ನವದೆಹಲಿ: ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸುವ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಜನರೇಶನ್ ಸ್ಕೀಮ್(MGNREGS )ಗೆ ಕೇಂದ್ರ ಸರ್ಕಾರ ರೂ.6,084 ಕೋಟಿಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿದೆ.
ಈ ಮೂಲಕ 2018-19ರ ಸಾಲಿನಲ್ಲಿ ಈ ಯೋಜನೆಗೆ ಬಿಡುಗಡೆಗೊಳಿಸಿದ ವಾರ್ಷಿಕ ಮೊತ್ತ ರೂ.61,084ಕ್ಕೆ ಏರಿಕೆಯಾಗಿದೆ. ಇದುವರೆಗೆ ಈ ಯೋಜನೆಗೆ ಬಿಡುಗಡೆಗೊಳಿಸಿದ ಅತ್ಯಧಿಕ ಪ್ರಮಾಣದ ಹಣ ಇದಾಗಿದೆ.
ಸಂಕಷ್ಟದಲ್ಲಿರುವ ರೈತರಿಗೆ, ಗ್ರಾಮೀಣ ವಸತಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು ಒದಗಿಸುವುದು, ವೈಯಕ್ತಿಕ ಆಸ್ತಿ ರಚನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಸಚಿವಾಲಯವು, ಗ್ರಾಮೀಣ ಉದ್ಯೋಗ ಯೋಜನೆಯಡಿ ರೈತರಿಗೆ ಬದುಕಲು ಪರ್ಯಾಯ ಮಾರ್ಗವನ್ನು ಒದಗಿಸಲು ಸಹಾಯ ಮಾಡುತ್ತಿದೆ.
2018ರ ಫೆಬ್ರವರಿಯಲ್ಲಿ ಮಂಡನೆಗೊಳಿಸಲಾದ ಬಜೆಟ್ನಲ್ಲಿ ಮನರೇಗಾಗೆ 55 ಸಾವಿರ ಕೋಟಿಗಳನ್ನು ಮೀಸಲಿಡಲಾಗಿತ್ತು. ಈ ಮೂಲಕ ಸರ್ಕಾರದ ಶ್ರೀಮಂತ ಯೋಜನೆಯನ್ನಾಗಿ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.