ಮುಂಬಯಿ: ಮಳೆಗಾಲವನ್ನು ಎದುರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ, ನಾಗರಿಕರು ಆತಂಕಕ್ಕೊಳಗಾಗುವುದು ಬೇಡ ಎಂದು ಭರವಸೆ ನೀಡಿದ್ದ ಬೃಹತ್ ಮುಂಬಯಿ ಮಹಾನಗರ ಪಾಲಿಕೆ ನೀರನ್ನು ಹೊರಹಾಕಲು ಬರೋಬ್ಬರಿ 200 ಕೋಟಿ ರೂಪಾಯಿಯ 120 ಪಂಪ್ಗಳನ್ನು ನಗರದಾದ್ಯಂತ ಹಾಕಿತ್ತು. ಆದರೆ ಇದರಲ್ಲಿ ಒಂದೇ ಒಂದೇ ಪಂಪ್ ಕೂಡ ಕಾರ್ಯನಿರ್ವಹಿಸಿಲ್ಲ ಎಂಬುದು ಕಹಿ ಸತ್ಯ.
ಕಳೆದ ಕೆಲ ದಿನಗಳಿಂದ ಸುರಿದ ಮಳೆ ಇಡೀ ಮುಂಬಯಿ ನಗರವನ್ನು ಕೊಳದಂತೆ ಮಾಡಿತ್ತು, ವಾಹನ, ರೈಲ್ವೇ ಸಂಚಾರವನ್ನು ಸ್ಥಗಿತಗೊಳ್ಳುವಂತೆ ಮಾಡಿತ್ತು. ಆದರೆ ಮಳೆಯ ವಿರುದ್ಧ ಹೋರಾಡಲು ಮಹಾ ನಗರಪಾಲಿಕೆ ಮಾಡಿದ ಪ್ರಯತ್ನ ಮಾತ್ರ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
200 ಕೋಟಿ ವೆಚ್ಚದಲ್ಲಿ ಅಳವಡಿಸಿದ ಒಂದೇ ಒಂದು ಪಂಪ್ ಸೆಟ್ಗಳು ಕೂಡ ಕಾರ್ಯ ನಿರ್ವಹಿಸಿಲ್ಲ. ಇದರಿಂದಾಗಿ ಜನ ನೇರಿನಲ್ಲೇ ತೇಲಾಡಿಕೊಂಡು ತಮ್ಮ ತಮ್ಮ ಮನೆ ಸೇರುವಂತಾಯಿತು.
ಶನಿವಾರ ವರುಣನ ಕೃಪೆಯಿಂದ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ರೈಲ್ವೇ, ವಾಹನ ಸಂಚಾರಗಳು ಸರಾಗವಾಗಿ ಸಾಗಿದೆ.
ಮಳೆ ಸುರಿಯುತ್ತಿರುವ ವೇಳೆ ಸಮುದ್ರ ಬದಿಗಳಿಗೆ ಹೋಗದಂತೆ ನಗರಪಾಲಿಕೆ ಎಚ್ಚರಿಕೆಯನ್ನೂ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.