ನೊಯ್ಡಾ: ಕೇವಲ ಮೂರು ಗಂಟೆಯಲ್ಲಿ 69 ಕ್ರಿಮಿನಲ್ಸ್ಗಳನ್ನು ಬಂಧನ ಮಾಡುವ ಮೂಲಕ ಯುಪಿ ಗೌತಮ್ ಬುದ್ಧ ನಗರ ಜಿಲ್ಲೆಯ ಪೊಲೀಸರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಗುರುವಾರ ಮಧ್ಯಾಹ್ನ 12 ಗಂಟೆಗೆ ’ಆಪರೇಶನ್ ಆಲ್ಔಟ್’ನ್ನು ಪೊಲೀಸರು ಆರಂಭಿಸಿ, ಮಧ್ಯಾಹ್ನ 3 ಗಂಟೆಗೆ ಸ್ಥಗಿತಗೊಳಿಸಿದ್ದಾರೆ. ಈ ಅವಧಿಯಲ್ಲಿ ಸಾಕಷ್ಟು ಅಪರಾಧಿಗಳನ್ನು, ಕಾನೂನು ಉಲ್ಲಂಘಕರನ್ನು ವಶಕ್ಕೆ ಪಡೆಯಲಾಗಿದೆ.
ಅಪರಾಧಿಗಳನ್ನು ಹತ್ತಿಕ್ಕುವ ಸಲುವಾಗಿ ಹಿರಿಯ ಪೊಲೀಸ್ ವರಿಷ್ಠ ವೈಭವ್ ಕೃಷ್ಣ ಅವರು ‘ಆಪರೇಶನ್ ಆಲ್ ಔಟ್’ನ್ನು ನೊಯ್ಡಾ, ಗ್ರೇಟರ್ ನೊಯ್ಡಾದಲ್ಲಿ ನಡೆಸಲಾಗಿದೆ.
ಸಮರ್ಪಕ ದಾಖಲೆ ಇಲ್ಲದೆ, ಕಾನೂನನ್ನು ಉಲ್ಲಂಘಿಸಿ ವಾಹನಗಳನ್ನು ಓಡಿಸುತ್ತಿದ್ದ 1,291 ಮಂದಿಗೆ ಚಲನ್ಗಳನ್ನು ಜಾರಿಗೊಳಿಸಲಾಗಿದೆ, ಅವರಿಂದ 90,050 ರೂಪಾಯಿಗಳನ್ನು ದಂಡವಾಗಿ ಸ್ವೀಕರಿಸಲಾಗಿದೆ.
329 ವಾಹನಗಳನ್ನು ವಶದಲ್ಲಿ ಇಟ್ಟುಕೊಳ್ಳಲಾಗಿದೆ. ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ 69 ಮಂದಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆ.