ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತವಾಗಿದ್ದಾರೆ ಎಂಬ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಭಾರತದ ಕ್ರಿಕೆಟ್ ಆಟಗಾರ ಮೊಹಮೊಮ್ಮದ್ ಕೈಫ್ ತೀಕ್ಷ್ಣ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ.
1947ರ ವಿಭಜನೆಯ ವೇಳೆ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಶೇ.20ರಷ್ಟಿತ್ತು, ಈಗ ಅದು ಶೇ.2ಕ್ಕೆ ಇಳಿಕೆಯಾಗಿದೆ ಎಂಬುದನ್ನು ಉಲ್ಲೇಖಿಸಿರುವ ಕೈಫ್, ಅಲ್ಪಸಂಖ್ಯಾತರ ಬಗ್ಗೆ ಪಾಠ ಯೋಗ್ಯತೆ ಆ ದೇಶಕ್ಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.
’ವಿಭಜನೆಯ ವೇಳೆ ಪಾಕಿಸ್ಥಾನದಲ್ಲಿ ಶೇ.20ರಷ್ಟು ಅಲ್ಪಸಂಖ್ಯಾತರಿದ್ದರು, ಈಗ ಅವರ ಸಂಖ್ಯೆ ಶೇ.2ಕ್ಕೆ ಇಳಿದಿದೆ. ಇನ್ನೊಂದೆಡೆ ಭಾರತದಲ್ಲಿ ಅಲ್ಪಸಂಖ್ಯಾತ ಸಂಖ್ಯೆ ಕ್ಷಿಪ್ರಗತಿಯಲ್ಲಿ ಏರುತ್ತಿದೆ. ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಇತರ ದೇಶಗಳಿಗೆ ಉಪನ್ಯಾಸ ನೀಡುವ ದೇಶಗಳ ಪೈಕಿ ಪಾಕಿಸ್ಥಾನ ಕೊನೆಯಲ್ಲಿ ನಿಲ್ಲುತ್ತದೆ’ ಎಂದು ಕೈಫ್ ಹೇಳಿದ್ದಾರೆ.
ಅಲ್ಪಸಂಖ್ಯಾತರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ನರೇಂದ್ರ ಮೋದಿ ಸರ್ಕಾರಕ್ಕೆ ನಾನು ಕಲಿಸುತ್ತೇನೆ ಎಂದು ಇಮ್ರಾನ್ ಖಾನ್ ಹೇಳಿದ್ದರು, ಅವರ ಈ ಹೇಳಿಕೆಗೆ ಭಾರತೀಯರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ದೊರೆತಿವೆ. ಸಹಿಷ್ಣುತೆಯನ್ನು ರಕ್ತದಲ್ಲೇ ಅಳವಡಿಸಿಕೊಂಡಿರುವ ಭಾರತಕ್ಕೆ ಕೋಮುವಾದಿ, ಮೂಲಭೂತವಾದಿ ರಾಷ್ಟ್ರದ ಬುದ್ಧಿಮಾತು ಬೇಕಾಗಿಲ್ಲ ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.