ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗ್ರಾಮೀಣ ವಸತಿ ಯೋಜನೆ ಮತ್ತು ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳನ್ನು ಉತ್ತೇಜಿಸಲು ಈ ಹಣಕಾಸು ವರ್ಷದ ಉಳಿದ ನಾಲ್ಕು ತಿಂಗಳುಗಳ ಕಾಲ ಹೆಚ್ಚುವರಿ ಹಣವನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಹೆಚ್ಚು ಹೆಚ್ಚು ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನ ಪಡೆಯಬಹುದು.
ಮಾರ್ಚ್ 2019ರೊಳಗೆ 17 ದಶಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ MGNREGSನಲ್ಲಿ ಸಕ್ರಿಯ ಕಾರ್ಮಿಕರ ಸಂಖ್ಯೆ 110 ಮಿಲಿಯನ್ಗೆ ಏರಿಕೆಯಾಗಿದೆ ಹಾಗೂ ಇದರಲ್ಲಿ ಬಡವರಿಗಾಗಿ ವಸತಿ ಯೋಜನೆಯು ಅತ್ಯಂತ ಜನಪ್ರಿಯವಾಗಿದೆ.
ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ಇನ್ನೂ 4.5-4.8 ದಶಲಕ್ಷ ಹೊಸ ಮನೆಗಳನ್ನು ನಿರ್ಮಿಸುವ ಉದ್ದೇಶದೊಂದಿಗೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಒಟ್ಟಾರೆ 17 ದಶಲಕ್ಷ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಿತರಿಸುವ ಗುರಿ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅಮರ್ಜೀತ್ ಸಿನ್ಹಾ ಹೇಳಿದ್ದಾರೆ.
ಎನ್ಡಿಎ ಸರ್ಕಾರ ಉತ್ತೇಜಿಸುತ್ತಿರುವ ಗ್ರಾಮೀಣ ವಸತಿ ಯೋಜನೆ ಮತ್ತು ಉದ್ಯೋಗ ಕಾರ್ಯಕ್ರಮಗಳಿಗೆ ಹೆಚ್ಚುವರಿ ಹಣವನ್ನು ನೀಡುವುದರಿಂದ ಯೋಜನೆಗಳ ಜನಪ್ರಿಯತೆ, ಪ್ರಾಮುಖ್ಯತೆ ಜೊತೆಗೆ ಫಲಾನುಭವಿಗಳ ಸಂಖ್ಯೆಯೂ ವಿಸ್ತಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.