ಮೋದಿ ಸರಕಾರ ನೋಟ್ ಬಂಧಿ ಮತ್ತು GST ಯನ್ನು ಜನರೆದುರು ತರುವ ಮುನ್ನ ಸಾಕಷ್ಟು ತಯಾರಿ ನಡೆಸದೇ ಆತುರಾತುರವಾಗಿ ತಂದಿದ್ದರಿಂದ ಅದು ಜನರಿಗೆ ಹೊರೆಯಾಯಿತು, ಬಹಳಷ್ಟು ಜನರು ಕಷ್ಟ ಅನುಭವಿಸುವಂತಾಯಿತು ಇತ್ಯಾದಿ ಇತ್ಯಾದಿ ಆರೋಪಗಳನ್ನು ಇಂದಿಗೂ ಕೇಳುತ್ತಲೇ ಇದ್ದೇವೆ. ಈ ತರಹದ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಾ ಕೆಲವರ ಮನಸ್ಸಿಗೆ ನಮ್ಮೆಲ್ಲಾ ಕಷ್ಟಕ್ಕೆ ಮೋದಿಯವರ ನೋಟ್ ಬಂಧಿ ಮತ್ತು GST ಯೇ ಕಾರಣವಿರಬಹುದೇನೋ ಎಂಬ ಸಂಶಯ ಹುಟ್ಟುವ ಮಟ್ಟಿಗೆ ಮೋದಿ ವಿರೋಧಿಗಳಿಂದ ಪ್ರಚಾರ ನಡೆಯುತ್ತಲೇ ಬಂದಿದೆ.
ಮೋದಿಯವರು ಇನ್ನಷ್ಟೂ ತಯಾರಿ ನಡೆಸುವುದೆಂದರೇನೆಂದು, ಯಾವ ರೀತಿ ತಯಾರಿ ನಡೆಸಬೇಕಾಗಿತ್ತು ಎಂದು ಅವರನ್ನು ಕೇಳಿದರೆ ಆರೋಪ ಮಾಡುವ ಯಾರೊಬ್ಬರಲ್ಲೂ ಸರಿಯಾದ ಉತ್ತರವಿಲ್ಲ. ಉತ್ತರವಿದ್ದರೂ ಅದು ಯಾವ ರೀತಿ ಇರುತ್ತದೆಯೆಂದರೆ ಮೋದಿ ಅದನ್ನು ಮಾಡಿದ್ದರೆ ನೋಟ್ ಬಂಧಿ ಮಾಡುವ ಮುನ್ನವೇ ದೇಶದಾದ್ಯಂತ ಮೋದಿ ನೋಟ್ ಬಂಧಿ ಮಾಡಲಿದ್ದಾರೆಂಬ ಸುಳಿವು ಹರಿದು ಹೋಗಿಯಾಗುತ್ತಿತ್ತು! ಇದೊಂತರಾ ಮೊದಲೇ ತಿಳಿಸಿ CBI ದಾಳಿ ಮಾಡಿದ ಹಾಗೆ ಅಷ್ಟೇ. ನೋಟ್ ಬಂಧಿಯ ನಂತರ ಸರಕಾರ ಸುಮ್ಮನೆ ಕುಳಿತಿದ್ದರೆ ವಿಚಾರ ಬೇರೆ. ಆದರೆ ಸರಕಾರ ದೇಶದಲ್ಲಾಗುತ್ತಿದ್ದ ಬೆಳವಣಿಗೆಯ feedback ಪಡೆದು ದಿನದಿನವೂ ಬಹಳಷ್ಟು ಬದಲಾವಣೆ ತರುತ್ತನೇ ಸಾಗಿದ್ದರಲ್ಲೇ ನಾವು ಅರ್ಥೈಸಬೇಕಾಗಿರುವುದು ಸರಕಾರ ಎಷ್ಟು ಮುತುವರ್ಜಿಯಿಂದ ನೋಟ್ ಬಂಧಿಯನ್ನು ನಿಭಾಯಿಸಿದೆ ಎಂದು.
ಇನ್ನು GST ವಿಚಾರಕ್ಕೆ ಬಂದರೆ GST ಜಾರಿಗೆ ತಂದಿದ್ದು ಎಲ್ಲಾ ಪಕ್ಷಗಳು ಸದಸ್ಯರಾಗಿರುವ GST ಕಮಿಟಿಯ ಒಪ್ಪಿಗೆ ಮೇಲಷ್ಟೇ ತಾನೆ? ಕಮಿಟಿಯೊಳಗೆ ಎಲ್ಲಾ ಪಕ್ಷಗಳು ಜಾರಿಗೆ ತರಲು ಒಪ್ಪಿಗೆ ನೀಡುತ್ತವೆ. ಆದರೆ ಜನರೆದುರು ಬಂದು ಸರಕಾರ ಯಾವುದೇ ತಯಾರಿ ಇಲ್ಲದೆ ಜಾರಿಗೆ ತಂದಿದೆ. 5 ಸ್ಲಾಬ್ಗಳಲ್ಲಿ ತಂದಿದ್ದು ತಪ್ಪು ಎಂದೆಲ್ಲಾ ಹೇಳುವುದು ಎಷ್ಟು ಸರಿ? ಅಷ್ಟು ಸಮಸ್ಯೆ ಇದ್ದರೆ GST ಕಮಿಟಿಯಲ್ಲಿರುವ ಅಷ್ಟೂ ಕಾಂಗ್ರೇಸಿನ ಸದಸ್ಯರು ಒಪ್ಪಿಗೆ ಸೂಚಿಸಿದ್ದು ಯಾಕಾಗಿ? ಅಲ್ಲೇ ವಿರೋಧ ವ್ಯಕ್ತಪಡಿಸುತ್ತಿದ್ದರೆ ಈ ಸಮಸ್ಯೆನೇ ಎದುರಾಗುತ್ತಿರಲಿಲ್ಲವಲ್ಲಾ? ಸರಿ, ಸರಕಾರವೇ ಪೂರ್ಣ ತಯಾರಿ ನಡೆಸದೆ ಜಾರಿಗೊಳಿಸಿದೆಯೆಂದು ಇಟ್ಟುಕೊಳ್ಳೋಣ. ಇಲ್ಲಿ ಕೂಡ ಸರಕಾರ ನೋಟ್ ಬಂಧಿ ಸಮಯದಲ್ಲಿ ಕೆಲಸ ಮಾಡಿದ ರೀತಿಯಲ್ಲೇ feedback ಪಡೆಯುತ್ತಾ ಅದನ್ನು ಜನರಿಗೆ ಒಪ್ಪಿಗೆಯಾಗುವಂತೆ GST ಯಲ್ಲಿ ಹಲವು ಸುಧಾರಣೆ ಮಾಡಿಲ್ಲವೇ ಹೇಳಿ. ಅಷ್ಟಕ್ಕೂ ಯಾವುದೇ ವಿಚಾರವಿರಲಿ ಹೊಸದಾಗಿ ತರುವಾಗ ಪೂರ್ಣ ಪ್ರಮಾಣದಲ್ಲಿ ತಯಾರಿ ನಡೆಸಿಯೇ ತಂದರೂ ground ಗೆ ಬಂದಾಗ ಅದರಲ್ಲಿ ಹಲವು ನ್ಯೂನತೆಗಳು ಕಾಣಸಿಗುತ್ತವೆ. ನಂತರ ಅದನ್ನು ಸುಧಾರಿಸಲಾಗುತ್ತದೆ ಅಷ್ಟೇ.
ಇಷ್ಟರ ಮೇಲೂ ಹೇಳುವುದಾದರೆ, ಒಮ್ಮೆ ನಾವೆಲ್ಲಾ ನಮ್ಮ ಹಿಂದಿನ ಜೀವನದತ್ತ ತಿರುಗಿ ನೋಡಿದಾಗ ನಮಗೆ ಕಾಣುವುದು –
1) ನಮ್ಮಲ್ಲಿ ಸರಿಯಾದ ರಸ್ತೆಯಾಗುವವರೆಗೂ ನಾನು ಗಾಡಿ ಖರೀದಿ ಮಾಡುವುದಿಲ್ಲವೆಂದು ಯಾರು ಕುಳಿತಿರಲಿಲ್ಲ. ಗಾಡಿಗಳು ಬಂದ ಅನಿವಾರ್ಯತೆಗೆ ಹಲವು ಹಳ್ಳಿಗಳಿಗೆ ರಸ್ತೆಗಳಾದವು.
2) ಸಿಗ್ನಲ್ ಸಿಗುತ್ತದೋ ಇಲ್ಲವೋ ಎಂದು ತಲೆಕೆಡಿಸಿಕೊಳ್ಳದ ನಾವು TV ತಂದು, ಸಿಗ್ನಲ್ಗಾಗಿ ಮರದ ತುತ್ತ ತುದಿಗೆ ಆ್ಯಂಟೇನ್ ಕಟ್ಟಿಲ್ಲವೇ ಹೇಳಿ? TV ಬಂದ ಮೇಲೆ ತಾನೆ ಸಿಗ್ನಲ್ ಸುಧಾರಿಸಿದ್ದು.
3) Mobile ಕಡಿಮೆಗೆ ಸಿಗುವುದೆಂಬ ಒಂದೇ ಕಾರಣಕ್ಕೆ ನಾವಿರುವಲ್ಲಿ ಆ network signal ಸಿಗುತ್ತಾ ಎಂದು ಕೂಡಾ ವಿಚಾರ ಮಾಡದೇ ದೂರದ ಊರಿಗೆ ಹೋಗಿ ಖರೀದಿ ಮಾಡಿ ಊರಿಗೆ ಬಂದಾಗ signal ಸಿಗದೇ ಒದ್ದಾಡಿದ ಪ್ರಸಂಗ ಎಷ್ಟಿಲ್ಲ ಹೇಳಿ? ಮೊಬೈಲ್ ಬಂದ ನಂತರವಷ್ಟೇ ಸಿಗ್ನಲ್ ಸುಧಾರಿಸುತ್ತಾ ಬಂದಿದ್ದು.
ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಉದಾಹರಣೆ ನಮಗೆ ಸಿಗಬಹುದು. ಆದರೆ ಅದೆಲ್ಲಾ ನಮಗೆ ಸಮಸ್ಯೆಯೆಂದು ಅನಿಸಿರಲೇ ಇಲ್ಲ. ಯಾಕೆ ಗೊತ್ತೇ? ಅವುಗಳೆಲ್ಲಾ ನಾವೇ ಸ್ವ ಇಚ್ಛೆಯಿಂದ ತೆಗೆದುಕೊಂಡ ನಿರ್ಧಾರಗಳು. ನಾವೇ ತೆಗೆದುಕೊಂಡ ನಿರ್ಧಾರಗಳಲ್ಲಿ ಎಷ್ಟೇ ಕಷ್ಟ ಎದುರಾದರೂ ಅದು ಕಷ್ಟ ಎನಿಸುವುದೇ ಇಲ್ಲ ನಮಗೆ. ಇದೊಂತರಾ ಹೇಗೆ ಎಂದರೆ ನಮ್ಮ ಮನೆಯಲ್ಲಿದ್ದ ವಸ್ತು ಬೇರೆಯವರಿಂದ ಒಡೆದು ಹೋದರೆ ಅವರನ್ನು ನಾವು ಬೇಜಾವಾಬ್ದಾರಿಯಿಂದ intentionally ಒಡೆದು ಹಾಕಿದರೆಂದು ಬೈಯುತ್ತೇವೆ. ಅದೇ ನಮ್ಮ ಕೈಯಲ್ಲಾದರೆ ಕೈ ತಪ್ಪಿ ಬಿದ್ದುಹೋಯಿತು ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡು ಮುಂದುವರಿಯುತ್ತೇವೆ ಅಷ್ಟೇ.
ಆದರೆ ಈ ನೋಟ್ ಬಂಧಿ ಮತ್ತು GST ಗಳು ನಮ್ಮ ನಿರ್ಧಾರಗಳಲ್ಲವಲ್ಲಾ. ಅದಕ್ಕಾಗಿ ನಮಗೆ ಸರಕಾರದ ನಿಲುವುಗಳು ಕಷ್ಟವೆನಿಸಲು ಕಾರಣ ಹೊರತು ಮೋದಿಯವರ ತಯಾರಿಯಲ್ಲಿನ ಕೊರತೆಯಿಂದಲ್ಲ ಸ್ನೇಹಿತರೇ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.