News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುವ, ಮಹಿಳಾ ಉದ್ಯಮಿಗಳ ಬದುಕು ಬದಲಾಯಿಸಿತು ಮುದ್ರಾ

ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಮುದ್ರಾ ಯೋಜನೆ ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಉದ್ಯೋಗವಕಾಶಗಳನ್ನು ವೃದ್ಧಿಗೊಳಿಸುವುದರ ಜೊತೆಜೊತೆಗೆ ದೇಶದ ಹಣಕಾಸು ಒಳ್ಳಗೊಳ್ಳುವಿಕೆಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತಿದೆ.

ಪ್ರಧಾನಮಂತ್ರಿ ಮೈಕ್ರೋ ಯುನಿಟ್ ಡೆವಲಪ್‌ಮೆಂಟ್ ಆಂಡ್ ರಿಫಿನಾನ್ಸ್ ಯೋಜನಾ (ಪಿಎಂಎಂವೈ) ಅಥವಾ ಮುದ್ರಾ ಯೋಜನೆ ಕೇಂದ್ರ ಸರ್ಕಾರ ತಂದಿರುವ ಹಲವಾರು ಜನೋಪಯೋಗಿ ಯೋಜನೆಗಳಲ್ಲಿ ಒಂದು. ಉದ್ಯಮಶೀಲತ್ವವನ್ನು ಗುರಿಯಾಗಿಟ್ಟುಕೊಂಡು ಈ ಯೋಜನೆಯನ್ನು ತರಲಾಗಿದೆ.

2015ರ ಎಪ್ರಿಲ್ 8ರಂದು ಆರಂಭಗೊಂಡಿರುವ ಈ ಯೋಜನೆ, ವಾಣಿಜ್ಯ, ಸಣ್ಣ ಫಿನಾನ್ಸ್ ಮತ್ತು ಕೊಆಪರೇಟಿವ್ ಬ್ಯಾಂಕ್, ಮೈಕ್ರೋ ಫಿನಾನ್ಸ್ ಇನ್‌ಸ್ಟಿಟ್ಯೂಶನ್, ನಾನ್ ಬ್ಯಾಂಕಿಂಗ್ ಫಿನಾನ್ಸ್ ಕಂಪನಿ ಮುಂತಾದ ಸಾಲ ಆಧಾತರಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಮುಕ್ತ ಸಾಲವನ್ನು ಕೊಡಿಸುವತ್ತ ಹೆಚ್ಚಿನ ಗಮನ ನೀಡುತ್ತದೆ. ಪ್ರಾಥಮಿಕವಾಗಿ ಈ ಸಾಲವನ್ನು ಕೃಷಿಯೇತರ ಚಟುವಟಿಕೆಗಳಿಗೆ ನೀಡಲಾಗುತ್ತದೆ, ಕುಕುಟೋದ್ಯಮ, ಡೈರಿ ಮುಂತಾದವುಗಳಿಗೆ ಸಾಲ ಸಿಗುತ್ತದೆ. ಕಾರ್ಪೋರೇಟೇತರ ಉದ್ಯಮ ಸಂಸ್ಥೆ ಅಥವಾ ಉತ್ಪಾದನಾ ಘಟಕ, ವ್ಯಾಪಾರಿಗಳು, ಮಹಿಳೆಯರು, ಯುವಕರು, ಸಣ್ಣ ಸಮಯದ ಉದ್ಯಮಿಗಳು ಮುದ್ರಾದ ಅತೀದೊಡ್ಡ ಫಲಾನುಭವಿಗಳಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ, ಉದ್ಯೋಗ ಸೃಷ್ಟಿಸುವುದರ ಜೊತೆಗೆ, ಮುದ್ರಾ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸುತ್ತಿದೆ. ಸೂಕ್ಷ್ಮ ಉದ್ಯಮಿಗಳಿಗೆ ಲಾಸ್ಟ್ ಮೈಲ್ ಕ್ರೆಡಿಟ್ ಡೆಲಿವರಿ ಮತ್ತು ಅನೌಪಚಾರಿಕ ವಲಯದ ಕೆಲವರನ್ನು ಔಪಚಾರಿಕ ಮತ್ತು ತೆರಿಗೆದಾರ ಆರ್ಥಿಕತೆಗೆ ಒಳಪಡಿಸುವಲ್ಲಿ ಇದು ಯಶಸ್ವಿಯಾಗಿದೆ. ಈ ಯೋಜನೆಯ ಶಿಶು ಕೆಟಗರಿಯಡಿ ರೂ.50 ಸಾವಿರದವರೆಗೆ ಸಾಲವನ್ನು ಯಾವುದೇ ಹೆಚ್ಚಿನ ಪ್ರಕ್ರಿಯೆ ಇಲ್ಲದೆ ತ್ವರಿತವಾಗಿ ನೀಡಲಾಗುತ್ತದೆ ಕಿಶೋರ್ ಕೆಟಗರಿಯಡಿ ರೂ.5 ಲಕ್ಷದವರೆಗೆ ಮತ್ತು ತರುಣ ಕೆಟಗರಿಯಡಿ ರೂ.5-10 ಲಕ್ಷದವರೆ ಸಾಲವನ್ನು ನೀಡಲಾಗುತ್ತದೆ.

ಮುದ್ರಾ ಕಾರ್ಡ್-ರುಪೇ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ದೇಶದ ಯಾವುದೇ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್‌ಗಳಲ್ಲಿ ಇದನ್ನು ಬಳಸಬಹುದಾಗಿದೆ.

27 ವರ್ಷದ ಸಾಹಿಲ್ ಗುಪ್ತಾ ಜಮ್ಮುವಿನ ಕನಕ್ ಮಂಡಿಯವರು, ಜಮ್ಮು ವಿಶ್ವವಿದ್ಯಾಲಯದಿಂದ ಇವರು ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ಪದವಿಯ ಬಳಿಕ ಇವರು ಕಂಪನಿಗಳಲ್ಲಿ ದುಡಿಯಲು ಮುಂದಾಗಿದ್ದಾರೆ. ಆದರೆ ಹೆಚ್ಚಿನ ದುಡಿಮೆ, ರಾತ್ರಿ ವೇಳೆಗಳಲ್ಲೂ ದುಡಿಯುವುದು ಕಷ್ಟವೆಂದು ಅರಿತು ಸ್ವಂತ ಉದ್ಯೋಗ ಆರಂಭಿಸಲು ನಿರ್ಧರಿಸಿದ್ದಾರೆ. ಸಣ್ಣ ವಯಸ್ಸಿನಿಂದಲೂ ಉದ್ಯಮಿ ಆಗಬೇಕು ಎಂಬುದು ಇವರ ಕನಸಾಗಿತ್ತು, ಹೀಗಾಗಿ ತಮ್ಮದೇ ಒಂದು ಡಿಸ್ಟ್ರಿಬ್ಯೂಶನ್ ಮತ್ತು ಹೋಲ್‌ಸೇಲ್ ಸಂಸ್ಥೆಯನ್ನು ಆರಂಭಿಸಿದ್ದಾರೆ. ಆದರೆ ಇದಕ್ಕೆ ಹಣ ಹಾಕುವುದೇ ಅವರಿಗೆ ದೊಡ್ಡ ಸವಾಲಾಗಿತ್ತು. ಆಗ ಅವರಿಗೆ ಮುದ್ರಾ ಯೋಜನೆಯ ಫಲಾನುಭವಿಯೂ ಆದ ಅವರ ಸ್ನೇಹಿತ ಮುದ್ರಾದ ಬಗ್ಗೆ ಮಾಹಿತಿ ನೀಡಿದ. ಆತನ ಸಲಹೆಯ ಮೇರೆಗೆ 2018ರ ಮೇನಲ್ಲಿ ಯುಸಿಓ ಬ್ಯಾಂಕ್‌ನಲ್ಲಿ ತರುಣ ಕೆಟರಿಯಡಿ ಅವರು ರೂ.5 ಲಕ್ಷ ಸಾಲವನ್ನು ಪಡೆದುಕೊಂಡರು. ಈಗ ಅವರು ಯಶಸ್ವಿ ಉದ್ಯಮಿಯಾಗಿದ್ದು, 6 ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಹಲವರಿಗೆ ಉದ್ಯೋಗ ನೀಡಿದ್ದಾರೆ. ರುಪೇ ಕಾರ್ಡ್‌ನ್ನು ಬಳಕೆ ಮಾಡುವ ಮೂಲಕ ಕಠಿಣ ಮುಂಗಡ ಪಾವತಿ ಮತ್ತು ನಗದು ದ್ರವ್ಯತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತರಾಗಿದ್ದಾರೆ.

ನನ್ನಂತಹ ಸಣ್ಣ ಉದ್ಯಮಿಗಳಿಗೆ ಮುದ್ರಾ ಯೋಜನೆ ಅತ್ಯಂತ ಸಹಾಯಕವಾಗಿದೆ. ಬಡ್ಡಿದರ ಕೂಡ ಕಡಿಮೆ. ನಾನು ಶೇ8.6ರಷ್ಟು ಬಡ್ಡಿ ಪಾವತಿ ಮಾಡುತ್ತಿದ್ದೇನೆ. ಸಣ್ಣ ಉದ್ಯಮವನ್ನು ಆರಂಭಿಸಿದ ನನ್ನ ಜಿಲ್ಲೆಯ ಸಾಕಷ್ಟು ಯುವಕರಿಗೆ ಮುದ್ರಾ ಯೋಜನೆಯಿಂದ ಬಹಳಷ್ಟು ಪ್ರಯೋಜನವಾಗಿದೆ ಎಂದು ಸಾಹಿಲ್ ಹೇಳುತ್ತಾರೆ.

ಕರ್ನಾಟಕದ ಬಳ್ಳಾರಿಯ ಲಲಿತ ಕುಮಾರ್ ಮಿತ್ತಲ್ ಅವರು ಸಣ್ಣ ಮೊಬೈಲ್ ಸರ್ವಿಸಿಮಗ್ ಸೆಂಟರ್ ನಡೆಸುತ್ತಿದ್ದಾರೆ. ಆದರೆ ಅವರ ಹೃದಯ ಮಾತ್ರ ಹೋಟೆಲ್ ಉದ್ಯಮದತ್ತ ಮಿಡಿಯುತ್ತಿತ್ತು. ತನ್ನದೇ ಆದ ರೆಸ್ಟೋರೆಮಟ್ ತೆರೆಯಬೇಕು ಎಂಬುದು ಅವರ ಆಶಯವಾಗಿತ್ತು. 2017ರಲ್ಲಿ ಒಂದು ರೆಸ್ಟೋರೆಂಟ್ ತೆರೆದರು. ಆದರೆ ಹಣದ ಕೊರತೆಯಿಂದ ಅದು ಮೊಟಕುಗೊಂಡಿತ್ತು. ಆದರೆ ಕೆಲ ತಿಂಗಳುಗಳ ಹಿಂದೆ ಅವರ ಬ್ಯಾಂಕ್ ಉದ್ಯೋಗಿ ಸ್ನೇಹಿತ ಮುದ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡಿದ. ತಕ್ಷಣವೇ ಸಿಂಡಿಕೇಟ್ ಬ್ಯಾಂಕ್ ಸಂಪರ್ಕ ಮಾಡಿದ ಅವರು, ಯಾವುದೇ ಕಷ್ಟಪಡದೆ 10-11 ದಿನಗಳೊಳಗೆ ಕಿಶೋರ ಕೆಟಗರಿಯಡಿ ರೂ.2ಲಕ್ಷ ಸಾಲವನ್ನು ಪಡೆದುಕೊಂಡರು.

ಚೋಲ ಚಾಟ್ಸ್ ಆಂಡ್ ಚೈನೀಸ್ ರೆಸ್ಟೋರೆಂಟ್ ಆರಂಭಿಸಿರುವ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ, ಮಾತ್ರವಲ್ಲ ಪಕ್ಕದಲ್ಲೇ ಜ್ಯೂಸ್ ಸೆಂಟರ್‌ನ್ನೂ ತೆರೆದಿದ್ದಾರೆ. 15 ಮಂದಿಗೆ ಕೆಲಸ ನೀಡಿದ್ದಾರೆ. ಅವರ ಉದ್ಯಮ ಇನ್ನಷ್ಟು ವಿಸ್ತರಣೆಗಳನ್ನು ಕಾಣುವ ನಿರೀಕ್ಷೆ ಇದೆ.

ಮಹಿಳಾ ಉದ್ಯಮಿಗಳಿಗೆ ಉತ್ತೇಜನ

2015ರಲ್ಲಿ ಮುದ್ರಾ ಯೋಜನೆ ಆರಂಭಗೊಂಡ ಬಳಿಕ 12.27 ಕೋಟಿ ಮಂದಿಗೆ ರೂ.6.37 ಲಕ್ಷ ಕೋಟಿ ಸಾಲಗಳನ್ನು ವಿತರಣೆ ಮಾಡಲಾಗಿದೆ.

2017-18ರ ಹಣಕಾಸು ವರ್ಷದಲ್ಲಿ ರೂ.24.46 ಲಕ್ಷ ಕೋಟಿಗೆ ಇದು ತಲುಪಿದೆ, ಇದರಲ್ಲಿ ಶೇ.40ರಷ್ಟು ಸಾಲಗಳನ್ನು ಮಹಿಳಾ ಉದ್ಯಮಿಗಳಿಗೆ ಮತ್ತು ಶೇ.33ರಷ್ಟು ಸಾಲವನ್ನು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯದವರಿಗೆ ಹಂಚಿಕೆ ಮಾಡಲಾಗಿದೆ.

ಸುಮಾರು 4.81 ಕೋಟಿ ಸೂಕ್ಷ್ಮ ಉದ್ಯಮಿಗಳು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. 2015ರಿಂದ ಸುಮಾರು 8.5 ಲಕ್ಷ ಜನರು ರುಪೇ ಡೆಬಿಟ್ ಕಾರ್ಡ್‌ನ್ನು ಬಳಸುತ್ತಿದ್ದಾರೆ. ಎಂಎಸ್‌ಎಂಇ ಸೆಕ್ಟರ್‌ನಲ್ಲಿ 51 ಮಿಲಿಯನ್ ಯುನಿಟ್‌ಗಳು 117 ಮಿಲಿಯನ್ ಜನರಿಗೆ ಉದ್ಯೋಗ ನೀಡಿದೆ. ಅಂದರೆ ಶೇ.40ರಷ್ಟು ದೇಶದ ಕಾರ್ಯಪಡೆಯನ್ನು ಒಳಗೊಂಡಿದೆ. ಕೃಷಿಯೇತರ ಜಿಡಿಪಿ ಮತ್ತು ರಫ್ತಿಗೂ ಇದು ಉತ್ತೇಜನ ನೀಡಿದೆ.

2015ರಿಂದ 200 ಎಂಎಲ್‌ಐ(ಮೆಂಬರ್ ಲೆಂಡಿಂಗ್ ಇನ್‌ಸ್ಟಿಟ್ಯೂಶನ್), 93 ಬ್ಯಾಂಕ್, 32 ಎನ್‌ಬಿಎಫ್‌ಸಿ ಮತ್ತು 6 ಸಣ್ಣ ಫಿನಾನ್ಸ್ ಬ್ಯಾಂಕ್‌ಗಳು 2015ರಿಂದ ಮುದ್ರಾ ಯೋಜನೆಯ ವ್ಯಾಪ್ತಿಗೆ ಬಂದಿವೆ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶಗಳು 2017-18ನೇ ಸಾಲಿನಲ್ಲಿ ಹೆಚ್ಚಿನ ಪ್ರಯೋಜನ ಪಡೆದುಕೊಂಡ ಟಾಪ್ 4 ರಾಜ್ಯಗಳಾಗಿವೆ. ಜಿಲ್ಲಾವಾರು ಬೆಂಗಳೂರು ನಗರ, ಪುಣೆ, ಹೈದರಾಬಾದ್ ಉತ್ತಮ ಪ್ರದರ್ಶನ ನೀಡಿವೆ. ಈಶಾನ್ಯ ಭಾಗವೂ 2017-18ನೇ ಸಾಲಿನಲ್ಲಿ ಶೇ.179ರಷ್ಟು ಪ್ರಗತಿಯನ್ನು ಕಂಡಿವೆ ಎಂದು ಸರ್ಕಾರದ ವಾರ್ಷಿಕ ವರದಿ ತಿಳಿಸಿದೆ.

ಮುದ್ರಾ ಯೋಜನೆಯು ಪಂಜಾಬ್ ಮೊಗಾ ಜಿಲ್ಲೆಯ ದಯಾ ರಾಣಿಯವರಂತಹ ಜೀವನವನ್ನು ಪರಿವರ್ತನೆ ಮಾಡಿದೆ. ಸಿಂಗಲ್ ಪೇರೆಂಟ್ ಆಗಿರುವ ಅವರು ತಮ್ಮ ಮಗನ ಶಿಕ್ಷಣದ ಬಗ್ಗೆ ಹೆಚ್ಚು ಚಿಂತಾಕ್ರಾಂತರಾಗಿದ್ದರು. ಸ್ಥಳಿಯ ಗ್ರಾಮೀಣ ಸ್ವಹಾಯ ಗುಂಪಿನಿಂದ ಉಡುಪು ವಿನ್ಯಾಸಪಡಿಸುವ ತರಬೇತಿಯನ್ನು ಪಡೆದುಕೊಂಡಿದ್ದರು. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಅಧಿಕಾರಿಗಳು ಈ ಗುಂಪಿಗೆ ಭೇಟಿ ನೀಡಿ ಮುದ್ರಾದ ಬಗ್ಗೆ ಮಾಹಿತಿ ನೀಡಿದರು. ದಯಾ ಅವರು 20 ದಿನದೊಳಗೆ ಇಲ್ಲಿ ರೂ.50 ಸಾವಿರ ಶಿಶು ಸಾಲವನ್ನು ಪಡೆದುಕೊಂಡರು.

ಈ ಸಾಲದಿಂದ ಅವರು ಅಲಂಕಾರಿಕ ಅಂಗಡಿ ತೆರೆದರು. ಅದಕ್ಕೆ ನ್ಯೂ ಲೀಸ್ ಆಫ್ ಲೈಫ್, ಅ ಸೆಲ್ಫ್-ವರ್ತ್, ಪ್ರೈಡ್ ಆಂಡ್ ಸೆಲ್ಫ್ ಡಿಪೆಂಡೆನ್ಸ್ ಎಂದು ಹೆಸರಿಟ್ಟರು. ಈಗ ಅವರು ನಾಲ್ವರು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಅವರ ಗ್ರಾಮದಲ್ಲಿ ಸುಮಾರು 20-25 ಮಹಿಳೆಯರು ಮುದ್ರಾ ಲೋನ್ ಪಡೆದುಕೊಂಡಿದ್ದಾರೆ.

ಇಷ್ಟೆಲ್ಲಾ ಯಶಸ್ಸುಗಳ ನಡುವೆ ಸರ್ಕಾರ ಮುಖ್ಯವಾಗಿ ಕಾಳಜಿ ವಹಿಸಬೇಕಾದುದು ನಾನ್ ಪರ್‌ಫಾರ್ಮಿಂಗ್ ಅಸೆಟ್ಗಳ ಬಗ್ಗೆ. ಈಗಾಗಲೇ ನ್ಯಾಷನಲ್ ಪಂಜಾಬ್ ಬ್ಯಾಂಕ್ ವಂಚನೆ, ಇತ್ಯಾದಿ ಹಣಕಾಸು ವಂಚನೆಗಳಿಂದ ಕಷ್ಟಕ್ಕೀಡಾಗಿರುವ ಬ್ಯಾಂಕುಗಳಿಗೆ ಮತ್ತಷ್ಟು ಹೊರೆ ಹೊರಿಸದಂತೆ ನೋಡುವುದು ಸರ್ಕಾರದ ಕರ್ತವ್ಯ. ಮುದ್ರಾ ಸಾಲಗಳು ಸಮರ್ಪಕವಾಗಿ ಮರುಪಾವತಿಯಾಗುವಂತೆ ನೋಡಿಕೊಳ್ಳಬೇಕು, ಆಗ ಮಾತ್ರ ಯೋಜನೆ ತನ್ನ ದೂರದೃಷ್ಟಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿದೆ.

source: dailyhunt

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top