ಇತ್ತೀಚಿಗೆ ಮಾವೋವಾದಿ ಭಯೋತ್ಪಾದಕರ ಬೆಂಬಲಿಗರ ಮನೆಗಳ ಮೇಲೆ ನಡೆದ ದಾಳಿಯ ವೇಳೆ ದೊರೆತ ಪತ್ರವೊಂದರಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಪತ್ತೆಯಾಗಿರುವುದು ಅತ್ಯಂತ ಆಘಾತಕಾರೀ ಸಂಗತಿಯಾಗಿದೆ.
ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು ಮತ್ತು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವುದು ನಕ್ಸಲ್ ಭಯೋತ್ಪಾದಕರ ಬೆಂಬಲಿಗರಿಂದ ವಶಪಡಿಸಿಕೊಳ್ಳಲಾದ ಪತ್ರಗಳಿಂದ ಬಹಿರಂಗವಾಗಿತ್ತು. ಮಾಧ್ಯಮಗಳ ವರದಿಗಳ ಪ್ರಕಾರ 2017ರ ಸೆಪ್ಟೆಂಬರ್ 25 ರಂದು ಕಾಮ್ರೇಡ್ ಪ್ರಕಾಶ್ ಎಂಬುವವರು ಸುರೇಂದ್ರ ಎಂಬ ವ್ಯಕ್ತಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆಯನ್ನು ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಹಾಗಾದರೆ ಪುಣೆ ಪೊಲೀಸರು ನಡೆಸಿದ್ದ ದಾಳಿಯ ವೇಳೆ ಸಿಕ್ಕಿರುವ ಆ ಪತ್ರದಲ್ಲಿ ಏನಿದೆ?
ವರದಿಗಳ ಪ್ರಕಾರ ಆರೋಪಪಟ್ಟಿಯಲ್ಲಿ ವಿವರಿಸಲಾಗಿರುವಂತೆ ಮಾವೋವಾದಿ ಭಯೋತ್ಪಾದಕರ ಬೆಂಬಲಿಗರ ಮನೆಯಲ್ಲಿ ದೊರೆತ ಆ ಪತ್ರದಲ್ಲಿ ಈ ರೀತಿ ಬರೆಯಲಾಗಿದೆ;
“ದೇಶಾದ್ಯಂತ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ನಾವು ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು. ಸರ್ಕಾರಿ ಪಡೆಗಳು ಎಂದಿಗೂ ವಿದ್ಯಾರ್ಥಿಗಳೆಡೆಗೆ ಮೃದು ಧೋರಣೆ ಹೊಂದಿರುತ್ತವೆ. ಇದೇ ಮುಂದೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸರ್ಕಾರವನ್ನು ಅನಾನುಕೂಲ ಪರಿಸ್ಥಿತಿ ಎದುರಿಸುವಂತೆ ಮಾಡುತ್ತದೆ. ಈ ರೀತಿ ಪ್ರತಿಭಟನೆಗಳನ್ನು ನಡೆಸುವುದಕ್ಕೆ ಸಹಕರಿಸಲು ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಪ್ರತಿಭಟನೆಗಳಿಗೆ ಹಣದ ಸಹಾಯವನ್ನೂ ಮಾಡಲು ಒಪ್ಪಿಕೊಂಡಿದ್ದಾರೆ, ಈ ಕುರಿತು ನಮ್ಮ ಸ್ನೇಹಿತನನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು (ಕಾಂಗ್ರೆಸ್ ಪಕ್ಷದ ಹಿರಿಯ ರಾಷ್ಟ್ರೀಯ ನಾಯಕ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ).”
ಆ ಪತ್ರದಲ್ಲಿ ಉಲ್ಲೇಖಿಸಲಾಗಿರುವ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿರುವ ದೂರವಾಣಿ ಸಂಖ್ಯೆಗಳೆರಡೂ ಒಂದೇ ಆಗಿವೆ ಎಂದು ಪುಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿರುವ ಬಗ್ಗೆಯೂ ಕೂಡಾ ವರದಿಯಾಗಿದೆ.
ಪ್ರಧಾನಿ ಹತ್ಯೆಗೆ ಸಂಚು, ದೇಶದ್ರೋಹ, ದೇಶದ ವಿರುದ್ಧ ಸಮರ ಸಾರಲು ಮುಂತಾದ ಅತ್ಯಂತ ಗಂಭೀರ ಆರೋಪಗಳಿಂದ ಕೂಡಿದ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರ ಹೆಸರು ಕೇಳಿಬಂದಿರುವುದು ನಿಜವಾದರೂ ಸಾಮಾನ್ಯ ವ್ಯಕ್ತಿಗಳ ಮೇಲೆ ಅಂತಹಾ ಆರೋಪಗಳು ಕೇಳಿಬಂದಾಗ ಕ್ರಮ ಕೈಗೊಂಡಷ್ಟೇ ಸಲೀಸಾಗಿ ಅಂತಹಾ ಪ್ರಭಾವೀ ಹಿರಿಯ ನಾಯಕರುಗಳ ಮೇಲೂ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ ಎನ್ನುವುದೇ ಇದೀಗ ಈ ದೇಶದ ಮುಂದಿರುವ ಪ್ರಶ್ನೆ. ಈಗಾಗಲೇ “ಧೈರ್ಯವಿದ್ದರೆ ನನ್ನನ್ನು ಬಂಧಿಸಿ” ಎಂದು ಸವಾಲು ಹಾಕುವ ಧಾಟಿಯಲ್ಲಿ ಮಾತನಾಡಿರುವ ದಿಗ್ವಿಜಯ್ ಸಿಂಗ್ ಅವರನ್ನು ಬಂಧಿಸುವುದಾಗಲೀ ಅಥವಾ ಅವರಿಂದ ಆ ಬಗ್ಗೆ ಹೇಳಿಕೆ ಪಡೆಯುವುದಾಗಲೀ ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ.
ಹಾಗಾದರೆ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಪ್ರಧಾನಿ ಹತ್ಯೆಗೆ ಸಂಚು, ದೇಶದ್ರೋಹ, ದೇಶದ ವಿರುದ್ಧ ಸಮರ ಸಾರಲು ಪ್ರಯತ್ನ ಮುಂತಾದ ಅತ್ಯಂತ ಗಂಭೀರ ಆರೋಪಗಳಿಂದ ಕೂಡಿದ ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರ ಹೆಸರು ಕೇಳಿಬಂದಿರುವುದು ಒಂದು ವೇಳೆ ನಿಜವೇ ಆದರೂ ಅವರ ಮೇಲೆ ಕ್ರಮ ಕೈಗೊಳ್ಳುವುದು ಸಾಧ್ಯವಿದೆಯೇ?
ಆ ಬಗ್ಗೆ ಸದ್ಯಕ್ಕಂತೂ ಏನನ್ನೂ ಹೇಳಲು ಸಾಧ್ಯವಿಲ್ಲ. ಹಾಗಾದರೆ ಮುಂದೇನು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.