ಬ್ಯುನೋಸ್: ಯೋಗ ಭಾರತ ಮತ್ತು ಅರ್ಜೆಂಟೀನಾ ನಡುವಣ ಸೇತುವೆಯಾಗಿದ್ದು, ಉಭಯ ದೇಶಗಳ ನಡುವಣ ಜನರನ್ನು ಬೆಸೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅರ್ಜೆಂಟೀನಾದಲ್ಲಿ ಆಯೋಜನೆಗೊಂಡಿದ್ದ ಯೋಗ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯೋಗ ಆರೋಗ್ಯ ಮತ್ತು ಶಾಂತಿಯನ್ನು ಪಡೆಯಲು ಭಾರತ ಜಗತ್ತಿಗೆ ನೀಡಿದ ಉಡುಗೊರೆ’ ಎಂದು ಬಣ್ಣಿಸಿದರು.
‘ನಾನು 15 ಸಾವಿರ ಕಿಲೋ ಮೀಟರ್ ಕ್ರಮಿಸಿ 24 ಗಂಟೆಗಳನ್ನು ವ್ಯಯಿಸಿ ಕೆಲವೇ ಗಂಟೆಗಳ ಹಿಂದೆ ಇಲ್ಲಿಗೆ ಆಗಮಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಸಕ್ತಿಯದಿಂದಾಗಿ ನಾನು ಭಾರತದಿಂದ ಹೊರಗಿದ್ದೇನೆ ಎಂಬ ಭಾವ ನನಗೆ ಬರಲಿಲ್ಲ’ ಎಂದು ಹಿಂದಿಯಲ್ಲಿ ಮೋದಿ ಹೇಳಿದರು.
‘ಯೋಗ ಫಾರ್ ಪೀಸ್’ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದ ಅವರು, ಯೋಗ ನಮ್ಮ ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿ ಇಡುತ್ತದೆ. ನಮ್ಮ ದೇಹವನ್ನು ಬಲಪಡಿಸಿ, ಮನಸ್ಸನ್ನು ಶಾಂತಿಯುತಗೊಳಿಸುತ್ತದೆ’ ಎಂದರು.
ಮನಸ್ಸಲ್ಲಿ ಶಾಂತಿ ಇದ್ದರೆ, ಕುಟುಂಬ, ಸಮಾಜ, ದೇಶ, ಜಗತ್ತಲ್ಲಿ ಶಾಂತಿ ಇರುತ್ತದೆ ಎಂದರು.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.