ವಾರಣಾಸಿ: ಈ ಬಾರಿಯ ಪ್ರವಾಸಿ ಭಾರತೀಯ ದಿವಸ್ನಲ್ಲಿ ಭಾಗವಹಿಸಲು ಬಂದಿರುವ ಅನಿವಾಸಿ ಭಾರತೀಯರು ಕುಂಭಮೇಳಕ್ಕೂ ತೆರಳುತ್ತಿದ್ದು, ಪವಿತ್ರ ಸ್ನಾನಗಳನ್ನು ನೆರವೇರಿಸುತ್ತಿದ್ದಾರೆ. ಮಾತ್ರವಲ್ಲ ಪ್ರಯಾಗ್ ರಾಜ್ ಸಂಗಮದ ಪವಿತ್ರ ನೀರನ್ನು ಬಾಟಲಿಯಲ್ಲಿ ತುಂಬಿಸಿಕೊಂಡೂ ಹೋಗುತ್ತಿದ್ದಾರೆ.
ತಾವು ಇಲ್ಲಿಗೆ ಆಗಮಿಸಿದ ಸವಿನೆನಪು ಮತ್ತು ಪವಿತ್ರ ನೀರನ್ನು ತಮ್ಮವರಿಗೂ ನೀಡುವ ಉದ್ದೇಶದೊಂದಿಗೆ ಅವರು ಸಂಗಮದಿಂದ ನೀರನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
‘ಕುಂಭಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರಿಗೆ ಧನ್ಯವಾದಗಳು’ ಎಂದು ಮಾರಿಷಿಯಶ್ನ ಅನಿವಾಸಿ ಭಾರತೀಯ ರಾಜೇಶ್ ಹೇಳಿದ್ದಾರೆ.
ಅಮೆರಿಕಾದಲ್ಲಿ ವಾಸಿಸುತ್ತಿರುವ ಭಾರತೀಯ ಸಂಜಾತೆ ರಶ್ಮಿ ಶರ್ಮಾ ಅವರೂ, ಪ್ರಯಾಗ್ರಾಜ್ನಲ್ಲಿ ಕುಂಭಮೇಳಕ್ಕಾಗಿ ಮಾಡಿದ ಸಿದ್ಧತೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾಗುವ ಜೀವಮಾನದ ಅವಕಾಶ ಸಿಕ್ಕಿದಕ್ಕೆ ಅತೀವ ಸಂತಸವಾಗುತ್ತಿದೆ ಎಂದಿದ್ದಾರೆ.
ಕುಂಭಮೇಳದಲ್ಲಿ 1480 ಟೆಂಟ್ ರೂಮ್, 50 ಕಾಶಿ ವಿಲ್ಲಾಸ್, 450 ಸರಸ್ವತಿ ಡಿಲಕ್ಸ್ ರೂಮ್, 120 ತ್ರಿವೇಣಿ ಫ್ಯಾಮಲಿ ರೂಮ್ಗಳನ್ನು ಅನಿವಾಸಿ ಭಾರತೀಯರಿಗಾಗಿ ನೀಡಲಾಗಿದೆ.