ಬೆಳ್ತಂಗಡಿ: ವಿಶ್ವ ಯೋಗ ಸಮಾವೇಶಕ್ಕೆ ಉಜಿರೆಯಲ್ಲಿ ಭರದ ಸಿದ್ದತೆ ನಡೆಯುತಿದ್ದು, ಉಜಿರೆ ಸಂಭ್ರಮದಿಂದ ಸಿದ್ದಗೊಂಡಿದೆ. ಉಜಿರೆ ಎನ್.ಸಿ.ಸಿ ವಿಭಾಗದ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಯೋಗ ದಿನದಂದು ಪಾಲ್ಗೊಳ್ಳಲು ತಾಲೂಕಿನ ಮಡಂತ್ಯಾರು, ಪುಂಜಾಲಕಟ್ಟೆ, ಧ. ಮಂ. ಶಾಲೆ ಧರ್ಮಸ್ಥಳ, ಪಾಣೆ ಮಂಗಳೂರು, ಪೆರ್ಣೆ ಮುಂತಾದ ಶಾಲಾ ಕಾಲೇಜಿನ 800ಕ್ಕೂ ಅಧಿಕ ಕೆಡೆಟ್ಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಶನಿವಾರ ಮಧ್ಯಾಹ್ನ ಇವರು ಉಜಿರೆಗೆ ಬಂದು ತಲುಪಿದ್ದು, ಸಾಯಂಕಾಲ 4 ರಿಂದ 5 ಗಂಟೆಯ ತನಕ ನಡೆಯಲಿರುವ ಗ್ರ್ಯಾಂಡ್ ರಿಹರ್ಸಲ್ನಲ್ಲಿ ಪಾಲ್ಗೊಂಡರು. ಜೂ.21ರಂದು ಬೆಳಿಗ್ಗೆ 6.30ಕ್ಕೆ ಕೆಡೆಟ್ಗಳು ಶ್ರೀ ಧ. ಮಂ. ಕನ್ನಡ ಶಾಲಾ ಪ್ರಾಂಗಣದಲ್ಲಿ ಹಾಜರಾಗಲಿದ್ದು, ಈ ಸಂಧರ್ಭದಲ್ಲಿ ಇವರಿಗೆ ಯೋಗ ಚಿಹ್ನೆಯನ್ನೊಳಗೊಂಡ ಸಮವಸ್ತ್ರ ನೀಡಲಾಗುವುದು.
ಸಾಂಕೇತಿಕವಾಗಿ ದೀಪ ಬೆಳಗುವ ಮೂಲಕ ಆರಂಭಗೊಳ್ಳುವ ಕಾರ್ಯಕ್ರಮವನ್ನು ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ.ಯಶೋವರ್ಮ ಉದ್ಘಾಟಿಸಲಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
7 ಗಂಟೆಗೆ ಸರಿಯಾಗಿ ಸಾಮೂಹಿಕ ಯೋಗ ಕಾರ್ಯಕ್ರಮ ಆರಂಭಗೊಳ್ಳಲಿದೆ. 45 ನಿಮಿಷಗಳ ಅವಧಿಯಲ್ಲಿ 19ಕ್ಕೂ ಅಧಿಕ ಆಸನಗಳು ಪ್ರಾರ್ಥನೆ, ಶ್ಲೋಕ ಪಠಣ ಮುಂತಾದವುಗಳು ನಡೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.