ನಮ್ಮ ದೇಶದ ಅತ್ಯಂತ ಪವಿತ್ರವಾದ ಗಂಗಾ ನದಿಯನ್ನು ಶುದ್ಧೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವ ನರೇಂದ್ರ ಮೋದಿ ಸರ್ಕಾರ ತನ್ನ ಕಾರ್ಯದಲ್ಲಿ ಸಫಲತೆಯನ್ನು ಕಾಣುತ್ತಿದೆ. ಹಿಂದಿಗಿಂತ ಈಗ ಗಂಗೆ ಹೆಚ್ಚು ಶುದ್ಧಳಾಗಿದ್ದಾಳೆ, ಆಕೆಯ ಒಡಲಿಗೆ ಸೇರುತ್ತಿದ್ದ ಕೊಳಚೆಗಳಿಗೆ ಕಡಿವಾಣ ಬಿದ್ದಿದೆ. ಇಸ್ರೋ ಸೇರಿದಂತೆ ಹಲವಾರು ವೈಜ್ಞಾನಿಕ ಸಂಸ್ಥೆಗಳು ಗಂಗೆಯ ಅತೀಹೆಚ್ಚು ಮಲಿನಗೊಂಡ 6 ಜಲದಂಡೆಗಳಿಂದ ನೀರಿನ ಸ್ಯಾಂಪಲ್ಗಳನ್ನು ಪಡೆದು ಪರಿಶೀಲನೆಗೊಳಪಡಿಸಿದೆ. ಎರಡು ವರ್ಷಗಳಿಂದ ನೀರಿನ ಗುಣಮಟ್ಟ ಏರಿಕೆಯಾಗುತ್ತಿರುವುದು ಇದರಿಂದ ಸಾಬೀತಾಗಿದೆ. ನೀರಿನಲ್ಲಿ ಕರಗಿದ ಆಮ್ಲಜನಕದ ಮಟ್ಟದಲ್ಲಿ ಗಣನೀಯ ಸುಧಾರಣೆಗಳಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಕರಗಿದ ಆಮ್ಲಜನಕದ ವಿಷಯದಲ್ಲಿ ಮಾತ್ರವಲ್ಲ, ಹೈಡ್ರೋಜನ್ ಮಟ್ಟದ ವಿಷಯದಲ್ಲೂ ಗಂಗೆಯ ನೀರು ಸುಧಾರಣೆಯನ್ನು ಕಂಡಿದೆ. ಕರಗಿದ ಆಮ್ಲಜನಕದ ಮಟ್ಟ ಪ್ರತಿ ಲೀಟರ್ನಲ್ಲಿ 2.5 ಮಿಲಿಗ್ರಾಮ್ ಇದೆ ಮತ್ತು ಪಿಎಚ್ ಮಟ್ಟ 8.5 ಮಿಲಿಗ್ರಾಮ್ಗಿಂತ ಹೆಚ್ಚಿದೆ ಎಂದು ನೀರಿನ ಸ್ಯಾಂಪಲ್ನ ಪರೀಕ್ಷೆಯಿಂದ ದೃಢಪಟ್ಟಿದೆ. ತಜ್ಞರು ಈ ಫಲಿತಾಂಶದಿಂದ ಹೆಚ್ಚು ತೃಪ್ತರಾಗಿದ್ದಾರೆ. ಈ ಹಿಂದೆ ಕರಗಿದ ಆಮ್ಲಜನಕದ ಮಟ್ಟ 3.5-4 ಮಿಲಿಗ್ರಾಮ್ನಷ್ಟಿತ್ತು, ಇದು ಜಲಚರಗಳ ಬದುಕಿಗೆ ಅತ್ಯಂತ ಮಾರಕವಾಗಿತ್ತು. ಆದರೆ ಈಗ ಅದು 2.5ಗೆ ಬಂದಿರುವುದು ಮಹತ್ವದ ಬೆಳವಣಿಗೆ. ‘ಈ ಬೆಳವಣಿಗೆ ನಮಗೆ ಮತ್ತು ಜಲಜೀವಿಗಳಿಗೆ ಆಶಾದಾಯಕವಾಗಿದೆ’ ಎಂದು ಯೋಜನೆಯ ಪ್ರಧಾನ ತನಿಖಾಧಿಕಾರಿ ಪ್ರೊ.ಪ್ರವೀಣ್ ಭಾಯ್ ಪಟೇಲ್ ಹೇಳಿದ್ದಾರೆ.
ದೊಡ್ಡ ದೊಡ್ಡ ಒಳಚರಂಡಿಗಳಿಂದ ನೇರವಾಗಿ ಗಂಗಾನದಿಗೆ ಹರಿಯುತ್ತಿದ್ದ ಕೊಳಚೆ ನೀರಿಗೆ ಮೋದಿ ಸರ್ಕಾರ ಕಡಿವಾಣ ಹಾಕಿರುವುದು ನೀರಿನ ಗುಣಮಟ್ಟದ ವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಗಂಗಾ ಶುದ್ಧೀಕರಣವನ್ನು ಸರ್ಕಾರ ಪ್ರಮುಖ ಆದ್ಯತೆಯಾಗಿ ತೆಗೆದುಕೊಂಡಿದೆ ಎಂಬುದು ಇದರಿಂದ ಸಾಬೀತಾಗುತ್ತಿದೆ. ನಮಾಮಿ ಗಂಗಾ ಯೋಜನೆಯ ಮೂಲಕ ಕೈಗೊಳ್ಳಲಾಗಿರುವ ಹತ್ತು ಹಲವು ಕಾರ್ಯಕ್ರಮಗಳು ಗಂಗೆಯನ್ನು ಮತ್ತೆ ಪರಿಶುದ್ಧಗೊಳಿಸುವಂತೆ ಮಾಡುತ್ತಿದೆ. ಈ ಕಾರ್ಯಕ್ಕೆ ನಾವು ಮೋದಿ ಸರ್ಕಾರವನ್ನು ಶ್ಲಾಘಿಸಲೇ ಬೇಕು.
ಹಿಂದಿನ ಸರ್ಕಾರಗಳು ಎಂದೂ ಗಂಗಾ ನದಿಯ ಶುದ್ಧತೆಗೆ ಆದ್ಯತೆಯನ್ನೇ ನೀಡಿರಲಿಲ್ಲ. ಅವುಗಳ ದಿವ್ಯ ನಿರ್ಲಕ್ಷ್ಯವೇ ಗಂಗೆಯ ಸ್ಥಿತಿ ತೀರಾ ಹದಗೆಡಲು ಕಾರಣ. ಗಂಗೆಯ ಸುತ್ತಮುತ್ತ ಬೇಕಾಬಿಟ್ಟಿಯಾಗಿ ಕೈಗಾರಿಕೆಗಳ ಸ್ಥಾಪನೆಗೆ ಅಂದಿನ ಸರ್ಕಾರಗಳು ಅನುವು ಮಾಡಿಕೊಟ್ಟಿರುವುದು ಮಹಾ ಪಾಪ. ಈ ಪಾಪವನ್ನು ತೊಳೆಯುವ ಕಾರ್ಯವನ್ನು ಮೋದಿ ಸರ್ಕಾರ ಮಾಡುತ್ತಿದೆ. ಈಗಾಗಲೇ ನೂರಾರು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಯಾತ್ರಾರ್ಥಿಗಳು ನದಿಯನ್ನು ಕೊಳಕು ಮಾಡದಂತೆ, ಕಸಕಡ್ಡಿಗಳನ್ನು ನೀರಿಗೆ ಹಾಕದಂತೆ ಹಲವು ಕಠಿಣ ಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ತ್ಯಾಜ್ಯ ಹೊರಬಿಡುವ ಕೈಗಾರಿಕೆಗಳನ್ನು ಮುಚ್ಚಲಾಗುತ್ತಿದೆ. ಇಂದಿನ ಸರ್ಕಾರದ ಈ ಎಲ್ಲಾ ಕ್ರಮಗಳು ಮುಂಬರುವ ದಿನಗಳಲ್ಲಿ ಗಂಗೆಯನ್ನು ಅತ್ಯಂತ ಸುಂದರ, ಮನಮೋಹಕ ನದಿಯನ್ನಾಗಿ ಪರಿವರ್ತಿಸುವುದರಲ್ಲಿ ಸಂಶಯವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.