News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉದ್ಯೋಗ ಸೃಷ್ಟಿಯ ಅಂಕಿಅಂಶ-ದುರುದ್ದೇಶದಿಂದ ತಿರುಚಲಾಗುತ್ತಿದೆಯೇ?

2014ರಲ್ಲಿ ಚುನಾವಣಾ ಪ್ರಚಾರ ನಡೆಸಿದ ವೇಳೆ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಕೋಟಿ ಉದ್ಯೋಗವನ್ನು ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಬಳಿಕ ನಡೆದದ್ದೆಲ್ಲ ಇತಿಹಾಸ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತದಲ್ಲಿ ತಪ್ಪು ಹುಡುಕುವ ಕೆಲಸವನ್ನೇ ಪ್ರತಿಪಕ್ಷಗಳು ಮಾಡುತ್ತಿವೆ. ಅವರ ಬಹುಮುಖ್ಯ ಆರೋಪವೆಂದರೆ, ಮೋದಿ ಸರ್ಕಾರ ನೀಡಿದ ಭರವಸೆಯಂತೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂಬುದು. ಮೋದಿ ಆಡಳಿತದಡಿಯಲ್ಲಿ ಆರ್ಥಿಕತೆ ಪ್ರಗತಿಯಾಗುತ್ತಿದೆ, 2019ರಲ್ಲಿ ಭಾರತ ವಿಶ್ವದ ವೇಗದ ಆರ್ಥಿಕತೆಯಾಗಿತ್ತು ಮತ್ತು ಈಗ ಭಾರತ ವಿಶ್ವದ 6ನೇ ಅತೀದೊಡ್ಡ ಆರ್ಥಿಕತೆಯಾಗಿದೆ. ಆದರೆ ಪ್ರತಿಪಕ್ಷಗಳು ಇದನ್ನು ಉದ್ಯೋಗ ರಹಿತ ಪ್ರಗತಿ ಎಂದು ಹಳಿಯುತ್ತಿವೆ. ಪ್ರಗತಿ ದರ ಏರುತ್ತಿದ್ದರೂ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಬೊಬ್ಬಿಡುತ್ತಿವೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ., ನ ವರದಿ ಮುಂದಿಟ್ಟುಕೊಂಡು ಈ ಹೇಳಿಕೆಗಳನ್ನು ನೀಡುತ್ತಿವೆ. ಇದು ಮುಂಬಯಿ ಮೂಲದ ಕಂಪನಿಯಾಗಿದ್ದು, ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿ ಗಮನಾರ್ಹ ಮಟ್ಟದಲ್ಲಿ ಇಳಿಕೆ ಕಂಡಿದೆ ಎಂದು ಇದರ ಅಂಕಿಅಂಶಗಳು ಹೇಳುತ್ತಿವೆ. ಈ ಲೇಖನ, ನಿಖರ ಅಂಕಿಅಂಶ ಮತ್ತು ಅಧ್ಯಯನಗಳ ಮೂಲಕ ಪ್ರತಿಪಕ್ಷಗಳ ವಾದವನ್ನು ಸುಳ್ಳೆಂದು ಸಾಬೀತುಪಡಿಸಿದೆ.

ಆರ್ಥಿಕತೆಯಲ್ಲಿ ಉದ್ಯೋಗದ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಚರ್ಚೆಗಳನ್ನು ಮಾಧ್ಯಮಗಳ ಮೂಲಕ ರುಜುವಾತು ಆಗದ ಹೇಳಿಕೆಗಳನ್ನು ನೀಡಿ ತಿರುಚಲಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯ ಬಗೆಗಿನ ನಿಜವಾದ ಚಿತ್ರಣ ಜನರಿಗೆ ಸಿಗುತ್ತಿಲ್ಲ. ಇತ್ತೀಚಿನ ಬೆಳವಣಿಗೆಯಲ್ಲಿ, ಅಂಕಿಅಂಶಗಳನ್ನು ತಯಾರಿಸುವ ಕಾರ್ಯ ಮಾಡುವ ಥಿಂಕ್ ಟ್ಯಾಂಕ್‌ವೊಂದು, ಕಳೆದ ವರ್ಷದಲ್ಲಿ ಭಾರತದಲ್ಲಿ ಉದ್ಯೋಗ ಮಾಡುವ ಜನರ ಸಂಖ್ಯೆ 10 ಮಿಲಿಯನ್ ಇಳಿಕೆಯಾಗಿದೆ ಎಂದಿದೆ. ಈ ಸಂಖ್ಯೆಗಳನ್ನು ಸಿಎಮ್‌ಐಐ ಎರಡು ತಿಂಗಳಿಗಿಂತ ಮುಂಚಿತವಾಗಿ ಬೇಕಂತಲೇ ಉಲ್ಲೇಖಿಸಿದೆ. 2019ರ ಫೆಬ್ರವರಿಯಲ್ಲಿ ಬಿಡುಗಡೆಗೊಳ್ಳಬೇಕಿದ್ದ 55೦,೦೦೦ ಪ್ರತಿಕ್ರಿಯೆದಾರರನ್ನು ಒಳಗೊಳ್ಳಬೇಕಿದ್ದ ಸಮೀಕ್ಷೆಯನ್ನು, 14೦,೦೦೦ ಪ್ರತಿಕ್ರಿಯೆದಾರರಿಗೆ ಇಳಿಸಿ ಅವಧಿಗೆ ಮುಂಚಿತವಾಗಿಯೇ ವರದಿಯನ್ನು ಬಿಡುಗಡೆಗೊಳಿಸಲಾಗಿದೆ. ನಿಸ್ಸಂಶಯವಾಗಿ ಮುಂಬರುವ ಚುನಾವಣೆಗಳೊಂದಿಗೆ ಇದನ್ನು ಲಿಂಕ್ ಮಾಡುವ ಉದ್ದೇಶದಿಂದಲೇ ಅಪ್ರಬುದ್ಧ ಸಮೀಕ್ಷೆಯನ್ನು ಬಿಡುಗಡೆಗೊಳಿಸಲಾಗಿದೆ.

ಅಟೋಮೊಬೈಲ್ ಸೆಕ್ಟರ್

ಉದ್ಯೋಗದ ಅಂಕಿಅಂಶಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಾದರೆ, ಉದ್ಯೋಗ ಸೃಷ್ಟಿಯಾಗುತ್ತಿರುವ ಮೂಲದಿಂದ ಅಂಕಿಅಂಶವನ್ನು ಅರ್ಥಮಾಡಿಕೊಳ್ಳಬೇಕು, ಉದ್ಯೋಗದ ಅತೀದೊಡ್ಡ ಕೊಡುಗೆದಾರರಲ್ಲಿನ ಬದಲಾವಣೆಯನ್ನು ಗಮನಿಸಬೇಕು. ಸಾರಿಗೆ ವಲಯ ಭಾರತದ ಅತೀದೊಡ್ಡ ಉದ್ಯೋಗ ಸೃಷ್ಟಿಕರ್ತ. ಮೋಹನ್‌ದಾಸ್ ಪೈ ಮತ್ತು ಯಶ್ ಬೈದ್ ಈ ಆಯಾಮದಲ್ಲಿ ಅಧ್ಯಯನವನ್ನು ನಡೆಸಿದ್ದಾರೆ. ವಾಣಿಜ್ಯ, ಪ್ರಯಾಣಿಕ, ತ್ರಿಚಕ್ರ, ಟ್ರ್ಯಾಕ್ಟರ್ ವಾಹನಗಳ ಸಂಬಂಧಿತ ಕಾರ್ಯಗಳು ಸೃಷ್ಟಿಸಿದ ಒಟ್ಟು ಉದ್ಯೋಗಗಳನ್ನು ಇವರು ಲೆಕ್ಕಹಾಕಿದ್ದಾರೆ. ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫೆಕ್ಚರ್, ಟ್ರ್ಯಾಕ್ಟರ್ ಮತ್ತು ಮೆಕನಿಸಂ ಅಸೋಸಿಯೇಶನ್ ಮೂಲಗಳನ್ನು ಅಂಕಿಅಂಶಕ್ಕೆ ಬಳಸಿಕೊಂಡಿದ್ದಾರೆ. ಭಾರತದಲ್ಲಿ ಮಾರಾಟವಾಗುವ ಪ್ರತಿ ವಾಹನವೂ ಉದ್ಯೋಗ ಸೃಷ್ಟಿಸುತ್ತದೆ. ವಾಣಿಜ್ಯ ವಾಹನ ಎರಡು ಉದ್ಯೋಗ, ರಿಕ್ಷಾಸರಾಸರಿ 105 ಉದ್ಯೋಗವನ್ನು ಸೃಷ್ಟಿಸುತ್ತದೆ.

ಟಿವಿ ಮೋಹನ್ ದಾಸ್ ಪೈ ಮತ್ತು ಯಶ್ ಬೈದ್ ಅವರು ಫಿನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ಲೇಖನಗಳ ಪ್ರಕಾರ, 2018ರ ಹಣಕಾಸು ವರ್ಷದಲ್ಲಿ ಸಾರಿಗೆ ವಲಯದಲ್ಲಿ 34 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2019ರ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ 28 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾಫೆಕ್ಚರಿಂಗ್ ಮತ್ತು ಟ್ರ್ಯಾಕ್ಟರ್ ಆಂಡ್ ಮೆಕಾನಿಝೇಶನ್ ಅಸೋಸಿಯೇಶನ್‌ನ ಅಂಕಿಅಂಶಗಳು ಉದ್ಯೋಗ ಸೃಷ್ಟಿಯ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುತ್ತವೆ.

ಕಳೆದ ಕೆಲವು ತಿಂಗಳುಗಳಿಂದ, ಈ ಸರ್ಕಾರದಡಿ ಸೃಷ್ಟಿಯಾದ ಉದ್ಯೋಗಗಳ ಬಗ್ಗೆ ಹಲವಾರು ಅಂಕಿಅಂಶಗಳು ಬರುತ್ತಿವೆ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷ ಮೋದಿ ಸರ್ಕಾರದ ಮೇಲೆ ದಾಳಿ ನಡೆಸುತ್ತಿವೆ ಮತ್ತು ಮುಂದಿನ ಚುನಾವಣೆಯಲ್ಲೂ ಇದನ್ನೇ ಅಸ್ತ್ರವನ್ನಾಗಿಸಲು ನಿರ್ಧರಿಸಿದೆ. ಈ ಹಿಂದೆ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಮೈತ್ರಿಯಾಗಿರುವ ಥಿಂಕ್ ಟ್ಯಾಂಕ್ ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕನಾಮಿ’ಯು ಉದ್ಯೋಗ ಸೃಷ್ಟಿಯ ಬಗ್ಗೆ ಅಪ್ರಬುದ್ಧ ವರದಿಯನ್ನು ಪ್ರಕಟಿಸಿದ್ದು, ಮೋದಿ ಸರ್ಕಾರವನ್ನು ಹಳಿಯುವುದು ಅದರ ಮುಖ್ಯ ಉದ್ದೇಶವಾಗಿತ್ತು. ಡಿಸೆಂಬರ್‌ನಲ್ಲಿ ಸಮೀಕ್ಷೆ ನಡೆಸಿ, 1,40,000 ಸ್ಪಂದನೆದಾರರ ಪ್ರತಿಕ್ರಿಯೆ ಪಡೆದುಕೊಂಡು, ದೇಶದಲ್ಲಿ ಕಳೆದ ವರ್ಷ 1 ಕೋಟಿ ಉದ್ಯೋಗಗಳು ಕಡಿಮೆಯಾಗಿವೆ ಎಂದು ವರದಿಯನ್ನು ಮಾಡಿತು. ಆದರೆ, ಇತರ ಸಮೀಕ್ಷೆ ಮತ್ತು ಅಂಕಿಅಂಶಗಳು ಇದಕ್ಕೆ ವಿರುದ್ಧವಾದ ಫಲಿತಾಂಶವನ್ನು ತೋರಿಸಿವೆ.

ಮಾನವ ಸಂಪನ್ಮೂಲ & ವೃತ್ತಿಪರ ಉದ್ಯೋಗಗಳು
ಉದ್ಯೋಗಾವಕಾಶವನ್ನು ಸೃಷ್ಟಿಸುವ ಮತ್ತೊಂದು ದೊಡ್ಡ ಕ್ಷೇತ್ರವೆಂದರೆ, ವೃತ್ತಿಪರ ವಲಯ, ಇದರಲ್ಲಿ ಬಹುತೇಕವು ಸಾಂಸ್ಥಿಕ-ಅಲ್ಲದ ಮತ್ತು ಸಾಮಾಜಿಕ ಭದ್ರತಾ ಜಾಲದಿಂದ ಹೊರಗಿರುವ ಉದ್ಯೋಗಗಳಾಗಿವೆ. ತಮ್ಮದೇ ಉದ್ಯಮ ಪ್ರಾರಂಭಿಸುವ ವೃತ್ತಿಪರರು ಪ್ರತಿ ವರ್ಷ ಗಣನೀಯ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಾರೆ ಮತ್ತು ಅವರು ನಮ್ಮ ಲೆಕ್ಕಾಚಾರದ ಅವಿಭಾಜ್ಯ ಭಾಗವಾಗಿರಬೇಕು. ಚಾರ್ಟಡ್ ಅಕೌಂಟೆಂಟ್ಸ್, ಕಂಪೆನಿ ಕಾರ್ಯದರ್ಶಿಗಳು, ಮ್ಯಾನೇಜ್ಮೆಂಟ್ ಅಕೌಂಟೆಂಟ್ಸ್, ವಕೀಲರು, ಫ್ಯಾಶನ್ ಡಿಸೈನರ್‌ಗಳು, ವೈದ್ಯರು, ವಾಸ್ತುಶಿಲ್ಪಿಗಳು, ಯೋಜನಾ ವ್ಯವಸ್ಥಾಪಕರು, ಹಣಕಾಸು ಸಲಹೆಗಾರರು, ವಿಮಾ ಏಜೆಂಟ್‌ಗಳು, ರಿಯಲ್ ಎಸ್ಟೇಟ್ ಬ್ರೋಕರ್‌ಗಳು, ಷೇರು ದಲ್ಲಾಳಿಗಳು ಮತ್ತು ಮಧ್ಯವರ್ತಿಗಳು ಮತ್ತು ಹಲವಾರು ಇತರ ವೃತ್ತಿಪರ ಸೇವಾ ಪೂರೈಕೆದಾರರು ಇತರ ವೃತ್ತಿ ಸೇವೆ ಪೂರೈಕಾದಾರರಾಗಿದ್ದಾರೆ. ನಮ್ಮ ವಿಶ್ವವಿದ್ಯಾನಿಲಯಗಳು ಮತ್ತು ವೃತ್ತಿಪರ ಘಟಕಗಳಿಂದ ರೂಪುಗೊಂಡ ವೃತ್ತಿಪರರು ಶ್ರೀಮಂತ ಮಾನವ ಬಂಡವಾಳದಾರರಾಗಿ ಹೊರಹೊಮ್ಮುತ್ತಿದ್ದಾರೆ.

ಆದಾಯ ತೆರಿಗೆ (ಐಟಿ) ಇಲಾಖೆಯಲ್ಲಿ ಲಭ್ಯವಿರುವ ಅಂಕಿಅಂಶಗಳು ಕಾರ್ಪೊರೇಟ್ ಅಲ್ಲದ ತೆರಿಗೆದಾರರು ಆದಾಯ ತೆರಿಗೆ ಪಾವತಿಸುವ ಬಗೆಗಿನ ವರದಿಯನ್ನು ಹೊಂದಿದೆ. ಅವರು ತಮ್ಮ ತಲೆ ಮೇಲಿನ ಆದಾಯವನ್ನು ಘೋಷನೆ ಮಾಡುತ್ತಾರೆ. ಅವರು ವೇತನ ಪಡೆಯುವವರಲ್ಲ, ಬದಲಿಗೆ ವೇತನ ನೀಡುವವರಾಗಿದ್ದಾರೆ. ಬಹುತೇಕ ಕಾರ್ಪೊರೇಟ್-ಅಲ್ಲದ ವೃತ್ತಿಪರರು 20ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುತ್ತಾರೆ. ಹಣಕಾಸು ವರ್ಷ 2017ರ ವರದಿಯಲ್ಲಿ, ಮಾರ್ಚ್ 31, 2017ರವರೆಗೆ 2 ಮಿಲಿಯನ್ ತೆರಿಗೆದಾರರು ಇದ್ದಾರೆ ಎಂದು ಹೇಳುತ್ತದೆ. ವರ್ಷಕ್ಕೆ ಸುಮಾರು 150,000 ಹೊಸ ತೆರಿಗೆದಾರರ ಸರಾಸರಿ ಬೆಳವಣಿಯಾಗುತ್ತದೆ. 2 ಮಿಲಿಯನ್ ಕಾರ್ಪೋರೇಟ್ ಅಲ್ಲದ ವೃತ್ತಿಪರರು 2019ರ ಮಾರ್ಚ್ ವೇಳೆಗೆ ಇರಲಿದ್ದಾರೆ. ತೆರಿಗೆದಾರರಲ್ಲದ ಹಲವಾರು ವೃತ್ತಿಪರರು ಸದ್ಯಕ್ಕೆ ದೇಶದಲ್ಲಿ ಇದ್ದಾರೆ, ಮುಂದೆ ಅವರೂ ತೆರಿಗೆದಾರರಾಗಿ ಪರಿವರ್ತನೆ ಹೊಂದಬಹುದು.

ಒಬ್ಬ ತೆರಿಗೆದಾರ ಕನಿಷ್ಠ 5 ಉದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದ್ದಾನೆ ಎಂದು ಅಂದಾಜಿಸಿದರೂ 12 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿರುತ್ತದೆ. ಸಿಎ, ವಕೀಲರು, ವೈದ್ಯಕೀಯ ವೃತ್ತಿಪರರು ಒಟ್ಟಾಗಿ 10 ಮಿಲಿಯನ್ ಉದ್ಯೋಗ ಸೃಷ್ಟಿಸುತ್ತಾರೆ ಎಂದು ಅಂದಾಜಿಸಬಹುದಾಗಿ. ಸಾಂಸ್ಥಿಕ ಅಲ್ಲದ ವೃತ್ತಿಪರ ತೆರಿಗೆದಾರರ ಹೆಚ್ಚಳವು ಪ್ರತಿವರ್ಷ ಹೊಸ ವರ್ಷಗಳ ಸಂಖ್ಯೆಯನ್ನು ಆಧರಿಸಿರುತ್ತದೆ. 2014-15 ಮತ್ತು 2018-19ನಲ್ಲಿ ವೃತ್ತಿಪರ ವಲಯವೊಂದೇ 4 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ.

ಉದ್ಯೋಗ ಸೃಷ್ಟಿಯ ವಿವಿಧ ವಲಯಗಳತ್ತ ದೃಷ್ಟಿ ಹಾಯಿಸಿದರೆ ಮೋದಿ ವಿಕಾಸದ ಸರಿಯಾದ ದಾರಿಯಲ್ಲಿದ್ದಾರೆ ಎಂದು ತಿಳಿಯುತ್ತದೆ.

source: inreportcard

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top