ನವದೆಹಲಿ: ರಕ್ಷಣಾ ಪಡೆಯ ನಾರ್ದನ್ ಕಮಾಂಡ್ ಜನವರಿ 20ರೊಳಗೆ ಸ್ನಿಫರ್ ರೈಫಲ್ಸ್ನ್ನು ಪಡೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮಾತನಾಡಿದ ಅವರು, ‘ಡಿಆರ್ಡಿಓಗೆ ಮಿಸೈಲ್ ಮತ್ತು ರಾಕೆಟ್ನ್ನು ಆರ್ಡರ್ ಮಾಡಲು ಕೊನೆಯ ಡೆಡ್ಲೈನ್ನನ್ನು 2019ರ ಫೆಬ್ರವರಿ-ಮಾಚ್ಗೆ ನಿರೀಕ್ಷೆ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಒಂದು ವೇಳೆ ಡೆಡ್ಲೈನ್ ತಲುಪಲು ಸಾಧ್ಯವಾಗದೇ ಇದ್ದರೆ, ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದ್ದಾರೆ.
‘ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಆರ್ಡರ್ ಮಾಡಲಾದ ಮಿಸೈಲ್ ಮತ್ತು ರಾಕೆಟ್ನ್ನು ಪರಿಚಯಿಸಲು ಅಂತಿಮ ಟೈಮ್ಲೈನ್ನನ್ನು ಡಿಆರ್ಡಿಓ ನಮಗೆ ನೀಡಬೇಕಿದೆ, ಒಂದು ವೇಳೆ ಇದಕ್ಕೆ ಅದು ತಪ್ಪಿದರೆ ನಾವು ಆಮದು ಮಾರ್ಗವನ್ನು ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.
ಇದೇ ವೇಳೆ ಗಡಿಯೊಳಗೆ ನುಸುಳಲು 300 ಉಗ್ರರು ಕಾದು ಕುಳಿತಿದ್ದಾರೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.