ನಾವು ಭಾರತ್ ಮಾತಾ ಕೀ… ಎಂದರೆ ಪಕ್ಕದಲ್ಲೆಲ್ಲೋ ಇರುವ ಎರಡು-ಮೂರು ವರ್ಷದ ಮಗು ಕೂಡಾ ಜೈ ಎಂದೇ ಎನ್ನುತ್ತದೆ. ನಾವು ಭಾರತ್ ಮಾತಾ ಕೀ… ಎಂದು ಕೂಗಿದರೆ ಪಕ್ಕದಲ್ಲೆಲ್ಲೋ ಇರುವ ಎಪ್ಪತ್ತು-ಎಂಭತ್ತು ವರ್ಷದ ವೃದ್ಧರು ಕೂಡಾ ಮುಷ್ಠಿ ಬಿಗಿದು, ತೋಳುಗಳನ್ನೆತ್ತಿ ಜೈ ಎಂದು ಕೂಗಿಯೇ ಕೂಗುತ್ತಾರೆ. ಮಹಿಳೆಯರಿರಲಿ,ಪುರುಷರಿರಲಿ, ಬಡವನಿರಲಿ, ಶ್ರೀಮಂತನಿರಲಿ ಭಾರತ ಮಾತೆಗೆ ಜೈ ಕಾರ ಹಾಕುವಾಗ ಒಂದು ಕ್ಷಣವೂ ಹಿಂದೆ ಮುಂದೆ ಯೋಚಿಸಲಾರ. ದುರದೃಷ್ಟದ ಸಂಗತಿಯೆಂದರೆ ಇದೀಗ ಭಾರತ ಮಾತೆಗೆ ಜೈಕಾರ ಹಾಕುವುದು ಕೂಡಾ ತಪ್ಪು ಎನ್ನುವ ಭಾವನೆ ಕೆಲವು ನಿರ್ದಿಷ್ಟ ಪಕ್ಷಗಳ ನಾಯಕರಲ್ಲಿ ಮೂಡಿದೆ. ಮತ್ತು ಆ ನಾಯಕರುಗಳು ಕೂಡಾ ತಮ್ಮ ಬೆಂಬಲಿಗರಿಗೆ ಭಾರತ ಮಾತೆಗೆ ಜೈಕಾರ ಹಾಕದಂತೆ ತಡೆಯುವ ಕೆಲಸ ಮಾಡುತ್ತಿದ್ದಾರೆ!
ಇದಕ್ಕೊಂದು ತಾಜಾ ಉದಾಹರಣೆಯೆಂದರೆ ರಾಜಸ್ಥಾನದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬುಲಾಕಿ ದಾಸ್ ಕಲ್ಲಾ ಅವರು ತಮ್ಮ ಕಾರ್ಯಕರ್ತರಿಗೆ ಭಾರತ್ ಮಾತಾಕೀ ಜೈ ಎನ್ನದಂತೆ ತಡೆದಿದ್ದು. ಅಷ್ಟೇ ಅಲ್ಲದೆ “ಭಾರತ್ ಮಾತಾ ಕೀ ಜೈ ಎನ್ನಬೇಡಿ; ಸೋನಿಯಾ ಗಾಂಧಿಯವರಿಗೆ ಜೈ ಎನ್ನಿ,ರಾಹುಲ್ ಗಾಂಧಿಯವರಿಗೆ ಜೈ ಎನ್ನಿ” ಎಂದು ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಾಕೀತು ಕೂಡಾ ಮಾಡಿದ್ದಾರೆ. ತಮ್ಮ ನಾಯಕನ ಆಜ್ಞೆಯನ್ನು ಪಾಲಿಸಿದ ಕಾರ್ಯಕರ್ತರು ಭಾರತ ಮಾತೆಗೆ ಜೈಕಾರ ಹಾಕುವುದನ್ನು ಅರ್ಧಕ್ಕೇ ನಿಲ್ಲಿಸಿ ಸೋನಿಯಾ ಗಾಂಧಿ,ರಾಹುಲ್ ಗಾಂಧಿ, ಸಚಿನ್ ಪೈಲಟ್, ಅಹ್ಮದ್ ಪಟೇಲ್ ಮುಂತಾದವರಿಗೆ ಜೈಕಾರ ಹಾಕುತ್ತಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ. ಬಿ.ಡಿ. ಕಲ್ಲಾ ಎಂದೇ ಹೆಸರಾಗಿರುವ ಬುಲಾಕಿ ದಾಸ್ ಕಲ್ಲಾ ಅವರು 1980 ರಿಂದ ಸತತ ಐದು ಬಾರಿ ಬಿಕಾನೇರ್ ನಗರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವಿಪರ್ಯಾಸವೆಂದರೆ ಅವರು ರಾಜಕಾರಣಿಯಾಗುವುದಕ್ಕೂ ಮೊದಲು ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ಅದೇ ಅರ್ಹತೆಯ ಆಧಾರದಲ್ಲಿ ಎರಡು ಬಾರಿ ಶಿಕ್ಷಣ ಸಚಿವರಾಗಿಯೂ ಆಯ್ಕೆಯಾಗಿದ್ದ ಅವರು ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು. ಒಂದಿಡೀ ರಾಜ್ಯದ ವಿದ್ಯಾರ್ಥಿಗಳನ್ನು ದೇಶಭಕ್ತರನ್ನಾಗಿ ರೂಪಿಸಬಹುದಾಗಿದ್ದ ಸ್ಥಾನದಲ್ಲಿದ್ದ ಅವರೇ ಭಾರತ ಮಾತೆಗೆ ಜೈಕಾರ ಹಾಕುವುದನ್ನು ಅರ್ಧಕ್ಕೇ ತಡೆಯುತ್ತಾರೆಂದರೆ ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ಒಂದು ಕ್ಷಣ ಆತಂಕವಾಗದೇ ಇರದು.
ಭಾರತ್ ಮಾತಾ ಕೀ ಜೈ ಎನ್ನುವುದನ್ನು ಅರ್ಧಕ್ಕೇ ತಡೆದು ಸೋನಿಯಾ ಗಾಂಧಿ,ಅಹ್ಮದ್ ಪಟೇಲ್ ಮುಂತಾದವರಿಗೆ ಜೈಕಾರ ಹಾಕಿಸಿದ ಆ ದೃಶ್ಯದ ವಿಡಿಯೋ ಸಾಮಾಜಿಕ ಜಾಲ ತಾಣಗಳ ಮೂಲಕ ಇದೀಗ ಎಲ್ಲೆಡೆ ತಲುಪುತ್ತಿದೆ. ಆದರೆ ಭಾರತ ಮಾತೆಗೆ ಜೈಕಾರ ಹಾಕುವುದು ಒಂದು ರಾಜಕೀಯ ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧ ಎಂದೆನಿಸಲು ಕಾರಣವಾದ ಅಂಶವಾದರೂ ಏನು ಎನ್ನುವುದು ಸಮಸ್ತ ಭಾರತೀಯ ದೇಶಭಕ್ತರ ಪ್ರಶ್ನೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.