ನವದೆಹಲಿ: ದೇಶದ ಹೆಮ್ಮೆಯ ಪ್ರತೀಕವಾದ ಸಿಂಹಗಳನ್ನು ಸಂರಕ್ಷಣೆ ಮಾಡುವ ಗುರಿಯೊಂದಿಗೆ ಕೇಂದ್ರ ಪರಿಸರ ಸಚಿವಾಲಯ, ‘ಏಶಿಯಾಟಿಕ್ ಲಯನ್ ಕನ್ಸರ್ವೇಶನ್ ಪ್ರಾಜೆಕ್ಟ್’ನ್ನು ಆರಂಭಿಸಿದೆ.
ಜಗತ್ತಿನ ಕೊನೆಯ ಮುಕ್ತ ಸಿಂಹ ಸಂಖ್ಯೆಗಳ ತಳಿಯನ್ನು ಮತ್ತು ಅದರ ಪರಿಸರ ವ್ಯವಸ್ಥೆಯನ್ನು ಸಂರಕ್ಷಣೆ ಮಾಡುವ ಗುರಿಯೊಂದಿಗೆ ಪ್ರಾಜೆಕ್ಟ್ ಆರಂಭಿಸಲಾಗಿದ್ದು, ಗಿರ್ ಮತ್ತು ಅದರಲ್ಲಿನ ವನ್ಯಜೀವಿಗಳ ಅಭಿವೃದ್ಧಿ ಮತ್ತು ರಕ್ಷಣೆಯ ಉದ್ದೇಶವನ್ನೂ ಇದು ಒಳಗೊಂಡಿದೆ.
ಮೂರು ವರ್ಷಗಳ ಅವಧಿಯ ಪ್ರಾಜೆಕ್ಟ್ ಇದಾಗಿದ್ದು, ರೂ.97.84 ಕೋಟಿ ಬಜೆಟ್ನಲ್ಲಿ ಆರಂಭವಾಗಿದೆ. ಕೇಂದ್ರ ಮತ್ತು ರಾಜ್ಯಗಳ ಅನುದಾನ ಇದಕ್ಕೆ ಸಿಗಲಿದೆ.
‘ಏಶಿಯಾಟಿಕ್ ಲಯನ್ ಕನ್ಸರ್ವೇಶನ್ ಪ್ರಾಜೆಕ್ಟ್’ ಪ್ರಸ್ತುತ ನಡೆಯುತ್ತಿರುವ ಸಂರಕ್ಷಣಾ ಕ್ರಮಗಳನ್ನು ಬಲಪಡಿಸಲಿದೆ ಮತ್ತು ವನ್ಯ ಜೀವಿ ಸಂರಕ್ಷಣೆಗಾಗಿ ತಂತ್ರಗಳು, ಪರಿಕರಗಳ ಅಭಿವೃದ್ಧಿ ಮತ್ತು ಬಳಕೆ, ನಿರಂತರ ವೈಜ್ಞಾನಿಕ ಸಂಶೋಧನಾ ಅಧ್ಯಯನಗಳು, ರೋಗ ನಿರ್ವಹಣೆ, ಆಧುನಿಕ ಕಣ್ಗಾವಲು ಮತ್ತು ಗಸ್ತು ತಿರುಗುವಿಕೆ, ವಿಮರ್ಶೆ ಸಭೆ ಇತ್ಯಾದಿಗಳನ್ನು ಉತ್ತೇಜಿಸಲಿದೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.