ನವದೆಹಲಿ: ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಡಿ ಕಾರ್ಯಾಚರಿಸುವ 129 ವಿಮಾನ ನಿಲ್ದಾಣಗಳ ಪೈಕಿ 16 ವಿಮಾನನಿಲ್ದಾಣಗಳು ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ (Single use Plastic) ಬಳಕೆಯಿಂದ ಸಂಪೂರ್ಣ ಮುಕ್ತಗೊಂಡಿದೆ.
ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ವಿಮಾನ ನಿಲ್ದಾಣಗಳ ನಿರ್ದೇಶಕರುಗಳಿಗೆ ಸೂಚನೆಯನ್ನು ನೀಡಿತ್ತು.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾವು ಮೊದಲ ಹಂತದಲ್ಲಿ ಇಂದೋರ್, ಭೋಪಾಲ್, ಅಹಮದಾಬಾದ್, ಭುವನೇಶ್ವರ್, ತಿರುಪತಿ, ತಿರುಚ್ಚಿ, ವಿಜಯವಾಡ, ಡೆಹ್ರಾಡೂನ್, ಚಂಡೀಗಢ, ವಡೋದರಾ, ಮಧುರೈ, ರಾಯ್ಪುರ, ವಿಝಾಗ್, ಪುಣೆ, ಕೋಲ್ಕತ್ತಾ ಮತ್ತು ವಾರಣಾಸಿ ವಿಮಾನ ನಿಲ್ದಾಣಗಳನ್ನು ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತವಾಗಿರುವ 16 ಏರ್ ಪೋರ್ಟ್ಗಳೆಂದು ಆಯ್ಕೆ ಮಾಡಿದೆ.
ಜನವರಿ 31 ರೊಳಗೆ ವಾರ್ಷಿಕ ಒಂದು ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುವ 34 ಏರ್ಪೋರ್ಟ್ಗಳನ್ನು ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ ಬಳಕೆಯಿಂದ ಮುಕ್ತಗೊಳಿಸುವ ಗುರಿಯನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಹೊಂದಿದೆ. ಈ ಬಗ್ಗೆ ಪರಿಶೀಲಿಸುವ ಜವಾಬ್ದಾರಿಯನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾಗೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.