ನವದೆಹಲಿ: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಜಪಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶೈಕ್ಷಣಿಕ ವಿನಿಮಯ ಮತ್ತು ಎರಡು ದೇಶಗಳ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗೆಗಿನ ಪರಸ್ಪರ ತಿಳುವಳಿಕೆಗಾಗಿ ಜಪಾನ್ ಈ ಪ್ರಶಸ್ತಿಯನ್ನು ರಾವ್ ಅವರಿಗೆ ಪ್ರದಾನ ಮಾಡಿದೆ.
ಶುಕ್ರವಾರ ನವದೆಹಲಿಯಲ್ಲಿ ಭಾರತದ ಜಪಾನ್ ರಾಯಭಾರಿ ತಕೇಶಿ ಯಾಗಿ ಅವರು ರಾವ್ ಅವರಿಗೆ ‘ಉದಯಿಸುವ ಸೂರ್ಯ, ಬಂಗಾರ ಮತ್ತು ಬೆಳ್ಳಿಯ ನಕ್ಷತ್ರ’ದ ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ರಾವ್ ‘ಭಾರತ ಮತ್ತು ಜಪಾನಿನ ಭವಿಷ್ಯ ಪರಸ್ಪರ ಸಂಪರ್ಕಿಸಲಿದೆ ಎಂದು ನಾನು ನಂಬಿದ್ದೇನೆ, ಏಷ್ಯಾದಲ್ಲಿ ಜಪಾನ್ ತನ್ನ ಬಲಿಷ್ಠ ಶಕ್ತಿ ಎಂದು ಭಾರತಕ್ಕೆ ಅರಿವಾಗಿದೆ, ಭಾರತ ತನ್ನ ಉತ್ತಮ ಗೆಳೆಯ ಎಂಬುದು ಜಪಾನಿಗೂ ಅರಿವಾಗಿದೆ. ಈ ಎರಡು ದೇಶಗಳು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದರಲ್ಲಿ ಏಷ್ಯಾದ ಭವಿಷ್ಯ ಅಡಕವಾಗಿದೆ’ ಎಂದರು.
ರಾವ್ ಅವರು ಜಪಾನ್ ಅಕಾಡಮಿಯಲ್ಲಿರುವ ಏಕೈಕ ವಿದೇಶಿ ಸದಸ್ಯರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.