ನವದೆಹಲಿ: ಬ್ರಾಹ್ಮಣ ವಿರೋಧಿ ಪ್ಲಾಕಾರ್ಡ್ ಹಿಡಿದು ಫೋಸ್ ನೀಡಿರುವ ಟ್ವಿಟರ್ ಸಿಇಓ ಜಾಕ್ ಡಾರ್ಸೆ ಅವರು ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ಇತ್ತೀಚಿಗೆ ಭಾರತಕ್ಕೆ ಬಂದಿದ್ದ ಡಾರ್ಸೆ ಅವರು ಕೆಲವು ಮಹಿಳಾ ಪತ್ರಕರ್ತರು, ಹೋರಾಟಗಾರರು ಮತ್ತು ಬರಹಗಾರರೊಂದಿಗೆ ರೌಂಡ್ ಟೇಬಲ್ ಚರ್ಚೆ ನಡೆಸಿದ್ದರು. ಈ ವೇಳೆ ಅವರಿಗೆ ದಲಿತ ಹೋರಾಟಗಾರರೊಬ್ಬರು ‘ಬ್ರಾಹ್ಮಣ ಪಿತೃಪ್ರಭುತ್ವ ತೊಡೆದುಹಾಕಿ’ ಎಂಬ ಪ್ಲಾಕಾರ್ಡ್ನ್ನು ನೀಡಿದ್ದರು. ಅದನ್ನು ಹಿಡಿದು ಅವರು ಫೋಸ್ ನೀಡಿದ್ದರು.
ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಡಾರ್ಸೆ ಅವರ ವಿರುದ್ಧ ಅನೇಕರು ಕಿಡಿಕಾರಿದ್ದು, ಸುಖಾ ಸುಮ್ಮನೆ ದ್ವೇಷವನ್ನು ಬಿತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ಫೋಸಿಸ್ನ ಮಾಜಿ ನಿರ್ದೇಶಕ ಮೋಹನಾದಾಸ್ ಪೈ ಅವರೂ ಟ್ವಿಟರ್ ಸಿಇಓನ ಈ ಕ್ರಮಕ್ಕೆ ತೀವ್ರ ಆಕ್ಷೇಪವನ್ನೆತ್ತಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಎಂತಹ ನಾಚಿಕೆಗೇಡು, ದ್ವೇಷದ ಪೋಸ್ಟರ್ನ್ನು ಹಿಡಿದು ಒಬ್ಬರು ಅದೇಗೆ ಒಂದು ಸಮುದಾಯವನ್ನು ಅವಮಾನಿಸಬಹುದು? ಟ್ವಿಟರ್ನ ಸಿಇಓ ಆಗಿ ನೀವು ಇಂತಹ ದ್ವೇಷದ ಕಾರ್ಯಕ್ರಮದಲ್ಲಿ ಹೇಗೆ ಭಾಗಿಯಾದಿರಿ. ಬ್ರಾಹ್ಮಣಫೋಬಿಯಾ ಇಲ್ಲಿ ಅತೀ ಕೆಟ್ಟ ಸ್ಥಿತಿಯಲ್ಲಿದೆ’ ಎಂದಿದ್ದಾರೆ.
ಅನೇಕರು ಈ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹೊಕಿದ್ದು, ಟ್ವಿಟರ್ ಸಿಇಓಗೆ ಇಸ್ಲಾಮ್, ಯಹೂದಿ ಇನ್ನಿತರ ಧರ್ಮಗಳ ಬಗ್ಗೆ ಇಂತಹ ಪೋಸ್ಟರ್ ಹಿಡಿಯುವ ತಾಕತ್ತು ಇದೇಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಟ್ವಿಟರ್, ‘ಇದು ಟ್ವಿಟರ್ ಅಥವಾ ನಮ್ಮ ಸಿಇಓನ ಹೇಳಿಕೆಯಲ್ಲ. ಕಾರ್ಯಕ್ರಮದಲ್ಲಿ ದಲಿತ ಹೋರಾಟಗಾರರೊಬ್ಬರು ನೀಡಿದ ಪ್ಲಾಕಾರ್ಡ್ನ್ನು ಅವರು ಹಿಡಿದುಕೊಂಡಿದ್ದಾರೆ ಅಷ್ಟೇ’ ಎಂದಿದೆ.
ಒಟ್ಟಿನಲ್ಲಿ ಬ್ರಾಹ್ಮಣ ವಿರೋಧಿಗಳು ಟ್ವಿಟರ್ ಸಿಇಓ ಕೈಯಲ್ಲೂ ತಮ್ಮ ಬೇಳೆಯನ್ನು ಬೇಯಿಸಿಕೊಂಡದ್ದು ಇಲ್ಲಿ ಸ್ಪಷ್ಟ.
source: zeenews.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.