ಮೇಘಾಲಯದ ವೆಸ್ಟ್ ಗಾರೋ ಎಂಬ ಗುಡ್ಡಗಾಡು ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಆದರೆ ಪ್ರವಾಸಿಗರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಲ್ಲಿಗೆ ಬಂದಂತೆ ಹೆಚ್ಚು ಹೆಚ್ಚು ಕಸದ ರಾಶಿಗಳು ಇಲ್ಲಿ ಬಂದು ಬೀಳುತ್ತವೆ. ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಬಾಟಲ್, ಲಕೋಟೆಗಳನ್ನು ಸ್ವಚ್ಛ ಮಾಡುವುದೇ ಇಲ್ಲಿನ ಜನರಿಗೆ ದೊಡ್ಡ ಸಾಹಸ. ಆದರೆ ಈಗ ಅಲ್ಲಿ ಈ ಸಮಸ್ಯೆಯನ್ನು ತೊಡೆದು ಹಾಕಲು ಪರಿಸರ ಸ್ನೇಹಿ ಉಪಾಯವನ್ನು ಮಾಡಲಾಗಿದೆ, ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಅಲ್ಲಿ ಪರಿಸರ ಸ್ನೇಹಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ.
ಸ್ವಚ್ಛ ಭಾರತ್ ಮಿಶನ (ಗ್ರಾಮೀಣ್) ಅಡಿಯಲ್ಲಿ, ಜಿಲ್ಲಾಡಳಿತ ಅಲ್ಲಿ ಸಮರ್ಪಕ ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದೆ. ಇದರ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿದೆ.
ಈಗಾಗಲೇ ಪ್ಲಾಸ್ಟಿಕ್ ಬಳಸಿ ಶೌಚಾಲಯ ನಿರ್ಮಾಣ ಮಾಡುವ ಕಾರ್ಯವನ್ನು ವೆಸ್ಟ್ ಚಂಪಾರಣ್, ತ್ರಿಚಿ, ಜೇಮ್ಶೆಡ್ಪುರಗಳಲ್ಲಿ ನಡೆಸಲಾಗುತ್ತಿದೆ. ಇದೀಗ ಈ ಉಪಾಯವನ್ನು ವೆಸ್ಟ್ ಗಾರೋನಲ್ಲೂ ಅಳವಡಿಸಲಾಗುತ್ತಿದೆ. ಅಲ್ಲಿನ ಡಿಸಿ ರಾಮ್ ಸಿಂಗ್ ಅವರ ಕಾರ್ಯ ಇದಾಗಿದೆ, ಹೊರಗಿನ ಕಾರ್ಮಿಕರನ್ನು ಇದಕ್ಕಾಗಿ ಬಳಸುವ ಬದಲು, ಸ್ಥಳೀಯರಿಗೆಯೇ ಈ ತಂತ್ರಜ್ಞಾನವನ್ನು ಕಲಿಸಿಕೊಡಲಾಗುತ್ತಿದೆ.
ಪ್ಲಾಸ್ಟಿಕ್ ಬಾಟಲಿಗಳಿಗೆ ಮರಳನ್ನು ತುಂಬಿಸಿ ಅದನ್ನು ಇಟ್ಟಿಗೆಯಷ್ಟೇ ಗಟ್ಟಿಗೊಳಿಸಲಾಗುತ್ತದೆ. ಬಳಿಕ ಅದನ್ನು ತರಬೇತಿ ಹೊಂದಿದ ಕಾರ್ಮಿಕರು ಒಂದೊಂದಾಗಿಯೇ ಇಟ್ಟು ಗೋಡೆಯಂತೆ ಮಾಡುತ್ತಾರೆ, ಬಳಿಕ ಅದನ್ನು ಸಿಮೆಂಟ್ನಿಂದ ಮುಚ್ಚುತ್ತಾರೆ. ಇದರಿಂದ ಬಿಸಿಲಿಗೂ ಬಾಟಲಿ ಕರಗುವುದಿಲ್ಲ. ನೋಡಲು ಅಪ್ಪಟ ಇಟ್ಟಿಗೆಯಿಂದ ಕಟ್ಟಿದ ಗೋಡೆಯಂತೆಯೇ ಇದು ಕಾಣುತ್ತದೆ. ಇತರ ಶೌಚಾಲಯಗಳಿಗೆ ಹೋಲಿಸಿದರೆ ಇದರ ನಿರ್ಮಾಣ ವೆಚ್ಚ ಕೂಡ ಕಡಿಮೆ.
ಇದೇ ಐಡಿಯಾವನ್ನು ಉಪಯೋಗಿಸಿ ಈ ಜಿಲ್ಲೆಯಲ್ಲಿ 15 ಸಾವಿರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ವೆಸ್ಟ್ ಗಾರೋ ಜಿಲ್ಲೆ ಸಂಪೂರ್ಣ ಬಯಲು ಶೌಚಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.