ನವದೆಹಲಿ: ದೆಹಲಿ ಮೆಟ್ರೋ ಹೊಸವರ್ಷಕ್ಕೆ ತನ್ನ ಪ್ರಯಾಣಕರಿಗೆ ಹೊಸ ಉಡುಗೊರೆಯನ್ನು ನೀಡುತ್ತಿದೆ. ಡಿ.31ರಂದು 9.7 ಕಿಮೀ ಉದ್ದದ ಲಜಪತ್ ನಗರ-ಮಯೂರ್ ವಿಹಾರ್ ಪಾಕೆಟ್ 1 ಪಿಂಕ್ ಲೈನ್ ಸಾರ್ವಜನಿಕರಿಗೆ ಮುಕ್ತವಾಗಲಿದೆ.
ಈ ಸೆಕ್ಷನ್ ಐದು ಸ್ಟೇಶನ್ಗಳನ್ನು, ಮೂರು ಅಂಡರ್ಗ್ರೌಂಡ್, ಎರಡು ಎಲಿವೇಟೆಡ್ಗಳನ್ನು ಒಳಗೊಂಡಿದ್ದು, ಸೋಮವಾರ ಮೆಟ್ರೋ ರೈಲ್ವೇ ಸೇಫ್ಟಿ ಕಮಿಷನರ್ ಇದನ್ನು ತಾಪಸಣೆಗೊಳಪಡಿಸಿದ್ದಾರೆ.
ಕೇಂದ್ರ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿ ಮೆಟ್ರೋದ ಈ ಪಿಂಕ್ ಲೈನ್ ವಿಸ್ತರಣೆಗೆ ಡಿ.31ರಂದು ಮೆಟ್ರೋ ಭವನದಲ್ಲಿ ಬೆಳಗ್ಗೆ ಚಾಲನೆಯನ್ನು ನೀಡಲಿದ್ದಾರೆ. ಸಾರ್ವಜನಿಕರಿಗೆ ಈ ಸೇವೆ ಅಂದೇ ಸಂಜೆ 4 ಗಂಟೆಯಿಂದ ಸಿಗಲಿದೆ.
ಈ ಹೊಸ ವಿಭಾಗವು 59 ಕಿಮೀ ಉದ್ದದ ಪಿಂಕ್ ಲೈನ್ನ ಭಾಗವಾಗಿದೆ, ಇದು ಮಜ್ಲಿಸ್ ಪಾರ್ಕ್ನಿಂದ ಶಿವ ವಿಹಾರದವರೆಗೆ ವ್ಯಾಪಿಸಿದೆ. ಇದು ಡಿಎಂಆಆರ್ಸಿ ನೆಟ್ವರ್ಕ್ 3ನೇ ಹಂತದ ಭಾಗವಾಗಿದೆ.
ಲಜಪತ್ ನಗರ, ವಿನೋಬಪುರಿ, ಆಶ್ರಮ, ಹಜರತ್ ನಿಜಾಮುದ್ದೀನ್, ಮಯೂರ್ ವಿಹಾರ್ ಪಿ-ಐ ಮತ್ತು ಮಯೂರ್ ವಿಹಾರ್ ಪಾಕೆಟ್ -1 ಐದು ನಿಲ್ದಾಣಗಳನ್ನು ಇದು ಹೊಂದಿದೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.