ಬೆಂಗಳೂರು: ದೇಶದಾದ್ಯಂತ ಹಲವು ನಗರಗಳಲ್ಲಿ ನಡೆದ ಅಧ್ಯಯನಗಳ ಪ್ರಕಾರ ಮುಂಬೈ, ದೆಹಲಿ-ಎನ್ಸಿಆರ್, ಹೈದರಾಬಾದ್ಗಳಿಗಿಂತ ಬೆಂಗಳೂರು ಅತ್ಯುತ್ತಮ ವೇತನ ನೀಡುತ್ತದೆ ಎಂದು ಲಿಂಕ್ಡ್ಇನ್ ಅಧ್ಯಯನದಿಂದ ತಿಳಿದು ಬಂದಿದೆ.
ಹಾರ್ಡ್ವೇರ್ & ನೆಟ್ವರ್ಕಿಂಗ್ ಉದ್ಯೋಗಿಗಳು ವರ್ಷಕ್ಕೆ 15 ಲಕ್ಷ ರೂ. ಗಳಿಸಿದರೆ, ಸಾಫ್ಟ್ವೇರ್ ಉದ್ಯೋಗಿಗಳು ಸುಮಾರು 12 ಲಕ್ಷ ರೂ.(ವರ್ಷಕ್ಕೆ) ಮತ್ತು ಗ್ರಾಹಕ ಸಂಬಂಧಿತ ಉದ್ಯೋಗಿಗಳು ವರ್ಷಕ್ಕೆ 9 ಲಕ್ಷ ರೂ. ಪಡೆದುಕೊಳ್ಳುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಹಾರ್ಡ್ವೇರ್ & ನೆಟ್ವರ್ಕಿಂಗ್, ಸಾಫ್ಟ್ವೇರ್ & ಐಟಿ ಸೇವೆಗಳು ಮತ್ತು ಗ್ರಾಹಕ ಸೇವೆ ಈ ಮೂರು ವಿಭಾಗಗಳು ಭಾರತದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ಕ್ಷೇತ್ರಗಳಾಗಿವೆ ಎಂದು ಲಿಂಕ್ಡ್ಇನ್ ನಡೆಸಿದ ವೇತನ ಆಧಾರಿತ ಅಧ್ಯಯನದಲ್ಲಿ ಹೇಳಿದೆ. ಲಿಂಕ್ಡ್ಇನ್ ತನ್ನ ಪ್ಲ್ಯಾಟ್ಫಾರ್ಮ್ನಲ್ಲಿರುವ ಮಾಹಿತಿಯನ್ನು ಆಧರಿಸಿ ಈ ಅಧ್ಯಯನ ನಡೆಸಿದೆ.
ನಗರಗಳ ವಿಭಾಗದಲ್ಲಿ, ಬೆಂಗಳೂರು ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸಂಬಳವನ್ನು ನೀಡುತ್ತದೆ. ನಂತರದ ಸ್ಥಾನಗಳನ್ನು ಮುಂಬೈ ಮತ್ತು ದೆಹಲಿ ನಗರಗಳು ಪಡೆದಿವೆ.
ಲಿಂಕ್ಡ್ಇನ್ ಭಾರತದಲ್ಲಿ 50 ದಶಲಕ್ಷ ಬಳಕೆದಾರರನ್ನು ಹೊಂದಿದೆ (ಯುಎಸ್ ನಂತರ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಬಳಕೆದಾರರು). ಇದು ಕಳೆದ ಎರಡು ತಿಂಗಳುಗಳಿಂದ ಬಳಕೆದಾರರು ನೀಡುವ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
‘ಭಾರತದ ಇಂದಿನ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ಲಿಂಕ್ಡ್ಇನ್ ವೇತನ ಅಧ್ಯಯನ ಪಾರದರ್ಶಕತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಯಾವ ಕಂಪನಿ ಎಷ್ಟು ಪ್ಯಾಕೇಜ್ ನೀಡುತ್ತಿದೆ? ಯಾವ ರೀತಿಯ ಪ್ಯಾಕೇಜ್ ಇದಾಗಿದೆ? ಮತ್ತು ಶೈಕ್ಷಣಿಕ ಅರ್ಹತೆಗಳ ಪ್ರಕಾರ ವೇತನಗಳು ಯಾವ ರೀತಿ ಬದಲಾಗುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ನಮ್ಮ ಬಳಕೆದಾರರು ತಿಳಿದುಕೊಳ್ಳಬಹುದು.’ ಎಂದು ಲಿಂಕ್ಡ್ಇನ್ ಇಂಡಿಯಾ ಉತ್ಪನ್ನಗಳ ಮುಖ್ಯಸ್ಥ ಅಜಯ್ ದತ್ತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.