ಶಿರಸಿ: ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳನ್ನು ಯುವ ಜನತೆಗೆ ತಿಳಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಬಾರಿಯೂ ಕೂಡಾ ಜಿಲ್ಲೆಯಲ್ಲಿ ವಿವೇಕ ಬ್ಯಾಂಡ್ ಅಭಿಯಾನವನ್ನು ಜ. 12 ರಿಂದ 26 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿವೇಕ ಬ್ಯಾಂಡ್ ಅಭಿಯಾನದ ಶಿರಸಿ ವಿಭಾಗ ಸಂಚಾಲಕ ಗುರುಪ್ರಸಾದ ಹೆಗಡೆ ತಿಳಿಸಿದರು.
ಅವರು ಗುರುವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ಎಮ್.ಇ.ಎಸ್ ಮಹಾವಿದ್ಯಾಲಯದಲ್ಲಿ ಜ.12ರ ವಿವೇಕಾನಂದ ಜಯಂತಿಯ ದಿನ ಜಿಲ್ಲೆಯ ವಿವೇಕ ಕಂಕಣ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಜ.12ರಿಂದ 26ರ ವರೆಗೆ ಶಿರಸಿ ವಿಭಾಗದ – ಶಿರಸಿ, ಕಾರವಾರ ಮತ್ತು ದಾಂಡೇಲಿ ಜಿಲ್ಲೆಗಳಲ್ಲಿ ಸಮರ್ಥ ಭಾರತ ಸಂಸ್ಥೆಯಿಂದ ವಿವೇಕ ಕಂಕಣ ಅಭಿಯಾನ ನಡೆಯಲಿದೆ. ಶಿರಸಿ ವಿಭಾಗದ ಎಲ್ಲಾ ಪದವಿ, ಡಿಪ್ಲೋಮಾ, ಐಟಿಐ ಕಾಲೇಜುಗಳು ಮತ್ತು ಪ್ರೌಢಶಾಲೆಗಳು ಮತ್ತು ಸಂಘ – ಸಂಸ್ಥೆಗಳಲ್ಲಿ ಎರಡು ವಾರಗಳ ಕಾಲ ಅಭಿಯಾನವು ನಡೆಯಲಿದೆ ಎಂದು ತಿಳಿಸಿದರು.
‘ಸಮರ್ಥ ಭಾರತ’ವು ರಾಜ್ಯ ಮಟ್ಟದ ಸ್ವಯಂಸೇವಾ ಸಂಸ್ಥೆಯಾಗಿದ್ದು ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ವಿವಿಧ ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ‘ವಿವೇಕ ಕಂಕಣ’ವು ಯುವಕ-ಯುವತಿಯರು ಕೈಗಳಲ್ಲಿ ಧರಿಸಬಹುದಾದ ಬ್ಯಾಂಡ್ ಆಗಿದ್ದು ‘ಉತ್ತಮನಾಗು – ಉಪಕಾರಿಯಾಗು’ ಎಂಬ ವಿವೇಕ ವಾಣಿ ಇದರ ಮೇಲೆ ಬರೆದಿರಲಿದೆ ಎಂದು ತಿಳಿಸಿದರು.
ಈ ವರ್ಷದ ಅಭಿಯಾನದಲ್ಲಿ ಪ್ರಮುಖವಾಗಿ ಮೂರು ಸೇವಾ ಕಾರ್ಯಗಳನ್ನು ನಡೆಸುವುದೆಂದು ನಿಶ್ಚಯಿಸಲಾಗಿದೆ. ಗಿಡವೊಂದನ್ನು ಪೋಷಿಸಿ, ನಿಮ್ಮ ಮತ ಚಲಾಯಿಸಿ, ನೇತ್ರದಾನ ಸಂಕಲ್ಪ, ರಕ್ತದಾನ ಮಾಡಿ; ಜೊತೆಗೆ ಸ್ವದೇಶಿ ವಸ್ತು ಬಳಕೆ ಮಾಡಿ ಎಂಬ ಅಂಶವನ್ನು ಪ್ರಮುಖವಾಗಿ ಕೈಗೆತ್ತಿಕೊಳ್ಳಲಾಗಿದೆ, ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಈ ಮೂರು ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದರು.
ಶಾಲಾ – ಕಾಲೇಜುಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸುಮಾರು ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಶಿರಸಿ ವಿಭಾಗದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಅಭಿಯಾನದಲ್ಲಿ ಶಿರಸಿ ಜಿಲ್ಲಾ ಸಂಚಾಲಕರಾಗಿ ನವೀನ ತಾರೇಸರ, ಕಾರವಾರ ಜಿಲ್ಲಾ ಸಂಚಾಲಕರಾಗಿ ಚೇತಕ್ ಶೇಟ್, ದಾಂಡೇಲಿ ಜಿಲ್ಲಾ ಸಂಚಾಲಕರಾಗಿ ರಜತ ಕೊಡ್ಲಗದ್ದೆ ಇರಲಿದ್ದಾರೆ.
ಅಭಿಯಾನದ ತಾಲೂಕಾ ಜವಾಬ್ದಾರಿಗಳು ಇಂತಿವೆ :
ಶಿರಸಿ ಜಿಲ್ಲೆ :
1. ಶಿರಸಿ ನಗರ : ಚಿನ್ಮಯ ಭೀಮನಹಳ್ಳಿ
2. ಶಿರಸಿ ಗ್ರಾಮೀಣ : ಪವನ ಅಡೇಮನೆ
3. ಹೇರೂರು : ಗಣೇಶ ಐನಬೈಲು
4. ಸಿದ್ದಾಪುರ : ಶ್ರೀಧರ ಮದ್ದಿನಕೇರಿ
5. ಮುಂಡಗೋಡ : ನಾರಾಯಣ ಜಂಬೆಕೊಪ್ಪ
6. ಬನವಾಸಿ : ವೆಂಕಟೇಶ ಕಬ್ಬೆ
ಕಾರವಾರ ಜಿಲ್ಲೆ :
1. ಗೋಕರ್ಣ : ರವಿ ಗುನಗಾ
2. ಕುಮಟಾ : ಆದಿತ್ಯ ಶೇಟ್
3. ಹೊನ್ನಾವರ : ಶಿವಾನಂದ
4. ಅಂಕೋಲಾ : ಪ್ರವೀಣ ನಾಯ್ಕ
5. ಕಾರವಾರ : ಭಾನು ಕುಡ್ತರ್ಕರ್
6. ಭಟ್ಕಳ : ತುಳಸೀದಾಸ ಭಟ್ಕಳ್
ದಾಂಡೇಲಿ ಜಿಲ್ಲೆ:
1. ಯಲ್ಲಾಪುರ : ದತ್ತಾತ್ರಯ ಹೆಗಡೆ
2. ದಾಂಡೇಲಿ : ದಶರಥ ಬಂಡಿವಡ್ಡರ್
3. ಹಳಿಯಾಳ : ಆನಂದ ಕೂಸನೂರು
4. ಜೋಯಿಡಾ : ಆಕಾಶ ಅನಸ್ಕರ್’ಗೆ ಜವಾಬ್ದಾರಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ನವೀನ ತಾರೇಸರ, ಚಿನ್ಮಯ ಭೀಮನಹಳ್ಳಿ, ನಾರಾಯಣ ಜಂಬೆಕೊಪ್ಪ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.