ನವದೆಹಲಿ: ಅಯೋಧ್ಯಾ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ನಾಯಕಿ ಉಮಾ ಭಾರತಿಯವರು, 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಶುದ್ಧೀಕರಣದ ಬಗೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.
‘2019ರ ಜನವರಿಯಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಅನುಮತಿಯನ್ನು ಪಡೆದುಕೊಂಡು ಒಂದೂವರೆ ವರ್ಷಗಳ ಗಂಗಾ ಯಾತ್ರೆಯನ್ನು ನಡೆಸುತ್ತೇನೆ. ಗಂಗಾ ನದಿ ದಂಡೆಯಲ್ಲೇ ಕಾಲ ಕಳೆಯುತ್ತೇನೆ. ನಂಬಿಕೆ ಮತ್ತು ಭರವಸೆಯ ಸಂಕೇತವಾದ ರಾಮ ಮಂದಿರ ನಿರ್ಮಾಣಕ್ಕೂ ಶ್ರಮಿಸುತ್ತೇನೆ’ ಎಂದು ಉಮಾ ಭಾರತಿ ಹೇಳಿದ್ದಾರೆ.
ಅಲ್ಲದೇ ರಾಮಂದಿರ ನಿರ್ಮಾಣ ಮಾಡಲು ಪ್ರತಿಭಟನೆ, ಸತ್ಯಾಗ್ರಹಗಳ ಅಗತ್ಯವಿಲ್ಲ, ಎಲ್ಲಾ ಪಕ್ಷಗಳ ಸಮ್ಮತಿಯೊಂದಿಗೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಿದ್ದಾರೆ.
ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದ ಮಾತ್ರಕ್ಕೆ ರಾಜಕೀಯ ಬಿಡುತ್ತೇನೆ ಎಂದರ್ಥವಲ್ಲ, ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.