ನವದೆಹಲಿ: ವಿಮಾನಗಳಲ್ಲಿ ಇರುವ ಬ್ಲ್ಯಾಕ್ ಬಾಕ್ಸ್ ಮಾದರಿಯ ವ್ಯವಸ್ಥೆಗಳನ್ನು ರೈಲಿನ ಲೊಕೊಮೋಟಿವ್ಗಳಲ್ಲಿ ಅಳವಡಿಸುವ ಸಲುವಾಗಿ ರೈಲ್ವೇಯು ರೂ.100 ಕೋಟಿಗಳನ್ನು ಬಿಡುಗಡೆ ಮಾಡಿದೆ.
ರೈಲ್ವೇಯ ರಾಜ್ಯ ಖಾತೆ ಸಚಿವ ರಾಜೆನ್ ಗೋಹೆನ್ ಅವರು ಈ ಬಗ್ಗೆ ಲೋಕಸಭೆಗೆ ಲಿಖಿತ ಮಾಹಿತಿಯನ್ನು ನೀಡಿದ್ದಾರೆ.
‘3,500 ಲೊಕೊ ಕ್ಯಾಬ್ ಆಡಿಯೋ ರೆಕಾರ್ಡಿಂಗ್(LCAVR) ಮತ್ತು ಕ್ರ್ಯೂ ವಾಯ್ಸ್ ಮತ್ತು ವಿಡಿಯೋ ರೆರ್ಕಾಡಿಂಗ್ ಸಿಸ್ಟಮ್(CVVRS)ಗಳನ್ನು ರೈಲಿಗೆ ಅಳವಡಿಸುವ ಸಲುವಾಗಿ 2018-18ರ ಬಜೆಟ್ನಲ್ಲಿ ರೂ.100.40 ಕೋಟಿಗಳನ್ನು ಮೀಸಲಿಡಲಾಗಿದೆ’ ಎಂದು ತಿಳಿಸಿದ್ದಾರೆ.
ಈಗಾಗಲೇ 23 ಡಿಸೇಲ್ ಲೊಕೊಮೋಟಿವ್ ಮತ್ತು 3 ಎಲೆಕ್ಟ್ರಿಕ್ ಲೊಕೊಮೋಟಿವ್ ಸೇರಿದಂತೆ ಒಟ್ಟು 26 ಲೊಕೊಮೋಟಿವ್ಗಳಿಗೆ ಈಗಾಗಲೇ ಮತ್ತು ಡಿವೈಸ್ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಅಪಘಾತಕ್ಕೆ ಕಾರಣವಾದ ಅಂಶಗಳು, ಕಾರ್ಯಾಚರಣಾ ಶೈಲಿ, ಹ್ಯುಮನ್ ಫ್ಯಾಕ್ಟರ್ಗಳನ್ನು ಅರ್ಥ ಮಾಡಿಕೊಳ್ಳಲು ಇವುಗಳ ಪ್ರಯೋಜನಕಾರಿಯಾಗಿವೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.