ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ಸೆಮಿ-ಹೈ ಸ್ಪೀಡ್ ಟ್ರೈನ್-18ನ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 29ರಂದು ಅಧಿಕೃತ ಚಾಲನೆಯನ್ನು ನೀಡಲಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಅವರು ಟ್ರೈನ್-18ಗೆ ಚಾಲನೆಯನ್ನು ನೀಡಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ನವದೆಹಲಿ ನಿಲ್ದಾಣದಿಂದ ಹೊರಡುವ ಈ ರೈಲು ಮಧ್ಯಾಹ್ನ 2 ಗಂಟೆಗೆ ವಾರಣಾಸಿಯನ್ನು ತಲುಪಲಿದೆ.
ಬಳಿಕ ವಾರಣಾಸಿಯಿಂದ 2.30ಕ್ಕೆ ಹೊರಟು, ನವದೆಹಲಿಯನ್ನು ರಾತ್ರಿ 10.30ಕ್ಕೆ ತಲುಪಲಿದೆ.
ಶತಾಬ್ದಿ ರೈಲಿನ ದರಕ್ಕಿಂತ ಇದರ ದರ ಶೇ.20-25ರಷ್ಟು ಹೆಚ್ಚಾಗಿದೆ. ವಿದ್ ಮೀಲ್ಸ್ ಮತ್ತು ವಿದೌಟ್ ಮೀಲ್ಸ್ ಎಂಬ ಎರಡು ಆಯ್ಕೆಯ ದರಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.