ಮುಂಬಯಿ: ನವಿ ಮುಂಬಯಿನಲ್ಲಿರುವ ಅತ್ಯಂತ ಪ್ರಸಿದ್ಧ ಆಸ್ಪತ್ರೆ ಅಪೋಲೋ, ಜನರನ್ನು ಬಳಸಿ ಮಾನವ ಮೂಳೆಯ ಅತೀದೊಡ್ಡ ಆಕೃತಿಯನ್ನು ರಚಿಸುವ ಮೂಲಕ ಗಿನ್ನಿಸ್ ವಿಶ್ವದಾಖಲೆಯ ಪುಟವನ್ನು ಸೇರಿದೆ.
ಮೊಣಕಾಲು ನೋವು ಮತ್ತು ಸಂಧಿವಾತಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ರಚನೆಯನ್ನು ಮಾಡಲಾಗಿದೆ. ಸಮಾಜದ ವಿವಿಧ ಸ್ತರಗಳ ಸುಮಾರು 948 ಜನರು ಜೊತೆಗೂಡಿ ಮಾನವ ಎಲುಬಿನ ಆಕೃತಿ ಮೂಡುವಂತೆ ಮಾಡಿದ್ದಾರೆ.
ನವಿ ಮುಂಬಯಿ, ಥಾಣೆ, ಮುಂಬಯಿ ಭಾಗಗಳಿಂದ ಬಂದ ಜನರು ಅನಾರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯದಲ್ಲಿ ಕೈಜೋಡಿಸಿ, ಮಾನವ ಮೂಳೆಯ ಆಕೃತಿಯ ರಚನೆಯಲ್ಲಿ ಉತ್ಸಾಹದಿಂದ ಭಾಗಿಯಾದರು.
ಲೆಜಂಡರಿ ಕ್ರಿಕೇಟಿಗರಾದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮುಂತಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.