2018-ನರೇಂದ್ರ ಮೋದಿ ಸರ್ಕಾರದಡಿ ಅಂತ್ಯಗೊಂಡ ಮತ್ತೊಂದು ಮಹತ್ವದ ವರ್ಷ. ಈ ವರ್ಷದಲ್ಲಿ, ಮೋದಿ ನೇತೃತ್ವದಲ್ಲಿ ಭಾರತ ಸಾಧಿಸಿದ ಹಲವು ಮಹತ್ವದ ಮೈಲಿಗಲ್ಲುಗಳು ಸದಾ ನೆನಪಿನಲ್ಲಿ ಇರುವಂತಹುದು. 2018ರಲ್ಲಿ ಭಾರತ ಮಹತ್ವದ ಸಾಧನೆಗಳನ್ನು ಮಾಡಿದೆ, ಆದರೆ ಅದರಲ್ಲಿ 12 ಪ್ರಮುಖವಾದವುಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಇವುಗಳು ದೇಶಕ್ಕೆ ಅತ್ಯಂತ ಮಹತ್ವದ ಮೈಲಿಗಲ್ಲುಗಳಾಗಿವೆ.
1. ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು
ನಾಲ್ಕು ವರ್ಷಗಳ ಮೋದಿ ಆಡಳಿತದಲ್ಲಿ ಆರ್ಥಿಕತೆ ವೇಗದ ಪ್ರಗತಿಯನ್ನು ಸಾಧಿಸಿದೆ. ಅಲ್ಲದೆ ಭಾರೀ ಜಿಗಿತವನ್ನು ಕಂಡು ವಿಶ್ವದ ಆರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವಬ್ಯಾಂಕ್ ಮೋದಿ ಸರ್ಕಾರದ ಸಾಧನೆಯನ್ನು ಕೊಂಡಾಡಿದ್ದು, ಸರ್ಕಾರ ತೆಗೆದುಕೊಂಡ ಹಲವಾರು ಸುಧಾರಣಾ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದಿದೆ.
2. ಆಯುಷ್ಮಾನ್ ಭಾರತ್, ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆಯ ಘೋಷಣೆ
ವಿಶ್ವದ ಇತಿಹಾಸದಲ್ಲೇ ಯಾವುದೇ ರಾಷ್ಟ್ರ ಘೋಷಿಸದಂತಹ ಅತೀ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆ ಇದಾಗಿದೆ. ಈ ಯೋಜನೆ ದೇಶದ 50 ಕೋಟಿ ಜನರನ್ನು ಒಳಗೊಳ್ಳಲಿದೆ ಮತ್ತು ಅವರ ಹಲವಾರು ಸಾಧಾರಣ ಮತ್ತು ಗಂಭೀರ ಕಾಯಿಲೆಗಳ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ ಎಂಬುದೇ ಒಂದು ರೋಚಕ ಸಂಗತಿ. ಪ್ರತಿ ಬಡವನಿಗೂ ಆರೋಗ್ಯ ಸೇವೆ ಕೈಗೆಟಕುವಂತಿರಬೇಕು ಎಂಬ ಉದ್ದೇಶದೊಂದಿಗೆ ತಂದ ಯೋಜನೆ ಇದಾಗಿದೆ. ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ ‘ಲ್ಯಾನ್ಸ್ಲಾಟ್’ ಈ ಯೋಜನೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಮೋದಿಯನ್ನು ಕೊಂಡಾಡಿದೆ. ಪ್ರತಿ ಭಾರತೀಯನ ಆರೋಗ್ಯ ಸೇವೆಗೆ ಆದ್ಯತೆ ನೀಡಿದ ಮೊದಲ ಪ್ರಧಾನಿ ಮೋದಿ ಎಂದಿದೆ.
3. ಪೋಸ್ಕೋ ಕಾಯ್ದೆ ತಿದ್ದುಪಡಿ
ನರೇಂದ್ರ ಮೋದಿಯವರ ಪ್ರತಿ ಯೋಜನೆಯಲ್ಲೂ ಮಹಿಳಾ ಸಬಲೀಕರಣಕ್ಕೆ ಆದ್ಯತೆಯನ್ನು ನೀಡಲಾಗಿದೆ. ’ಬೇಟಿ ಬಚಾವೋ ಬೇಟಿ ಪಡಾವೋ’ಗೆ ಅವರು ನೀಡಿದ ಕರೆ ಅದ್ಭುತ ಯಶಸ್ಸನ್ನು ಕಂಡಿದೆ. ಭಾರತದ ಪುತ್ರಿಯರಿಗೆ ನಿರ್ಭೀತ ಸಮಾಜವನ್ನು ಸೃಷ್ಟಿಸಿ ಕೊಡಲು ಕಟಿಬದ್ಧರಾಗಿರುವ ಅವರು, ಪೋಸ್ಕೋ (ಲೈಂಗಿಕ ದೌರ್ಜನ್ಯದ ಮಕ್ಕಳ ರಕ್ಷಣೆ)ಕಾಯ್ದೆ ತಿದ್ದುಪಡಿಯನ್ನು ತಂದರು. ಹೆಣ್ಣು ಮಕ್ಕಳ ಮೇಲೆ ಪೈಶಾಚಿಕ ಕೃತ್ಯ ಎಸಗುವ ಧುರುಳರಿಗೆ ಇದು ಮರಣದಂಡನೆಯನ್ನು ವಿಧಿಸಲು ಅವಕಾಶ ಮಾಡಿಕೊಡುತ್ತದೆ.
4. ಶೇ.100ರಷ್ಟು ಗ್ರಾಮಗಳ ವಿದ್ಯುದೀಕರಣ
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ದೇಶದ 18,452 ಗ್ರಾಮಗಳು ಕತ್ತಲಲ್ಲಿದ್ದವು. ಟ್ರಾನ್ಸ್ಫಾರ್ಮರ್ಗಳಾಗಲಿ, ಎಲೆಕ್ಟ್ರಿಸಿಟಿ ಕೇಬಲ್ಗಳಾಗಲಿ ಇಲ್ಲಿರಲಿಲ್ಲ. ಈ ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶಗಳಲ್ಲಿದ್ದವು, ಈಶಾನ್ಯ ಭಾಗದ ಗುಡ್ಡಗಾಡುಗಳಲ್ಲಿದ್ದವು. ಅಲ್ಲಿಗೆ ಟ್ರಾನ್ಸ್ಫಾರಮರ್ ಅಥವಾ ಎಲೆಕ್ಟ್ರಿಸಿಟಿ ಕೇಬಲ್ಗಳನ್ನು ಕೊಂಡೊಯ್ಯುವುದು ತೀರಾ ಕಷ್ಟಕರವಾಗಿತ್ತು. ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 4 ವರ್ಷ 12 ದಿನಗಳೊಳಗೆ, ಡೆಡ್ಲೈನ್ಗಿಂತಲೂ ಮುಂಚಿತವಾಗಿಯೇ 18,452 ಗ್ರಾಮಗಳಿಗೂ ವಿದ್ಯುತ್ ಸಂಪರ್ಕವನ್ನು ನೀಡಿ, ಬೆಳಗುವಂತೆ ಮಾಡಿದೆ.
5.ಈಸ್ಟರ್ನ್ ಪೆರಿಫಿರಲ್ ಎಕ್ಸ್ಪ್ರೆಸ್ ವೇ ಮತ್ತು ದೆಹಲಿ ಮೀರತ್ ಎಕ್ಸ್ಪ್ರೆಸ್ ವೇ:
ವಿಳಂಬವನ್ನು ಕಾಣುತ್ತಿದ್ದ ಈ ಎರಡು ಅತ್ಯಂತ ಅವಶ್ಯಕ ಯೋಜನೆಗಳು ಮೋದಿ ಸರ್ಕಾರ ಬಂದ ಬಳಿಕ ಲೋಕಾರ್ಪಣೆಗೊಂಡಿತು. ದೆಹಲಿಯ ಟ್ರಾಫಿಕ್ ದಟ್ಟಣೆ ಕಡಿಮೆಗೊಳಿಸುವ ಮತ್ತು ಮಾಲಿನ್ಯ ನಿಯಂತ್ರಿಸುವ ಸಲುವಾಗಿನ ಮಹತ್ವದ ಯೋಜನೆ ಇದಾಗಿತ್ತು. ಹಿಂದಿನ ಸರ್ಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸೋಮಾರಿತನ ತೋರಿಸಿದ್ದವು. ಆದರೆ ಮೋದಿ ಸರ್ಕಾರ ಕ್ಷಿಪ್ರವಾಗಿ ಕಾಮಗಾರಿ ಮುಗಿಸಿ ಲೋಕಾರ್ಪಣೆಗೊಳಿಸಿತು.
6. 57 ವರ್ಷದ ಇತಿಹಾಸದಲ್ಲೇ ಅತ್ಯುತ್ತಮ ಸುರಕ್ಷತೆಯನ್ನು ದಾಖಲಿಸಿದ ಭಾರತೀಯ ರೈಲ್ವೇ
ರೈಲು ಪ್ರಯಾಣಿಕರಿಗೆ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ. ಪ್ರಧಾನಿ ಮೋದಿ ಮತ್ತು ರೈಲ್ವೇ ಸಚಿವ ಪಿಯೂಶ್ ಗೋಯಲ್ ತೆಗೆದುಕೊಂಡ ಸುರಕ್ಷತಾ ಕ್ರಮಗಳು ಈಗ ಫಲ ನೀಡಲು ಆರಂಭಿಸಿವೆ. 2018ರಲ್ಲಿ ಭಾರತೀಯ ರೈಲ್ವೇ ಅತೀ ಕಡಿಮೆ ಅಪಘಾತಗಳನ್ನು ಕಾಣುವ ಮೂಲಕ, 57 ವರ್ಷದ ಇತಿಹಾಸದಲ್ಲೇ ಹೆಚ್ಚಿನ ಸುರಕ್ಷತೆಯನ್ನು ಹೊಂದುವ ದಾಖಲೆ ಬರೆದಿದೆ. ಪ್ರಸ್ತುತ ವರ್ಷದಲ್ಲಿ ಶೂನ್ಯ ಅಪಘಾತದ ಗುರಿಯನ್ನು ಹೊಂದಲಾಗಿದೆ.
7. ದೇಶಭ್ರಷ್ಟ ಆರ್ಥಿಕ ಅಪರಾಧಿ ಮಸೂದೆ
ಹಣಕಾಸು ವಂಚನೆಗಳನ್ನು ಎಸಗಿ ಬಳಿಕ ದೇಶ ಬಿಟ್ಟು ಓಡಿಹೋದ ವಂಚಕರ ಇತಿಹಾಸ ಭಾರತದಲ್ಲಿ ಸಾಕಷ್ಟಿದೆ. ಆದರೆ ಅವರ ಕಂಪನಿ, ಆಸ್ತಿಗಳು ಭಾರತದಲ್ಲಿ ಸುರಕ್ಷಿತವಾಗಿರುತ್ತಿದ್ದು, ಅದರ ಲಾಭಗಳೂ ಅವರ ಕೈಸೇರುತ್ತಿತ್ತು. ಭಾರತಕ್ಕೆ ವಂಚಿಸಿ ವಿದೇಶದಲ್ಲಿ ಅವರು ಆರಾಮವಾಗಿ ಇರುತ್ತಿದ್ದರು. ಆದರೆ ನರೇಂದ್ರ ಮೋದಿ ಸರ್ಕಾರ ತಂದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಯಿಂದಾಗಿ, ದೇಶ ತೊರೆದಿರುವ ಹಣಕಾಸು ವಂಚಕರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗುತ್ತಿದೆ, ಅದು ಕೂಡ ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದೆ. ಭವಿಷ್ಯದಲ್ಲಿ ಹಣಕಾಸು ವಂಚನೆ ಎಸಗಲು ಬಯಸುವವರಿಗೆ ಇದರ ಮೂಲಕ ಭಯ ಹುಟ್ಟಿಸಲಾಗಿದೆ.
8. ಜಿಡಿಪಿ ಪ್ರಗತಿ ದರ ಶೇ 8.2ರ ಗಡಿಯನ್ನು ತಲುಪಿದೆ:
ಸರ್ಕಾರದ ಎಲ್ಲಾ ರಚನಾತ್ಮಕ ಸುಧಾರಣೆಗಳು ಫಲಿತಾಂಶವನ್ನು ನೀಡುತ್ತಿವೆ. 2018-19ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.8.2ರಷ್ಟು ಪ್ರಗತಿಯನ್ನು ದಾಖಲಿಸಿದೆ. ಆರ್ಥಿಕತೆಗೆ ನಡೆಸಿದ ಹಲವಾರು ಶಸ್ತ್ರಚಿಕಿತ್ಸೆಗಳಿಂದ ಟ್ಯೂಮರ್ನ್ನು ನಿರ್ಮೂಲನೆ ಮಾಡಲಾಗಿದೆ. ಭಾರತದ ಈಗ ವಿಶ್ವದ ಅತೀ ವೇಗದ ಆರ್ಥಿಕತೆ ಎನಿಸಿಕೊಂಡಿದೆ.
9. ಭಾರತದ ಮೊದಲ ಹಿಮಾಲಯನ್ ಏರ್ಪೋರ್ಟ್-ಸಿಕ್ಕಿಂನ ಪಯ್ಯೋಂಗ್ ಏರ್ಪೋರ್ಟ್ ಆರಂಭ, ಈಶಾನ್ಯಕ್ಕೆ ಅತೀದೊಡ್ಡ ಉಡುಗೊರೆ:
ಎಲ್ಲರಿಗೂ ವಿಮಾನಯಾನ ಸಿಗುವಂತಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು. ಅದೇ ಕಾರಣಕ್ಕೆ ಉಡಾನ್ ಯೋಜನೆಯನ್ನು ಅವರು ಆರಂಭಿಸಿದರು, ಸಮಸ್ತ ಭಾರತೀಯರಿಗೂ ದೊಡ್ಡ ಕನಸನ್ನು ಕಾಣುತ್ತಿರುವ ಮೋದಿ, ಈಶಾನ್ಯ ಭಾಗದ ಜನರನ್ನು ಬಿಟ್ಟಾರೆಯೇ? ಅವರಿಗಾಗಿ ಸಿಕ್ಕಿಂನಲ್ಲಿ ಪಕ್ಯೋಂಗ್ ಏರ್ಪೋರ್ಟ್ ಕಾಮಗಾರಿ ತ್ವರಿತಗೊಳಿಸಿ ಅದನ್ನು 2018ರಲ್ಲಿ ಲೋಕಾರ್ಪಣೆಗೊಳಿಸಿದರು.
10. ವಿಶ್ವಬ್ಯಾಂಕ್ನ ಸುಲಲಿತ ಉದ್ಯಮ ರ್ಯಾಂಕಿಂಗ್ನಲ್ಲಿ 77ನೇ ಸ್ಥಾನಕ್ಕೆ ಜಿಗಿತ:
ವಿಶ್ವಬ್ಯಾಂಕ್ನ ಸುಲಲಿತ ಉದ್ಯಮ ರ್ಯಾಂಕಿಂಗ್ನಲ್ಲಿ ಭಾರತ 23 ರ್ಯಾಂಕ್ಗಳ ಭರ್ಜರಿ ಜಿಗಿತವನ್ನು 2018ರಲ್ಲಿ ಕಂಡಿದೆ. ಭಾರತಕ್ಕೆ ಈ ಪಟ್ಟಿಯಲ್ಲಿ 77ನೇ ಸ್ಥಾನ ಸಿಕ್ಕಿದೆ. 2014ರಿಂದ 2018ರವರೆಗೆ ಭಾರತ ಕಂಡ ಒಟ್ಟು ಜಿಗಿತ 65 ರ್ಯಾಂಕ್. 2014ರಲ್ಲಿ ಭಾರತ 142ನೇ ಸ್ಥಾನದಲ್ಲಿತ್ತು. ಮೋದಿಯವರು ತೆಗೆದುಕೊಂಡ ಸುಧಾರಣಾ ಕ್ರಮಗಳಾದ ಜಿಎಸ್ಟಿ, ಅಪನಗದೀಕರಣ, ಐಬಿಸಿಗಳಿಗೆ ವಿಶ್ವವೇ ಭೇಷ್ ಎಂದಿತ್ತು, ಇದೊಂದು ಐತಿಹಾಸಿಕ ಜಿಗಿತ ಎಂದು ಕೊಂಡಾಡಿತು.
11. ಐಎನ್ಎಸ್ ಅರಿಹಂತ್ ತನ್ನ ಮೊದಲ ದಾಳಿ ನಿರೋಧಕ ಕಣ್ಗಾವಲನ್ನು ಪೂರ್ಣಗೊಳಿಸಿತು, ಈ ಮೂಲಕ ಭಾರತ ನ್ಯೂಕ್ಲಿಯರ್ ಪರೀಕ್ಷೆ ಪೂರ್ಣಗೊಳಿಸಿತು
ದಾಳಿ ನಿರೋಧಕ ಕಣ್ಗಾವಲನ್ನು ಪೂರ್ಣಗೊಳಿಸುವ ಮೂಲಕ ಐಎನ್ಎಸ್ ಅರಿಹಂತ್, ಭಾರತವನ್ನು ಪೂರ್ಣಪ್ರಮಾಣದ ನ್ಯೂಕ್ಲಿಯರ್ ಬಲಿಷ್ಠ ರಾಷ್ಟ್ರಗಳ ಪಟ್ಟಿಗೆ ಸೇರಿಸಿತು ಮತ್ತು ಭಾರತವನ್ನು ವಾಯು, ಸಮುದ್ರ ಮತ್ತು ಭೂಮಿಯಲ್ಲಿ ಪರಮಾಣು ದಾಳಿ ನಡೆಸಬಲ್ಲ ದೇಶವಾಗಿ ಹೊರಹೊಮ್ಮಿಸಿತು. ಇದು ಭಾರತದ ಹೆಮ್ಮೆಯ ಕ್ಷಣಗಳಲ್ಲಿ ಒಂದಾಗಿದೆ.
12.ಭಾರತದ ಅತೀದೊಡ್ಡ ರೈಲು ಮತ್ತು ರಸ್ತೆ ಬ್ರಿಡ್ಜ್ ಉದ್ಘಾಟನೆಗೊಂಡಿತು:
ಬೋಗಿಬೀಲ್ ಬ್ರಿಡ್ಜ್ನ ನಿರ್ಮಾಣಕ್ಕೆ 1997ರಲ್ಲಿ ಅಡಿಗಲ್ಲು ಹಾಕಲಾಗಿತ್ತು. 2002ರಲ್ಲಿ ಕಾಮಗಾರಿ ಆರಂಭಗೊಂಡಿತು. 2018ರವರೆಗೆ, ಕೇವಲ ಶೇ.58ರಷ್ಟು ಕಾರ್ಯ ಪೂರ್ಣಗೊಂಡಿತ್ತು. ಕಾರ್ಯತಾಂತ್ರಿಕವಾಗಿ ಬಹಳ ಮಹತ್ವದ ಈ ಬ್ರಿಡ್ಜ್ನ ಕಾಮಗಾರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಮೋದಿ ಸರ್ಕಾರ, ಅದರ ಕಾಮಗಾರಿಯನ್ನು ಪೂರ್ಣಗೊಳಿಸಿತು.
ಕೃಪೆ : www.inreportcard.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.