1948ರ ಜನವರಿ
1948ನೇ ವರ್ಷ ಯಾವುದೇ ವೈಭವವಿಲ್ಲದೆ ಆರಂಭಗೊಂಡಿತು. ಚಳಿಗಾಲದ ಕಹಿ ಶೀತಲ ಆ ವೇಳೆ ಅಪ್ಪಳಿಸಿತ್ತು. ಭಾರತ ಸ್ವತಂತ್ರವಾಗಿ ಕೆಲವೇ ತಿಂಗಳು ಆಗಿತ್ತಷ್ಟೆ. ವಿಭಜನೆಯಿಂದಾಗಿ ಭಾರತಮಾತೆಯ 2 ಮಿಲಿಯನ್ ಮಕ್ಕಳು ಹತ್ಯೆಯಾಗಿದ್ದರು, 15 ಮಿಲಿಯನ್ ಜನ ತಮ್ಮ ತಾಯ್ನಾಡನ್ನು ಕಳೆದುಕೊಂಡು ದಿಕ್ಕಾಪಾಲಾಗಿದ್ದರು. ದೆಹಲಿಯೊಂದೇ ಮಿಲಿಯನ್ಗಟ್ಟಲೆ ನಿರಾಶ್ರಿತರ ಆಶ್ರಯ ತಾಣವಾಗಿತ್ತು. ಯುಮನಾ ನದಿಯಲ್ಲಿ ಸಂತ್ರಸ್ಥರ ಕಣ್ಣೀರೇ ತುಂಬಿ ಹೋಗಿತ್ತು, ನಿರಾಶ್ರಿತರ ಶಿಬಿರಗಳಿಂದ ಹೊರಹೊಮ್ಮುತ್ತಿದ್ದ ಆಕ್ರಂದನ ಗಗನವನ್ನು ಆವರಿಸಿಬಿಟ್ಟಿತ್ತು.
ತನ್ನ ಸಮುದಾಯದ ನೂರಾರು, ಸಾವಿರಾರು ಜನರ ನರಹತ್ಯೆ, ಲಾಹೋರ್ನಿಂದ ರೈಲುಗಳಲ್ಲಿ ಆಗಮಿಸುತ್ತಿದ್ದ ಶವಗಳು, ಅಲೆಗಳ ಮೇಲೆ ಅಲೆಗಳು ಅಪ್ಪಳಿಸಿದಂತೆ ಕರುಣಾಜನಕ ಕಥೆಯೊಂದಿಗೆ ಆಗಮಿಸುತ್ತಿದ್ದ ನಿರಾಶ್ರಿತರ ದೃಶ್ಯ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಇಡೀ ಗ್ರಾಮವನ್ನು ಬೆಂಕಿ ಅಚ್ಚಿ ಸುಡಲಾಗಿತ್ತು, ನವಜಾತ ಶಿಶುಗಳನ್ನೂ ಬಿಡದೆ ಮಕ್ಕಳನ್ನು ಹತ್ಯೆ ಮಾಡಲಾಗಿತ್ತು, ಲಕ್ಷಾಂತರ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ವಿಭಜನೆಯ ಬೆಲೆ, ಕೆಲವರ ಉದ್ದೇಶ ರಕ್ತ ಮಾಂಸಗಳ ಚೆಲ್ಲುವಿಕೆಯೊಂದಿಗೆ ಈಡೇರಿತ್ತು.
ಕಾಂಗ್ರೆಸ್ನ್ನು ವಿಸರ್ಜಿಸಿ
ಈ ದಿನಗಳಲ್ಲಿ, ದೇಶ ಇನ್ನೂ ಘನ ಘೋರ ಗಲಭೆಯ ನೋವಿನಲ್ಲಿ ನರಳಾಡುತ್ತಿದ್ದಾಗ, ಮಹಾತ್ಮನ ಮಾತುಗಳು ದಾರಿ ತೋರಿಸಿದವು. ಗಾಂಧೀಜಿಯವರ ವಾರ ಪತ್ರಿಕೆ ಹರಿಜನ್, ಮಹಾತ್ಮನ ಈ ಮಾತುಗಳನ್ನು ಪ್ರಕಟಿಸಿತು
“ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ರೂಪಿಸಿದ ಮಾದರಿಯಲ್ಲಿ ಭಾರತ ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ, ಕಾಂಗ್ರೆಸ್ ತನ್ನ ಈಗಿನ ಆಕಾರ ಮತ್ತು ವಿಧಾನದಲ್ಲಿ ಮುಂದೆ ಅದರ ಬಳಕೆ ಸಾಧ್ಯವಿಲ್ಲ. ನಗರಗಳಿಂದ ದೂರವಿರುವ 700 ಸಾವಿರ ಗ್ರಾಮಗಳ ವಿಷಯದಲ್ಲಿ ಭಾರತ ಇನ್ನೂ ಸಾಮಾಜಿಕ, ನೈತಿಕ, ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಬೇಕಾಗಿದೆ. ಪ್ರಜಾಪ್ರಭುತ್ವದ ಗುರಿಯ ಕಡೆಗೆ ಭಾರತದ ಪ್ರಗತಿ ಪಥದಲ್ಲಿ ಮಿಲಿಟರಿ ಅಧಿಕಾರದ ಬದಲು ನಾಗರಿಕ ಪ್ರಭುತ್ವಕ್ಕಾಗಿನ ಹೋರಾಟ ನಡೆಯಲಿದೆ. ರಾಜಕೀಯ ಪಕ್ಷ ಮತ್ತು ಕೋಮು ಸಂಘಟನೆಗಳ ಅನಾರೋಗ್ಯಕರ ಸ್ಪರ್ಧೆಯನ್ನು ದೂರವಿಡಬೇಕು. ಇದೇ ಕಾರಣಕ್ಕೆ, ಪ್ರಸ್ತುತ ಇರುವ ಕಾಂಗ್ರೆಸ್ ಸಂಘಟನೆಯನ್ನು ವಿಸರ್ಜಿಸಿ ಮತ್ತು ಲೋಕ ಸೇವಾ ಸಂಘವನ್ನು ಉದಯಿಸಲು ಎಐಸಿಸಿ ಮುಂದಾಗಬೇಕು”
ಲೋಕಸಂಘದ ಸ್ಥಾಪನೆ
ಗಾಂಧೀಜಿಯವರು 1948ರಲ್ಲಿ ಲೋಕ ಸೇವಕ್ ಸಂಘದ ಸಂವಿಧಾನದ ಕರಡನ್ನು ರಚನೆ ಮಾಡಿದರು. ಭಾರತದ ಭವಿಷ್ಯದ ನಾಯಕರಿಗೆ ಅವರು ಸೇವಕ್ ಎಂಬ ಶಬ್ದವನ್ನು ಬಳಸುತ್ತಿದ್ದರು ಮತ್ತು ಪ್ರತಿ ನಾಯಕನೂ ಪಾಲಿಸಬೇಕಾದ ನಿಯಮಗಳನ್ನು ರೂಪಿಸಿದರು, ಅದೆಂದರೆ
1. ಆತ ತಾನೇ ತಯಾರಿಸಿದ ಖಾದಿ ಧರಿಸುವುದು
2. ಪ್ರತಿನಿತ್ಯದ ತನ್ನ ಕೆಲಸದ ದಾಖಲೆಯನ್ನು ಹೊಂದಿರುವುದು
3. ತನ್ನ ಕ್ಷೇತ್ರದೊಳಗಿನ ಪ್ರತಿ ಗ್ರಾಮಸ್ಥರೊಂದಿಗೆ ವೈಯಕ್ತಿಕ ಸಂಪರ್ಕವನ್ನು ಹೊಂದುವುದು
4. ಕೃಷಿ ಮತ್ತು ಕರಕುಶಲಗಳ ಮೂಲಕ ಸ್ವಾವಲಂಬಿ ಮತ್ತು ಸ್ವಸಹಾಯಕತೆಯನ್ನು ಹೊಂದುವಂತೆ ಗ್ರಾಮಗಳನ್ನು ಸಂಘಟಿಸುವುದು.
5. ಗ್ರಾಮೀಣ ಜನರಿಗೆ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ತನ್ನ ಕ್ಷೇತ್ರದಲ್ಲಿ ಅನಾರೋಗ್ಯವನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು.
6. ಗ್ರಾಮೀಣ ಜನರಿಗೆ ಆತ ಶಿಕ್ಷಣದ ವ್ಯವಸ್ಥೆಯನ್ನೂ ಮಾಡಬೇಕು
ಸ್ವಾವಲಂಬಿ ಗ್ರಾಮಗಳ ಗುರಿಯನ್ನು ಸಾಧಿಸುವುದಕ್ಕಾಗಿ ನೇಕಾರರ ಸಂಘಟನೆ, ಗ್ರಾಮೀಣ ಕೈಗಾರಿಕೆ ಸಂಘಟನೆ, ತಲಿಮಿ ಸಂಘ, ಹರಿಜನ ಸೇವಕ್ ಸಂಘ, ಗೋಸೇವಾ ಸಂಘಗಳನ್ನು ಸ್ಥಾಪಿಸಬೇಕು ಎಂದು ಅವರು ಸಲಹೆ ನೀಡಿದ್ದರು.
ಕುಯಿ ಬೊನೊ
ತನ್ನ ಮಾತನ್ನು ಅನುಷ್ಠಾನಕ್ಕೆ ತರುವ ಮೊದಲೇ, ಕಾಂಗ್ರೆಸ್ನ್ನು ವಿಸರ್ಜಿಸುವ ಮೊದಲೇ, ಲೋಕ ಸೇವಕ ಸಂಘವನ್ನು ಆರಂಭಿಸುವ ಮೊದಲೇ ಗಾಂಧೀಜಿ ಹತ್ಯೆಯಾದರು. ತಕ್ಷಣವೇ ಪಶ್ಚಿಮ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ವಿರೋಧಿ ದಂಗೆಗಳೆದ್ದವು, ಅಸಂಖ್ಯಾತ ಬ್ರಾಹ್ಮಣರು ಹತ್ಯೆಯಾದರು, ಹಲವರು ಮನೆ ಮಠ ಕಳೆದುಕೊಂಡರು. ಆದರೆ, ಅದೃಷ್ಟವೆಂದುಕೊಂಡು, ಕಾಂಗ್ರೆಸ್ ನಗೆ ಬೀರಿತು. ಗಾಂಧೀಜಿ ಇಲ್ಲವಾದ ಕಾರಣಕ್ಕೆ ಕಾಂಗ್ರೆಸ್ ಉಳಿದುಕೊಂಡಿತು. ಈ ಆಕಸ್ಮಿಕ, ಮಹಾತ್ಮ ಗಾಂಧೀಜಿಯವರ ಹತ್ಯೆಯಿಂದ ಯಾರಿಗೆ ಲಾಭವಾಯಿತು ಎಂಬ ಗೊಂದಲವನ್ನು ಸೃಷ್ಟಿಸಿತು.
ಕುಯಿ ಬೊನೊ? (ಯಾರ ಲಾಭಕ್ಕಾಗಿ ಇದು?)- ಅತ್ಯಂತ ಪ್ರಮಾಣಿಕ ಮತ್ತು ಬುದ್ಧಿವಂತ ನ್ಯಾಯಾಧೀಶ ಎಂದು ರೋಮನ್ ಜನರಿಂದ ಪರಿಗಣಿತನಾದ ಲೂಸಿಯಸ್ ಕಾಸಿಯಸ್, ಪದೇ ಪದೇ ‘ಯಾರ ಲಾಭಕ್ಕಾಗಿ ಇದು?’ ಎಂದು ಕೇಳುವ ಅಭ್ಯಾಸ ಹೊಂದಿದ್ದನು.
ಕಾಂಗ್ರೆಸ್ ಪಕ್ಷದ ಉತ್ತರಾಧಿಕಾರಿಗಳು ಮಹಾತ್ಮನ ಕೊನೆಯ ಹೆಸರನ್ನು ಪಡೆದುಕೊಂಡರು. ಈ ದೇಶಕ್ಕೆ ಮಹಾತ್ಮ ನೀಡಿದ ನಿಸ್ವಾರ್ಥ ಸೇವೆಯ ಫಲವನ್ನು, ಭಾರತದ ಸ್ವಯಂಘೋಷಿತ ಮೊದಲ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷ ಉಂಡಿತು. ಅತ್ಯಂತ ಕಟ್ಟುನಿಟ್ಟಾಗಿ ಈ ಪಕ್ಷ ಮಹಾತ್ಮನ ಆಜ್ಞೆಗಳಿಂದ ಅಂತರವನ್ನು ಕಾಯ್ದುಕೊಂಡಿತು.
ಸರಳ ಜೀವನ ಶೈಲಿ, ಬಡವರ ಸೇವೆ, ಗೋಸೇವೆ, ನೈರ್ಮಲ್ಯ, ಸ್ವಾವಲಂಬಿ ಗ್ರಾಮ ಎಲ್ಲವೂ ಕೊಳಚೆ ಗುಂಡಿಯನ್ನು ಸೇರಿತು. ನೋಟುಗಳಲ್ಲಿ ಮಹಾತ್ಮನ ಫೋಟೋ ಮುದ್ರಿಸುವ ಮತ್ತು ಅಕ್ಟೋಬರ್ 2 ರಂದು ರಜೆ ಘೋಷಿಸುವ ಮೂಲಕವಷ್ಟೇ ಆತನಿಗೆ ಗೌರವ ಪ್ರದರ್ಶಿಸಲಾಯಿತು. ಮಕ್ಕಳಿಗೆ ಶಾಲಾ ಆವರಣ ಸ್ಚಚ್ಛ ಮಾಡಿ ಅಥವಾ ಸರ್ಕಾರಿ ಉದ್ಯೋಗಿಗಳಿಗೆ ಕಛೇರಿ ಸ್ವಚ್ಛ ಮಾಡಿ ಎನ್ನುವ ಬದಲು ಗಾಂಧೀ ಜಯಂತಿಯಂದು ಅವರಿಗೆ ರಜೆ ಕೊಟ್ಟು, ವಿಶ್ರಾಂತಿ ಪಡೆಯುವಂತೆ ಮಾಡಲಾಯಿತು. ಇದು ಮಹಾತ್ಮನನ್ನು ಪುರಸ್ಕರಿಸುವ ಅಸಮರ್ಪಕ ವಿಧಾನ.
ಜನವರಿ 30 ರಂದು ಗಾಂಧೀಜಿಗೆ ನೀಡುವ ಸಮರ್ಮಕ ಗೌರವವೆಂದರೆ, ಎರಡು ನಿಮಿಷಗಳ ಮೌನಾಚರಣೆ. ಮಹಾತ್ಮನ ಕೊನೆಯ ಹೆಸರು ಬಳಸುವ ಕಾಂಗ್ರೆಸ್ ನಾಯಕರುಗಳಿಗೆ, ಮಹಾತ್ಮನ ಕನಸನ್ನು ನೆರವೇರಿಸುವುದು-ಕಾಂಗ್ರೆಸ್ ವಿಸರ್ಜಿಸುವುದು ಮತ್ತು ಲೋಕ ಸೇವಕರಾಗುವುದು.
References –
1. Lok Sevak Sangh: The Servants of the People – M K Gandhi, Satyagraha Foundation
2. The Great Divide – The violent legacy of Indian Partition. By William Dalrymple
3. 1948 – Brahmin genocides of Maharashtra – R Sooraj Kumar
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.