ಮುಂಬಯಿ: ಭಾರತದ ಆಧುನಿಕ ವಾಸ್ತುಶಿಲ್ಪಿ ಎಂದೇ ಖ್ಯಾತರಾಗಿರುವ ಚಾರ್ಲ್ಸ್ ಕೊರೆಯಾ ಅವರು ಮಂಗಳವಾರ ರಾತ್ರಿ ನಿಧನ ಹೊಂದಿದ್ದಾರೆ. ಧೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ವಾಸ್ತುಶಿಲ್ಪ ಬೆಳೆಸುವಲ್ಲಿ ಕೊರೆಯಾ ಅವರ ಪಾತ್ರ ಮಹತ್ವದ್ದಾಗಿದೆ. ಅಹ್ಮದಾಬಾದ್ನ ಮಹಾತ್ಮಗಾಂಧಿ ಮೆಮೋರಿಯಲ್ ಮತ್ತು ಮಧ್ಯಪ್ರದೇಶದ ಅಸೆಂಬ್ಲಿ ಕಟ್ಟಡ ಸೇರಿದಂತೆ ಹಲವು ಅಮೋಘ ಶಿಲ್ಪಗಳ ಹಿಂದಿನ ಸೃಷ್ಟಿಕರ್ತನೂ ಇವರಾಗಿದ್ದಾರೆ.
1970ರಲ್ಲಿ ನವಿ ಮುಂಬಯಿಯ ಚೀಫ್ ಆರ್ಕಿಟೆಕ್ಟ್ ಆಗಿದ್ದ ಇವರು, ಬಂದರು ಸೇರಿದಂತೆ ಆಧುನಿಕ ಮುಂಬಯಿ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಕಡಿಮೆ ವೆಚ್ಚದ ಮನೆ ನಿರ್ಮಾಣಕ್ಕೆ ಇವರು ಹೆಸರುವಾಸಿಯಾಗಿದ್ದಾರೆ.
ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಇವರು ಬಾಜನರಾಗಿದ್ದಾರೆ. 1984ರಲ್ಲಿ ಇವರು ಪ್ರಕೃತಿ ರಕ್ಷಣೆ ಮತ್ತು ನಗರ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಮುಂಬಯಿನಲ್ಲಿ ಅರ್ಬನ್ ಡಿಸೈನ್ ರಿಸಚ್ ಇನ್ಸ್ಟಿಟ್ಯೂಟ್ನ್ನು ಸ್ಥಾಪಿಸಿದರು.
ಕೊರೆಯಾ ನಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾಉ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.