News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಟಲ್­ಜೀ ಜನ್ಮ ದಿನದಂದು ಉದ್ಘಾಟನೆಯಾಗಲಿದೆ ದೇಶದ ಅತಿ ದೊಡ್ಡ ರಸ್ತೆ – ರೈಲ್ವೇ ಸೇತುವೆ

ಭಾರತದ ಅತ್ಯಂತ ಉದ್ದವಾದ ರಸ್ತೆ ರೈಲು ಸೇತುವೆ BOGIBEEL ಬ್ರಿಡ್ಜ್­ನ್ನು ಇದೆ ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ ಹೆಮ್ಮೆಯ ಪ್ರಧಾನಿ ಮೋದಿಜೀ.

ಡಿ. 25 ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಈ ದಿನವನ್ನು ಸರ್ಕಾರ ‘ಗುಡ್ ಗರ್ವನನ್ಸ್ ಡೇ’ ಆಗಿ ಆಚರಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ದೇಶದ ಅತೀ ಉದ್ದದ ರಸ್ತೆ ರೈಲು ಸೇತುವೆಯನ್ನು ಮೋದಿ ಈ ದಿನದಂದೇ ಉದ್ಘಾಟಿಸಲಿದ್ದಾರೆ.

ಅಸ್ಸಾಂ ಜನತೆಯ ಹಲವು ದಶಕಗಳ ಬೇಡಿಕೆ ಆಗಿತ್ತು ಈ ಸೇತುವೆ. ಮೋದಿಜೀ ಮತ್ತು ಅಸ್ಸಾಂನ ಸರ್ಬಾನಂದ್ ಸೋನುವಾಲ್ ಸರಕಾರದ ನಿರಂತರ ಪ್ರಯತ್ನದಿಂದಾಗಿ ಬ್ರಹ್ಮಪುತ್ರ ನದಿಯ ಉತ್ತರ ಮತ್ತು ದಕ್ಷಿಣ ದಡಕ್ಕೆ ಅಡ್ಡವಾಗಿ ಕಟ್ಟಲಾಗಿರುವ 4.94 km ಉದ್ದದ ಈ ಸೇತುವೆ ಹದಿನಾರು ವರುಷಗಳ ಬಳಿಕ ಕೊನೆಗೂ ಸಂಚಾರಕ್ಕೆ ಸಿದ್ಧವಾಗಿದೆ.

ಕೆಲಸದ ಆರಂಭ ಅಟಲ್ ಜೀ ಸರಕಾರದಲ್ಲಿ – ಮುಕ್ತಾಯಗೊಂಡಿದ್ದು ಮೋದಿಜೀ ಸರಕಾರದಲ್ಲಿ :

ಅಟಲ್ ಬಿಹಾರಿ ವಾಜಪೇಯಿ ಸರಕಾರ 2002 ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಸೇತುವೆಯ ಅಂದಿನ ಅಂದಾಜು ವೆಚ್ಚ ಸುಮಾರು 1400 ಕೋಟಿ. ಬಳಿಕ ಬಂದ ಯುಪಿಎ ಸರಕಾರದ ನೀತಿಯಿಂದಾಗ ಕಾಮಗಾರಿ ಕುಂಟುತ್ತಾ ಸಾಗಿತು. ಸೇನೆಯ ಮತ್ತು ರಕ್ಷಣಾತ್ಮಕ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದ್ದ ಈ ಸೇತುವೆಗೆ ಒತ್ತು ಕೊಟ್ಟ ಮೋದಿಜೀ ಸರಕಾರ ತ್ವರಿತ ಕಾಮಗಾರಿಗೆ ಸೂಚಿಸಿದ್ದರು.

ಪ್ರಸ್ತುತ 5,800 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಈ ಸೇತುವೆಯ ಮೇಲ್ಭಾಗದಲ್ಲಿ ಮೂರು ಪಥದ ರಸ್ತೆ ಕೆಳಭಾಗದಲ್ಲಿ ದ್ವಿಪಥದ ರೈಲ್ವೆ ಹಳಿ ಹೊಂದಿದೆ. ವರದಿಯ ಪ್ರಕಾರ ಈ ಸೇತುವೆಯಿಂದಾಗಿ ಅಸ್ಸಾಂ ಮತ್ತು ಅರುಣಾಚಲವನ್ನು ಸಂಪರ್ಕಿಸುವ ಅಂತರ 600 ಕಿ.ಮೀ ನಿಂದ 100 ಕಿ.ಮೀಗೆ ಇಳಿಸುತ್ತದೆ ಎಂದು ಅಂದಾಜಿಸಲಾಗಿದೆ. ಅಂದ ಹಾಗೇ ಅಟಲ್‌ಜೀ ಕನಸಿನ ಯೋಜನೆಯಾದ ಈ ಸೇತುವೆಗೆ ಅಟಲ್ ಸೇತು ಎಂದು ಹೆಸರಿಡಲು ಒತ್ತಾಯವೂ ಕೇಳಿ ಬರುತ್ತಿದೆ.

ಪ್ರಶಾಂತ್ ಎಮ್. ಉಪ್ಪಿನಂಗಡಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top