ನವದೆಹಲಿ: ಮೂರು ವರ್ಷಗಳ ಬಳಿಕ ಭಾರತೀಯ ರೈಲ್ವೇ ಈ ವರ್ಷದ ಗಣರಾಜ್ಯೋತ್ಸವ ಪೆರೇಡ್ಗೆ ವಾಪಾಸ್ ಆಗಲಿದೆ. ‘ಮೋಹನ್ ಟು ಮಹಾತ್ಮ’ ಎಂಬ ಥೀಮ್ನೊಂದಿಗೆ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಬಿಂಬಿಸುವ ಟ್ಯಾಬ್ಲೋದೊಂದಿಗೆ ಪೆರೇಡ್ನಲ್ಲಿ ಭಾಗವಹಿಸಲಿದೆ.
2022ರ ವೇಳೆಗೆ ಕಾರ್ಯಾಚರಿಸಲಿರುವ ಬುಲೆಟ್ ಟ್ರೈನ್ ಹಾಗೂ ಈಗಾಗಲೇ ಸಿದ್ಧಗೊಂಡಿರುವ ಟ್ರೈನ್ 18ನ 3ಡಿ ಇಮೇಜ್ಗಳನ್ನು ಡಿಸ್ಪ್ಲೇ ಮಾಡಲಿದೆ. ಗಾಂಧೀಜಿಯ 6 ಅಡಿ ಎತ್ತರ ಪ್ರತಿಮೆ ಇರಲಿದೆ.
2015ರಲ್ಲಿ ರೈಲ್ವೇ ‘ಇಂಡಿಯನ್ ರೈಲ್ವೇಸ್-ಆನ್ ಫಾಸ್ಟ್ ಟ್ರ್ಯಾಕ್ ಆಫ್ ದಿ ಫ್ಯೂಚರ್’ ಥೀಮ್ನಡಿ ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿತ್ತು. ಬಳಿಕ ರೈಲ್ವೆಯ ಟ್ಯಾಬ್ಲೋ ಅಂತಿಮ ಸುತ್ತಿಗೆ ಬರಲು ವಿಫಲವಾಗಿತ್ತು.
ಇದೀಗ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು 2018ರಲ್ಲಿ ಆಚರಿಸಿದ ಹಿನ್ನಲೆಯಲ್ಲಿ ಅವರ ಜೀವನಚರಿತ್ರೆ ಬಿಂಬಿಸುವ ಟ್ಯಾಬ್ಲೋವನ್ನು ಸಿದ್ಧಪಡಿಸಿದ್ದು, ಇದು ಪೆರೇಡ್ನಲ್ಲಿ ಭಾಗಿಯಾಗಲು ಅನುಮತಿ ಪಡೆದುಕೊಂಡಿದೆ.
source: hindusthantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.