ನವದೆಹಲಿ: ಪ್ರಸ್ತುತ ಬಂಧನದಲ್ಲಿರುವ ಆಗಸ್ಟಾ ವೆಸ್ಟ್ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್, ತನಿಖೆಯ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಿದ್ದಾನೆ, ಆದರೆ ಯಾಕಾಗೆ ಉಲ್ಲೇಖಿಸಿದ್ದಾನೆ ಎಂಬುದನ್ನು ಈಗಲೇ ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದಾಗಿ ಜಾರಿ ನಿರ್ದೇಶನಾಲಯ(ಇಡಿ) ಶನಿವಾರ ಪಟಿಯಾಲ ಕೋರ್ಟ್ಗೆ ತಿಳಿಸಿದೆ ಎನ್ನಲಾಗಿದೆ.
7 ದಿನಗಳ ಕಾಲ ಮಿಶೆಲ್ನನ್ನು ಕೋರ್ಟ್ ಜಾರಿ ನಿರ್ದೇಶನಾಲಯದ ಸುಪರ್ದಿಗೆ ನೀಡಿದೆ. ಪ್ರಸ್ತುತ ಆತನ ತನಿಖೆ ಮುಂದುವರೆದಿದೆ.
ಅಷ್ಟೇ ಅಲ್ಲದೇ, ಕಾಂಗ್ರೆಸ್ ಆಗಸ್ಟಾ ವೆಸ್ಟ್ಲ್ಯಾಂಡ್ ಡೀಲ್ನಿಂದ ಎಚ್ಎಎಲ್ನ್ನು ಹೊರಗಿಟ್ಟು, ಟಾಟಾ ಕಂಪನಿಗೆ ಡೀಲ್ ನೀಡುವ ಆಫರ್ ನೀಡಿತ್ತು ಎಂಬುದಾಗಿ ಮಿಶೆಲ್ ಹೇಳಿರುವುದಾಗಿ ಇಡಿ ಕೋರ್ಟ್ಗೆ ಹೇಳಿದೆ.
ಅಷ್ಟೇ ಅಲ್ಲದೇ, ಮಿಶೆಲ್ ಮತ್ತು ಇತರರ ನಡುವೆ ನಡೆದ ಸಂಭಾಷಣೆಯಲ್ಲಿ ದೊಡ್ಡ ಮನುಷ್ಯ ‘ಆರ್’ ಎಂಬ ಉಲ್ಲೇಖಗಳಿಗೆ. ಆ ಆರ್ ಯಾರು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಎಂದು ಇಡಿ ಹೇಳಿದೆ ಎನ್ನಲಾಗಿದೆ.
ಇಟಲಿ ಮಹಿಳೆಯ ಪುತ್ರ ಮತ್ತು ಆತ ಹೇಗೆ ಮುಂದೆ ಭಾರತದ ಪ್ರಧಾನಿಯಾಗುತ್ತಾನೆ ಎಂಬಿತ್ಯಾದಿಗಳ ಬಗ್ಗೆಯೂ ಮಿಶೆಲ್ ಹೇಳಿದ್ದಾನೆ ಎಂದು ಕೋರ್ಟ್ ತಿಳಿಸಲಾಗಿದೆ.
ಒಟ್ಟಾರೆಯಾಗಿ ಮಿಶೆಲ್ ಬಂಧನದ ಬಳಿಕ ಆಗಸ್ಟಾ ಡೀಲ್ಗೆ ಸಂಬಂಧಿಸಿದಂತೆ ಹಲವಾರು ಕುತೂಹಲಗಳು ಗರಿಗೆದರಿದೆ.
source: www.financialexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.