ಅಮರಾವತಿ: ಭಾರತ ಕೌಶಲ್ಯ ವರದಿ 2019 ಬಿಡುಗಡೆಗೊಂಡಿದ್ದು, ಇದರನ್ವಯ ಉದ್ಯೋಗವಕಾಶದಲ್ಲಿ ಆಂಧ್ರಪ್ರದೇಶ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ನಂತರ ಸ್ಥಾನವನ್ನು ರಾಜಸ್ಥಾನ ಮತ್ತು ಹರಿಯಾಣ ಪಡೆದುಕೊಂಡಿದೆ.
ದೇಶದ ಎಲ್ಲಾ ವಲಯದಲ್ಲೂ ಬಿಟೆಕ್ ಮತ್ತು ಬಿಇ ಮಟ್ಟದ ಉದ್ಯೋಗಾವಕಾಶಗಳು ಏರಿಕೆಯಾಗಿದ್ದು, ಶೇ.63.11ರ ಹೊಸ ಗಡಿಯನ್ನು ತಲುಪಿದೆ. ಕಳೆದ ವರ್ಷ ಇದು ಶೇ.43.08ರಲ್ಲಿತ್ತು.
ಎಂಬಿಎ ಮತ್ತು ಪಾಲಿಟೆಕ್ನಿಕ್ ಮಟ್ಟದ ಉದ್ಯೋಗವಕಾಶಗಳು ಶೇ.47.18 ಮತ್ತು ಶೇ.45.90ರಷ್ಟರಲ್ಲಿ ಇದೆ.
ಇಂಜಿನೀಯರಿಂಗ್ ವಿಭಾಗ ಅತಿ ಹೆಚ್ಚು ಉದ್ಯೋಗಾವಕಾಶವಾಗಿ ಮುಂದುವರೆದಿದೆ, ಆದರೆ ಎಮ್ಬಿಎ ಪದವಿ ತನ್ನ ಹೊಳಪನ್ನು ಕಳೆದುಕೊಂಡಂತೆ ಕಾಣುತ್ತಿದೆ. ಈ ವರ್ಷದ ಅಂಕಿ ಅಂಶಗಳ ಪ್ರಕಾರ, ಅಂತಿಮ ವರ್ಷದ ಎಂಜಿನೀಯರಿಂಗ್ ಪದವೀಧರರ ಪೈಕಿ 57%ರಷ್ಟು ಜನ ಉದ್ಯೋಗ ಹೊಂದಲಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷಕ್ಕೆ(52%) ಹೋಲಿಸಿದರೆ ಇದು 5%ರಷ್ಟು ಏರಿಕೆಯಾಗಿರುವುದನ್ನು ಕಾಣಬಹುದು.
ಆಂಧ್ರಪ್ರದೇಶ ನೆಚ್ಚಿನ ನೇಮಕಾತಿ ತಾಣವಾಗಿದ್ದು, ಇಲ್ಲಿ ಮಹಿಳೆ ಮತ್ತು ಪುರುಷರಿಗೆ ಸಮಾನ ಅವಕಾಶಗಳು ಲಭ್ಯವಿದೆ. ಪ್ರತಿಭಾ ಗುಣಮಟ್ಟದಲ್ಲೂ ಇದು ಟಾಪ್ ಸ್ಥಾನವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.