ನವದೆಹಲಿ: ವಿವಾದದಲ್ಲಿ ಸಿಲುಕಿರುವ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರು ಇದೀಗ ವಿತ್ತ ಸಚಿವ ಅರುಣ್ ಜೇಟ್ಲಿಯವನ್ನು ಗುರಿಯಾಗಿರಿಸಿ ಆರೋಪಗಳ ಸುರಿಮಳೆಗೈದಿದ್ದಾರೆ.
ಮಾಜಿ ಮುಖ್ಯಸ್ಥ ಎನ್.ಶ್ರೀನಿವಾಸನ್ ಮತ್ತು ಜೇಟ್ಲಿ ಅವರಿಗೆ ಸಂಬಂಧವಿದೆ, ಡಿಡಿಸಿಎ ಹಗರಣದಲ್ಲೂ ಜೇಟ್ಲಿ ಪಾತ್ರವಿದೆ ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಸೇರಿದಂತೆ ಹಲವಾರು ರಾಜಕಾರಣಿ ಮತ್ತು ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ಮೋದಿಯ ಹೊಸ ಟಾರ್ಗೆಟ್ ಜೇಟ್ಲಿಯಾಗಿದ್ದಾರೆ.
ಜೇಟ್ಲಿ ಹೃದಯದಲ್ಲಿ ಕಾಂಗ್ರೆಸ್ ವ್ಯಕ್ತಿಯಾಗಿದ್ದಾರೆ, ಅವರಿಗ ನನ್ನ ಏಕೈಕ ಟಾರ್ಗೆಟ್. ಕೋರ್ಟ್, ಮೀಡಿಯಾ ಎಲ್ಲರೂ ಶ್ರೀನಿವಾಸನ್ ತಪ್ಪಿತಸ್ಥ ಎಂದು ಹೇಳಿದರೂ ಜೇಟ್ಲಿ ಮಾತ್ರ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಬಿಸಿಸಿಐ ಮತ್ತು ಐಪಿಎಲ್ಗೆ ಸಂಬಂಧಿಸಿದಂತೆ ಶ್ರೀನಿವಾಸನ್ ಹಿತಾಸಕ್ತಿ ಸಂಘರ್ಷದಲ್ಲಿ ತೊಡಗಿದ್ದಾರೆ ಎಂದು ತಿಳಿದಿದ್ದರೂ ಜೇಟ್ಲಿ ಅವರ ಬೆಂಬಲಕ್ಕೆ ಯಾಕೆ ನಿಂತರು ಎಂದು ಮೋದಿ ಪ್ರಶ್ನಿಸಿದ್ದಾರೆ.ಬಿಸಿಸಿಐನ ಪ್ರಸ್ತುತ ಕಾರ್ಯದರ್ಶಿ ಅನುರಾಗ್ ಠಾಕೂರ್ ವಿರುದ್ಧವೂ ಮೋದಿ ಕಿಡಿಕಾರಿದ್ದಾರೆ.
ಮೋದಿಯವರಿಗೆ ವೀಸಾ ಪಡೆಯಲು ನೆರವು ನೀಡಿದ ಆರೋಪ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಗ್ಗಂಟಾಗಿ ಪರಿಣಮಿಸಿರುವ ಬೆನ್ನಲ್ಲೇ ಮೋದಿ, ಜೇಟ್ಲಿ ಹೆಸರನ್ನೂ ಹೇಳಿ ಸರ್ಕಾರಕ್ಕೆ ಮತ್ತಷ್ಟು ಮುಜುಗರ ತಂದೊಡ್ಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.