ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಒಂದು ಅತೀ ಪ್ರಮುಖ ಅಧ್ಯಾಯವನ್ನು ಭಾರತೀಯ ಇತಿಹಾಸಕಾರರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ಮಾಡಿದ್ದಾರೆ. ಜ.23ರಂದು ಅವರ ಜನ್ಮದಿನ, ಈ ಹಿನ್ನಲೆಯಲ್ಲಿ ಮಹಾನ್ ರಾಷ್ಟ್ರೀಯತಾವಾದಿ ಕ್ರಾಂತಿಕಾರಿಯ ಬದುಕಿನ ಯಾರೂ ಓದದ ಅಧ್ಯಾಯವೊಂದರತ್ತ ನಾವು ಚಿತ್ತ ಹರಿಸೋಣ.
ನೇತಾಜೀ ಅವರ ಜೀವನ ಮತ್ತು ಅವಧಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದರೆ, ಅವರು ಹಿಂದುತ್ವ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಯ ಮನೋಭಾವ ಹೊಂದಿದ್ದ ಶ್ರೇಷ್ಠ ದೇಶಭಕ್ತ ಎಂಬುದು ತಿಳಿದುಬರುತ್ತದೆ. ಸರ್ವೋತ್ಕೃಷ್ಟ ಹಿಂದೂ ಆಗಿ, ಸುಭಾಷ್ ಚಂದ್ರರು ವೇದಾಂತ ಮತ್ತು ಶ್ರೀಮದ್ ಭಗವದ್ಗೀತಾವನ್ನು ಬ್ರಿಟಿಷರ ವಿರುದ್ಧ ಹೋರಾಡಲು ತಮ್ಮ ಪ್ರೇರಣೆ ಎಂದು ಪರಿಗಣಿಸಿದ್ದರು.
ಸ್ವಾತಂತ್ರ್ಯದ ಬಗ್ಗೆ ಸ್ವಾಮಿ ವಿವೇಕಾನಂದರ ಬೋಧನೆಗಳು ಮತ್ತು ಭಾರತೀಯ ತತ್ವಶಾಸ್ತ್ರಗಳ ಬಗ್ಗೆ ಅವರ ಹೊಸ ವಿಶ್ಲೇಷಣೆಗಳು ನೇತಾಜೀ ಅವರನ್ನು ಪರಿವರ್ತಿಸಿದ್ದವು. ಅದೇ ರೀತಿ, ಶ್ರೀ ಅರವಿಂದೋ ಅವರ ಪ್ರೇರಣೆಯೂ ಅವರ ಮೇಲೆ ಸಾಕಷ್ಟಿತ್ತು. ಬಂಕಿಮ್ ಚಂದ್ರ ಚ್ಯಾಟರ್ಜಿಯವರ ಬೋಧನೆಗಳು ಅವರನ್ನು ಅಪರಿಮಿತವಾಗಿ ಸೆಳೆದಿದ್ದವು. ಇವೆಲ್ಲವೂ ಒಟ್ಟಾಗಿ ಅವರ ಸಾಮಾಜಿಕ-ರಾಜಕೀಯ ಹೋರಾಟಕ್ಕೆ ರೂಪ ನೀಡಿದ್ದವು, ಬಾಲ್ಯದಿಂದಲೂ ಧರ್ಮದಿಂದ ಪ್ರೇರಿತಗೊಂಡ ರಾಷ್ಟ್ರೀಯತೆ ಅವರನ್ನು ಸೆಳೆದಿತ್ತು. ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅಡಿಪಾಯದ ಮೂಲ ಸ್ವಾಮಿ ವಿವೇಕಾನಂದ ಸಂದೇಶ ಎಂಬುದು ನೇತಾಜೀಯ ಅಚಲ ನಂಬಿಕೆಯಾಗಿತ್ತು.
ವಿವೇಕಾನಂದರ ಬಗೆಗಿನ ಬೋಸ್ ಮಾತುಗಳು:
‘ಅತ್ಯುತ್ಸಾಹದತ್ತ ಹೋಗದೆ ಸ್ವಾಮಿ ವಿವೇಕಾನಂದರ ಬಗ್ಗೆ ಬರೆಯಲು ಸಾಧ್ಯವಿಲ್ಲ. ಮುಂದಾಗುವ ಪರಿಣಾಮಗಳ ಬಗ್ಗೆ ಯೋಚಿಸದ ಅವರ ತ್ಯಾಗ, ಅನಿಯಂತ್ರಿತ ಚಟುವಟಿಕೆ, ಅಗಾಧ ಪ್ರೀತಿ, ಆಳವಾದ ಮತ್ತು ಬಹುಮುಖ ಪಾಂಡಿತ್ಯ, ಸಮೃದ್ಧ ಭಾವನೆ…. ಇನ್ನೂ ಗಂಟೆಗಟ್ಟಲೆ ನಾ ಹೇಳಬಲ್ಲೆ ಆದರೂ ಆ ಮಹಾನ್ ಪುರಷನಿಗೆ ನ್ಯಾಯ ಒದಗಿಸಲು ವಿಫಲವಾಗುವೆ. ಅವರು ಅತೀ ಶ್ರೇಷ್ಠರು, ಆಳವಾದ ವ್ಯಕ್ತಿತ್ವವುಳ್ಳವರು, ತುಂಬಾ ಸಂಕೀರ್ಣತೆ ಉಳ್ಳವರು. ಉತ್ಕೃಷ್ಟ ಮಟ್ಟದ ಆಧ್ಯಾತ್ಮಿಕತೆಯುಳ್ಳ ಯೋಗಿ, ಸತ್ಯದೊಂದಿಗೆ ನೇರ ಸಂಪರ್ಕವುಳ್ಳವರು, ಮಾನವಕುಲದ ನೈತಿಕತೆ ಮತ್ತು ಆಧ್ಯಾತ್ಮ ಸಬಲೀಕರಣಕ್ಕೆ ಇಡೀ ಜೀವನವನ್ನು ಮುಡುಪಾಗಿಟ್ಟವರು’
ನೇತಾಜೀ ಸುಭಾಷ್ ಚಂದ್ರ ಬೋಸರು ಭಾರತದ ಆಧ್ಯಾತ್ಮ, ಸಂಸ್ಕೃತಿಯ ಬಗೆಗೆ ಅಪಾರ ಗೌರವವುಳ್ಳವರಾಗಿದ್ದರು. ಆ ಗೌರವವೇ ಅವರನ್ನು ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಪ್ರೇರೇಪಿಸಿತು ಎಂಬುದರಲ್ಲಿ ಗೊಂದಲವಿಲ್ಲ.
ಮೂಲ ಲೇಖನ: ಶಾಶ್ವತ್ ಪಾಣಿಗ್ರಹಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.