News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೈಲಾಸ ಯಾತ್ರೆಯ ವೇಳೆ ಚೀನಾ ಸಚಿವರನ್ನು ಭೇಟಿಯಾಗಿದ್ದೆ ಎಂದು ಆಕಸ್ಮಿಕವಾಗಿ ಒಪ್ಪಿಕೊಂಡ ರಾಹುಲ್

ಭುವನೇಶ್ವರ : ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೈಗೊಂಡಿದ್ದ ಕೈಲಾಸ ಯಾತ್ರೆ ಭಾರೀ ಪ್ರಚಾರವನ್ನು ಗಿಟ್ಟಿಸಿಕೊಂಡಿತ್ತು. ಇದೀಗ ಆ ಪ್ರವಾಸದ ವೇಳೆ ತಾನು ಚೀನಾದ ಸಚಿವರುಗಳನ್ನು ಭೇಟಿಯಾದುದ್ದಾಗಿ ಆಕಸ್ಮಿಕವಾಗಿ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ತಾವಾಗಿಯೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಒರಿಸ್ಸಾದಲ್ಲಿ ಇಂದು ಏರ್ಪಡಿಸಲಾಗಿದ್ದ Reimagining India ಟೌನ್ ಹಾಲ್ ಮೀಟ್­ನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವ ವೇಳೆ ಚೀನಾದ ಕೆಲವೊಂದು ಸಚಿವರನ್ನು ಭೇಟಿಯಾದುದಾಗಿ ಅಚಾನಕ್ ಆಗಿ ಹೇಳಿಕೊಂಡಿದ್ದಾರೆ.

ರಾಹುಲ್ ಚೀನಿ ಸಚಿವರನ್ನು ಭೇಟಿಯಾದ ಬಗ್ಗೆ ಇದುವರೆಗೆ ಅಧಿಕೃತ ಹೇಳಿಕೆಯನ್ನು ಕಾಂಗ್ರೆಸ್ ನೀಡಿಲ್ಲ. ಯಾರಿಗೂ ಮಾಹಿತಿ ನೀಡದೆ ಗುಪ್ತವಾಗಿ ವಿದೇಶಿ ಸಚಿವರನ್ನು ಅವರು ಭೇಟಿಯಾದ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ಅಲ್ಲದೇ, ಚೀನಾ ಭಾರತದ ಸ್ನೇಹಿತ ರಾಷ್ಟ್ರವಲ್ಲ, ಹೀಗಿರುವಾಗ ಸರ್ಕಾರದ ಅನುಮತಿ ಇಲ್ಲದೆ ಆ ರಾಷ್ಟ್ರದ ಸಚಿವರನ್ನು ವಿರೋಧ ಪಕ್ಷದ ನಾಯಕನೊಬ್ಬ ಭೇಟಿಯಾದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಸರ್ಕಾರಕ್ಕೆ ರಾಹುಲ್ ಅವರ ಈ ಭೇಟಿಯ ಮಾಹಿತಿ ಇದೆಯೋ ಎಂದು ತಿಳಿದಿಲ್ಲ.

ರಾಹುಲ್ ವಿದೇಶಿ ಗಣ್ಯರನ್ನು ಗುಪ್ತವಾಗಿ ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. 2017ರ ಜೂನ್‌ನಲ್ಲಿ ಚೀನಾದ ಭಾರತ ರಾಯಭಾರಿಯನ್ನು ಭೇಟಿಯಾಗಿದ್ದರು ಆದರೆ ಅದನ್ನು ಬಹಿರಂಗಪಡಿಸಿರಲಿಲ್ಲ. ಕೆಲ ಮಾಧ್ಯಮಗಳು ವರದಿ ಮಾಡಿದಾಗ ಕಾಂಗ್ರೆಸ್ ಅದನ್ನು ಫೇಕ್ ಎಂದಿತ್ತು. ಬಳಿಕ ಚೀನಾ ರಾಯಭಾರ ಕಛೇರಿ ತನ್ನ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿತ್ತು.

2017ರಲ್ಲಿ ಭಾರತ ಮತ್ತು ಚೀನಾ ನಡುವೆ ದೋಕ್ಲಾಂ ಬಿಕ್ಕಟ್ಟು ಉದ್ಭವಿಸಿದ್ದ ವೇಳೆ ರಾಹುಲ್ ಚೀನಾ ರಾಯಭಾರಿಯನ್ನು ಭೇಟಿಯಾಗಿದ್ದರು.

ಇಂದು ರಾಹುಲ್ ಅವರು ಮಾತನಾಡಿದ ವೀಡಿಯೋ ನೋಡಿ, ಅವರು ಚೀನಾ ಅಧಿಕಾರಿಗಳನ್ನು ಭೇಟಿ ಮಾಡಿರುವ ಕುರಿತು ಹೇಳುತ್ತಿರುವುದು ಈ ವೀಡಿಯೋದಲ್ಲಿ timing @ 31.00 min.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top