ನವದೆಹಲಿ: 2018ರಲ್ಲಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯವು ‘ತಾರತಮ್ಯವಿಲ್ಲದೆ ಅಭಿವೃದ್ಧಿ ಮತ್ತು ಓಲೈಕೆಯಿಲ್ಲದೆ ಸಬಲೀಕರಣ’ ಎಂಬ ನರೇಂದ್ರ ಮೋದಿ ಸರ್ಕಾರ ಮಂತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
2018 ಅಲ್ಪಸಂಖ್ಯಾತ ಸಚಿವಾಲಯಕ್ಕೆ ಸಂಬಂಧಿಸಿದಂತೆ ಅತ್ಯಂತ ವಿಶೇಷ ವರ್ಷವಾಗಿತ್ತು. ಕಳೆದ ವರ್ಷ ಮುಸ್ಲಿಂ ಮಹಿಳೆಯರು ಪುರುಷ ಜೊತೆಗಾರರಿಲ್ಲದೆಯೇ ಹಜ್ ಯಾತ್ರೆ ನಡೆಸಿದರು. ಅಲ್ಲದೇ, ಮೊದಲ ಬಾರಿಗೆ ಸಬ್ಸಿಡಿ ಇಲ್ಲದೆಯೇ ಹಜ್ ಯಾತ್ರೆ ನಡೆಸಲಾಯಿತು ಎಂದಿದ್ದಾರೆ.
ಇತ್ತೀಚಿನವರೆಗೂ ಅಲ್ಪಸಂಖ್ಯಾತ ಸಚಿವಾಲಯವನ್ನು ಪಾರ್ಟ್ ಟೈಮ್ ಸಚಿವಾಲಯದಂತೆ ನೋಡಲಾಗುತ್ತಿತ್ತು. ಆದರೆ ಕಳೆದ ವರ್ಷ ಈ ಸಚಿವಾಲಯ ಅತ್ಯಂತ ಸುಧಾರಣೆ, ಪರಿವರ್ತನೆ, ಪ್ರದರ್ಶನವನ್ನು ಕಂಡಿದೆ ಎಂದಿದ್ದಾರೆ.
ಸುಧಾರಣೆ, ಪರಿವರ್ತನೆ, ಪ್ರದರ್ಶನಗಳನ್ನು ಘನತೆಯುತವಾಗಿ, ಸಬಲೀಕರಣಕ್ಕಾಗಿ ಯಾವುದೇ ಓಲೈಕೆಗಳಿಲ್ಲದೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.