ವಾಷಿಂಗ್ಟನ್: ಯೆಮೆನ್ನಲ್ಲಿ ನಡೆಸಲಾದ ದ್ರೋನ್ ದಾಳಿಯಲ್ಲಿ ಅರಬೀಯನ್ ಪೆನಿನ್ಸುಲಾದಲ್ಲಿನ ಅಲ್ಖೈದಾದ ಎರಡನೇ ಮುಖಂಡ ನಸೀರ್ ಅಲ್ ವಾಹಿಶಿ ಹತನಾಗಿದ್ದಾನೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. ಒಸಾಮಾ ಬಿನ್ ಲಾದೆನ್ ಹತ್ಯೆ ಬಳಿಕ ಅಮೆರಿಕಾಗೆ ದೊರೆತ ಎರಡನೇ ದೊಡ್ಡ ಜಯ ಇದಾಗಿದೆ.
ವಾಹಿಶಿ ಮೃತನಾಗಿರುವ ವಿಷಯವನ್ನು ಅರಬಿಯನ್ ಪೆನಿಸುಲಾದಲ್ಲಿನ ಅಲ್ಖೈದಾ ಸಂಘಟನೆ ವಿಡಿಯೋ ಹೇಳಿಕೆಯಲ್ಲಿ ಹೇಳಿಕೊಂಡಿದೆ.
ವಾಹಿಶಿ ಹತ್ಯೆಯಿಂದಾಗಿ ಭಯಾನಕ ಉಗ್ರ ಸಂಘಟನೆ ಅಲ್ಖೈದಾಗೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನಡೆಯನ್ನುಂಟಾಗಿದೆ ಎಂದು ವೈಟ್ಹೌಸ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
2009ರಲ್ಲಿ ಅಲ್ಖೈದಾ ಅರಬೀಯನ್ ಪೆನಿಸುಲಾ ಸಂಘಟನೆ ಸ್ಥಾಪನೆಯಾದಗಿನಿಂದಲೂ ವಾಹಿಶಿ ಅದರ ಮುಖಂಡತ್ವವನ್ನು ವಹಿಸಿಕೊಳ್ಳುತ್ತಿದ್ದ, ಅಮೆರಿಕ ಮತ್ತು ಅರಬಿಯನ್ ಪೆನಿನ್ಸುಲಾದಲ್ಲಿನ ಅಮೆರಿಕ ಹಿತಾಸಕ್ತಿಗಳ ವಿರುದ್ಧ ಹೋರಾಡುವುದಕ್ಕಾಗಿ ಅಲ್ಖೈದಾದ ಅಂಗಸಂಸ್ಥೆಯಾಗಿ ಇದನ್ನು ಸ್ಥಾಪನೆ ಮಾಡಲಾಯಿತು.
ಮುಗ್ಧ ಯಮನಿಗಳ, ಹಲವಾರು ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ಹತ್ಯೆಗೆ ಈತ ಪ್ರಮುಖ ಕಾರಣನಾಗಿದ್ದಾನೆ. ಇದೀಗ ಆತನ ಹತ್ಯೆಯ ಮೂಲಕ ಅಲ್ಖೈದಾ ಅರಬಿಯನ್ ಪೆನಿನ್ಸುಲಾದ ಬಲ ಕುಗ್ಗಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.