ಪಾಟ್ನಾ: ಜೂನ್ 21ಅಂತಾರಾಷ್ಟ್ರೀಯ ಯೋದ ದಿನಾಚರಣೆಯಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಯೋಗ ಶಿಬಿರಕ್ಕೆ ತೆರಳಿ ಮುಸ್ಲಿಂ ಯೋಗ ಗುರುವಿನಿಂದ ಯೋಗ ಕಲಿತುಕೊಳ್ಳಲಿದ್ದಾರೆ.
ಯೋಗ ತಜ್ಞ ಮೊಹಮ್ಮದ್ ತಮನ್ನಾ ಮತ್ತು ಅಶೋಕ್ ಸರ್ಕಾರ್ ಅವರು ಷಾ ಅವರಿಗೆ ಮೊಯಿನುಲ್ ಹಕ್ ಸ್ಟೇಡಿಯಂನಲ್ಲಿ ಯೋಗ ಕಲಿಸಿಕೊಡಲಿದ್ದಾರೆ ಎಂದು ಬಿಹಾರ್-ಜಾರ್ಖಾಂಡ್ ಪತಾಂಜಲಿ ಪೀಠದ ಉಸ್ತುವಾರಿ ಅಜಿತ್ ಕುಮಾರ್ ತಿಳಿಸಿದ್ದಾರೆ.
ತಮನ್ನಾ ಅವರು ಷಾ ಅವರಿಗೆ ಯೋಗ ಸಲಹೆಗಳನ್ನೂ ನೀಡಲಿದ್ದಾರೆ. ಬಿಹಾರದ 12 ಕೇಂದ್ರ ಸಚಿವರುಗಳು ಕೂಡ ಪಾಟ್ನಾದಲ್ಲಿ ನಡೆಯಲಿರುವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನೊಂದೆಡೆ ಇವರುಗಳು ಯೋಗ ತರಬೇತಿ ಪಡೆದುಕೊಳ್ಳುವುದನ್ನು ಬಿಹಾರದ ಇತರ ರಾಜಕೀಯ ಪಕ್ಷಗಳು, ಶೋ ಆಫ್ ಮತ್ತು ಪ್ರಚಾರಕ್ಕಾಗಿ ಮಾಡುತ್ತಿರುವುದು ಎಂದು ಟೀಕಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.