ಶಿವ ಮತ್ತು ವಿಷ್ಣುವಿನ ಪುತ್ರ ಅಯ್ಯಪ್ಪನಿಗೆ ಸಮರ್ಪಿತಗೊಂಡ ಶಬರಿಮಲೆ ದೇಗುಲ ವಿಶ್ವದ ಅತೀದೊಡ್ಡ ಯಾತ್ರಾ ಕ್ಷೇತ್ರಗಳಲ್ಲಿ ಒಂದು. ವಾರ್ಷಿಕ, 50 ಮಿಲಿಯನ್ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇತ್ತೀಚಿಗೆ, 10-50 ವರ್ಷದ ಮಹಿಳೆಯರೂ ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿದ ತೀರ್ಪು ಈ ಕ್ಷೇತ್ರವನ್ನು ವಿವಾದದ ಕೇಂದ್ರ ಬಿಂದುವನ್ನಾಗಿಸಿದೆ. ದಿನಕ್ಕೊಂದು ರೀತಿಯ ಹೋರಾಟ, ಪ್ರತಿಭಟನೆಗಳು ನಡೆಯುತ್ತಿದೆ. ಹಿಂದೂ ದೇಗುಲದ ಪಾವಿತ್ರ್ಯತೆ ಭ್ರಷ್ಟಗೊಳಿಸಲು ಪಿತೂರಿ ನಡೆಯುತ್ತಿದೆ ಎಂಬ ಆತಂಕ ಭಕ್ತರಲ್ಲಿ ಮನೆ ಮಾಡಿದೆ.
ಈ ದೇಗುಲದಲ್ಲಿ ಎಡಪಂಥೀಯ ತೀವ್ರಗಾಮಿಗಳ ಚಟುವಟಿಕೆಗಳು ಮುಂಬರುವ ದಿನಗಳಲ್ಲಿ ಹೆಚ್ಚಾಗಬಹುದು ಎಂದು ಇತ್ತೀಚಿಕೆ ಕೇಂದ್ರೀಯ ಗುಪ್ತಚರ ಇಲಾಖೆ ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನು ರವಾನಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ಶಬರಿಮಲೆ ಪ್ರವೇಶಕ್ಕೆ ಮುಂದಾಗಿದ್ದ 30 ತಮಿಳುನಾಡು ಮೂಲದ ಮಹಿಳೆಯರನ್ನು ದೇಗುಲ ಪ್ರವೇಶಿಸದಂತೆ ಪೊಲೀಸರು ತಡೆದಿದ್ದಾರೆ. ಈ ಮೂಲಕ ಕಾನೂನು ಸುವ್ಯವಸ್ಥೆ ಹಾಳಾಗುವುದಂತೆ ಕಾಪಾಡಿದ್ದಾರೆ. ಶಬರಿಮಲೆಯ ಸಂಪ್ರದಾಯಗಳನ್ನು ನಾವು ಪಾಲಿಸುವುದಿಲ್ಲ ಎಂದು ತಮಿಳುನಾಡು ದೇಗುಲದಿಂದ ಹೊರಡುವ ವೇಳೆಯೇ ಈ ತಂಡ ಘೋಷಿಸಿತ್ತು. ಇಂತಹ ಸಂದರ್ಭದಲ್ಲಿ ಅವರ ದೇಗುಲ ಪ್ರವೇಶವನ್ನು ಹತ್ತಿಕ್ಕೆ ಒಳ್ಳೆಯ ಕಾರ್ಯವನ್ನೇ ಮಾಡಲಾಗಿದೆ.
ಪೆರಿಯರ್ ಹುಲಿ ಸಂರಕ್ಷಣಾ ತಾಣದ ಭಾಗವಾದ, ಸುತ್ತ ಅರಣ್ಯಗಳಿಂದ ಆವೃತ್ತವಾಗಿರುವ ಬೆಟ್ಟದ ತುದಿಯಲ್ಲಿರುವ ಶಬರಿಮಲೆ ದೇಗುಲದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತಪ್ಪು ಎಂಬುದು ಬಹುತೇಕರ ಅನಿಸಿಕೆಯಾಗಿದೆ. ಇತ್ತೀಚಿನ ಇತಿಹಾಸ, ಪ್ರಕರಣಗಳನ್ನು ಗಮನಿಸಿದರೆ ಶಬರಿಮಲೆಯ ಪ್ರಾವಿತ್ರ್ಯತೆಯನ್ನು ನಾಶಮಾಡಲು ಹಲವು ಪ್ರಯತ್ನಗಳು ನಡೆದಿರುವುದು ಸ್ಪಷ್ಟವಾಗಿದೆ.
1950ರಲ್ಲಿ ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ, ದೇಗುಲದ ಕೆಲವು ಭಾಗ ಮತ್ತು ಮೂರ್ತಿಯನ್ನು ಭಗ್ನಗೊಳಿಸಲಾಗಿತ್ತು. ದೇಗುಲದ ನಾಶವನ್ನೇ ಬಯಸಿ ಕೆಲವರನ್ನು ಇಲ್ಲಿ ಬಲವಂತವಾಗಿ ಪ್ರವೇಶಿಸುವಂತೆ ಮಾಡಲಾಗುತ್ತಿದೆ ಎಂದು ಕೇರಳ ಪೊಲೀಸರು ತನಿಖೆಯಿಂದ ತಿಳಿದುಕೊಂಡಿದ್ದರು. ಆದರೆ ದುರಾದೃಷ್ಟ ಎಂಬಂತೆ, ಆಡಳಿತದ ನಿರ್ಲಕ್ಷ್ಯದದಿಂದಾಗಿ ಅದು ಸಾಬೀತಾಗಲಿಲ್ಲ. 1980ರಲ್ಲಿ ಶಬರಿಮಲೆ ಪಕ್ಕದ ಬೆಟ್ಟವೊಂದರಲ್ಲಿ ಕ್ರಾಸ್ನ್ನು ಸ್ಥಾಪನೆಗೊಳಿಸಲಾಗಿತ್ತು, ಆದರೆ ಹಿಂದೂಗಳ ತೀವ್ರ ಪ್ರತಿರೋಧದಿಂದಾಗಿ ಅದನ್ನು ಅಲ್ಲಿಂದ ಕಿತ್ತೊಗೆಯುವುದು ಅಧಿಕಾರಿಗಳಿಗೆ ಅನಿವಾರ್ಯವಾಯಿತು.
2016ರಲ್ಲಿ ಕೆಪಿ ಯೋಹಾನನ್ ಗ್ರೂಪ್ ಶಬರಿಮಲೆ ದೇಗುಲ ಸಮೀಪದ 2500 ಎಕರೆ ಭೂಮಿಯನ್ನು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುವ ಸಲುವಾಗಿ ಖರೀದಿ ಮಾಡಿತು. ಸರ್ಕಾರದ ಭೂಮಿ ಕಬಳಿಕೆ ಮಾಡುವುದರಲ್ಲಿ ತಜ್ಞನಾಗಿರುವ ಹ್ಯಾರಿಸನ್ ಮಲಯಾಳಂ ಎಂಬಂತಾನಿಂದ ಈ ಭೂಮಿಯನ್ನು ಖರೀದಿ ಮಾಡಿದ್ದ ಯೊಹನನ್ ಗ್ರೂಪ್, ಬಳಿಕ ಇಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡಿದೆ. ಸರ್ಕಾರದ ಭೂಮಿಯನ್ನು ಸರ್ಕಾರವೇ ಕೋಟ್ಯಾಂತರ ನೀಡಿ ಮರಳಿ ಪಡೆಯುವ ದುಃಸ್ಥಿತಿ ಇಲ್ಲಿ ಅಂತ್ಯವಾಗಬೇಕಿತ್ತು, ಇಲ್ಲವಾದರೆ ಭವಿಷ್ಯದಲ್ಲೂ ಇಂತಹ ಘಟನೆಗಳು ನಡೆಯುವುದು ಸಾಮಾನ್ಯವಾಗಿ ಬಿಡುತ್ತದೆ.
ಯೋಹಾನನ್ ಸ್ವಯಂಘೋಷಿಸಿ ಕ್ರಿಶ್ಚಿಯನ್ ಧಾರ್ಮಿಕ ಮುಖಂಡ, ಯುಎಸ್ ಮೂಲದ ಸಂಸ್ಥೆಯಿಂದಾಗಿ ಈತ ಕೋಟ್ಯಾಧಿಪತಿಯಾಗಿದ್ದಾನೆ. ಈತ ನೀಡುವ ಆಫರ್ಗಳಿಗೆ ಕೇರಳದ ಕಮ್ಯೂನಿಸ್ಟ್ ನಾಯಕರು ತಲೆದೂಗುತ್ತಿದ್ದಾರೆ. ಈತ ನಿರ್ಮಾಣ ಮಾಡಿರುವ ಐದನೇ ಏರ್ಪೋರ್ಟ್ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಾದರೂ, ಈತ ಶಬರಿಮಲೆಗೆ ಪ್ರವಾಸಿಗರನ್ನು ಆಕರ್ಷಿಸಲು ತುದಿಗಾಲಲ್ಲಿ ನಿಂತಿದ್ದಾನೆ. ಈತನ ರಿಯಲ್ ಎಸ್ಟೇಟ್ ಉದ್ಯಮದ ದುರಾಸೆಗಾಗಿ ಶಬರಿಮಲೆ ಬಲಿಯಾಗುತ್ತಿದೆ ಎಂಬ ಆತಂಕವೂ ಭಕ್ತರಲ್ಲಿ ಇದೆ. ಈತನ ಪಾಲನೆ ಪೋಷಣೆಯನ್ನು ಆಡಳಿತರೂಢ ಕಮ್ಯೂನಿಷ್ಟರೇ ಮಾಡುತ್ತಿರುವಾಗ ಭಕ್ತರ ಆತಂಕಕ್ಕೆ ಬೆಲೆ ಎಲ್ಲಿದೆ?
ಶಬರಿಮಲೆ ಕೇರಳದ ಅತ್ಯಂತ ಖ್ಯಾತ ದೇಗುಲಗಳಲ್ಲಿ ಒಂದು, ಆದರೆ ಇತ್ತೀಚಿನ ದಿನಗಳಲ್ಲಿ ಇದು ಕಣ್ಗಾವಲಿನಲ್ಲಿದೆ. ಇನ್ನೊಂದೆಡೆ ಸಾಂಪ್ರದಾಯಿಕ ಉಡುಗೆಯನ್ನೇ ತೊಡಬೇಕು ಎಂದು ಕಠಿಣ ನಿಯಮಾವಳಿ ರೂಪಿಸಿದ್ದ ಶ್ರೀ ಗುರುವಾಯೂರು ದೇಗುಲ ತನ್ನ ನೀತಿಯನ್ನು ಕಳೆದ ವರ್ಷ ಕೈಬಿಟ್ಟಿದೆ. ಇನ್ನೊಂದೆಡೆ ಶ್ರೀ ಪದ್ಮನಾಭ ದೇಗುಲದಲ್ಲಿ ಅಪಾರ ಸಂಪತ್ತು ಇರುವುದು ಪತ್ತೆಯಾಗಿದ್ದು, ಅದರಲ್ಲಿ ಈಗಾಗಲೇ ರೂ.186 ಕೋಟಿ ಮೌಲ್ಯದ ಸಂಪತ್ತು ನಾಪತ್ತೆಯಾಗಿರುವುದು ತಿಳಿದು ಬಂದಿದೆ.
ಇವೆಲ್ಲವನ್ನೂ ನೋಡುತ್ತಿದ್ದಾರೆ ನಮ್ಮ ದೇಗುಲಗಳು, ಭಕ್ತರುಗಳು ಅಪಾಯದಲ್ಲಿದ್ದಾರೆ ಎಂದು ಅನಿಸುತ್ತಿದೆ. ಆಧುನೀಕತೆಯಿಂದಾಗಿ, ತಮ್ಮ ಸ್ವಾರ್ಥಕ್ಕಾಗಿ ದೇಶದ ಪರಂಪರೆಯನ್ನು ಬಲಿಕೊಡಲು ಮುಂದಾಗಿರುವ ಕೆಲ ದುಷ್ಟ ಶಕ್ತಿಗಳಿಂದಾಗಿ ನಮ್ಮ ದೇಗುಲಗಳು ಭವ್ಯ ಪರಂಪರೆಯನ್ನು ಕಳೆದುಕೊಳ್ಳುತ್ತಿವೆಯೇ? ಕಾಲವೇ ಉತ್ತರಿಸಬೇಕು.
ಮೂಲ ಲೇಖನ: ಲೆವಿನಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.