ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ರೈಲು, ಟ್ರೈನ್ 18 ಭಾನುವಾರ ಗಂಟೆಗೆ 180 ಕಿಲೋ ಮೀಟರ್ ಸಾಗಿ ಊಹೆಗಿಂತಲೂ ಉತ್ತಮ ಸಾಧನೆಯನ್ನು ಮಾಡಿದೆ.
ಕೋಟ-ಸವಾಯ್ ಮಧೋಪುರ ಸೆಕ್ಷನ್ನಲ್ಲಿ ಭಾನುವಾರ ಟ್ರೈನ್ 18 ನ ಪ್ರಾಯೋಗಿಕ ಸಂಚಾರ ಪರೀಕ್ಷೆಯನ್ನು ನಡೆಸಲಾಗಿತ್ತು.
ಗಂಟೆಗೆ 160 ಕಿಲೋ ಮೀಟರ್ ಸಾಗುವಂತೆ ಈ ರೈಲನ್ನು ವಿನ್ಯಾಸಪಡಿಸಲಾಗಿದೆ. ಆದರೆ ಇದು ಗಂಟೆಗೆ 180 ಕಿಮೀ ಸಂಚರಿಸುವ ಮೂಲಕ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ.
ಇಷ್ಟು ವೇಗದಲ್ಲಿ ಚಲಿಸುತ್ತಿರುವ ದೇಶದ ಮೊತ್ತ ಮೊದಲ ರೈಲು ಇದೆಂದು ಈ ರೈಲನ್ನು ವಿನ್ಯಾಸಪಡಿಸಿದ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಮುಖ್ಯಸ್ಥ ಎಸ್. ಮಣಿ ತಿಳಿಸಿದ್ದಾರೆ.
2019ರ ಜನವರಿಯಿಂದ ಈ ರೈಲು ಅಧಿಕೃತ ಸಂಚಾರವನ್ನು ಆರಂಭಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.