್ಯಾಂಪಸ್ನೊಳಗೆ ಪ್ರವೇಶ ಒದಗಿಸಿದೆ.
ಪಾರೂಲ್ ಯೂನಿವರ್ಸಿಟಿ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಲ್ಲಿ ಆರೋಗ್ಯಯುತ ಜೀವನಶೈಲಿಯನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮವನ್ನು ಕೈಗೊಂಡಿದ್ದಾಗಿ ಅದು ಹೇಳಿದೆ. ಅಲ್ಲದೇ, 100 ಸೈಕಲ್ಗಳನ್ನು ತನ್ನ ಆವರಣದಲ್ಲಿಟ್ಟಿದೆ. ವಿದ್ಯಾರ್ಥಿಗಳು ಬಾಡಿಗೆಯನ್ನು ನೀಡಿ ದಿನ, ತಿಂಗಳುಗಳ ಕಾಲ ಈ ಸೈಕಲ್ನ್ನು ಬಳಸಬಹುದಾಗಿದೆ. ಇಲ್ಲವಾದರೆ, ನಡೆದಾಡಿಕೊಂಡೇ ಕ್ಯಾಂಪಸ್ ಸುತ್ತಾಡಬೇಕು.
120 ಎಕರೆ ಪ್ರದೇಶದಲ್ಲಿ ಈ ವಿಶ್ವವಿದ್ಯಾಲಯವಿದ್ದು, ಒಂದು ಕಡೆಯಿಂದ ಇನ್ನೊಂಡು ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಲು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೂರು ನೀಡಿದ ಹಿನ್ನಲೆಯಲ್ಲಿ ಹೆಕ್ಸಿ ಬೈಕ್ಗಳನ್ನು ಪರಿಚಯಿಸಲು ಮುಂದಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಗುಜರಾತ್ ಸರ್ಕಾರ, ಮಕ್ಕಳ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುವ ಪ್ಲೇಯರ್ಅನ್ನೋನ್ಸ್ ಬ್ಯಾಟಲ್ಗ್ರೌಂಡ್ ಎಂದು ಕರೆಯಲ್ಪಡುವ ಮೊಬೈಲ್ ಗೇಮ್ ನಿಷೇಧಿಸುವಂತೆ ಸುತ್ತೋಲೆ ಹೊರಡಿಸಿದ್ದನ್ನು, ಕಳೆದ ವರ್ಷ ಗ್ರಾಮದ ಮದುಮಗನೊಬ್ಬ ಮದುಮಗಳ ಮನೆಗೆ ಸೈಕಲ್ನಲ್ಲೇ ದಿಬ್ಬಣ ಹೊರಟು ಪರಿಸರ ಜಾಗೃತಿ ಮೂಡಿಸಿದ್ದನ್ನು ಈ ಸಂದರ್ಭದಲ್ಲಿ ಜ್ಞಾಪಿಸಬಹುದಾಗಿದೆ.
ಇನ್ನೊಂದೆಡೆ, ಸೈಕಲ್, ಎಲೆಕ್ಟ್ರಿಕ್ ಸೈಕಲ್ಗಳ ಬೆಲೆಯನ್ನೂ ತಗ್ಗಿಸಿ ಅವುಗಳ ಬಳಕೆಗೆ ಹೆಚ್ಚಿನ ಉತ್ತೇಜನಗಳನ್ನು ನೀಡುವ ಕಾರ್ಯವೂ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.