ಆ ಯುದ್ಧ ಹೀರೋ ಬ್ರಿಗೇಡಿಯರ್ ಕುಲ್ದೀಪ್ ಸಿಂಗ್ ಇಂದು ನಮ್ಮನ್ನೆಲ್ಲ ಅಗಲಿ ಹೋರಟರು. ಆ ಯುದ್ಧದ ಕುರಿತು ಬ್ರಿಗೇಡಿಯರ್ ಸಾಬ್ನ ಸಾಹಸದ ಕುರಿತು ಇದೊಂದು ಪುಟ್ಟ ವಿವರಣೆ ನಿಮಗಾಗಿ…..
“ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ತಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ತಾನಗಳ ನಡುವಿನ ತಿಕ್ಕಾಟವಾಗಿತ್ತು. 1970ರ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಪಕ್ಷವು ಪೂರ್ವ ಪಾಕಿಸ್ತಾನದಲ್ಲಿನ 169 ಸ್ಥಾನಗಳ ಪೈಕಿ 167 ನ್ನು ಗೆದ್ದು 313 ಸ್ಥಾನಗಳಿದ್ದ ಪಾಕಿಸ್ತಾನದ ಶಾಸನ ಸಭೆ ಮಜ್ಲಿಸ್-ಏ -ಶುರಾದಲ್ಲಿ ಸರಳ ಬಹುಮತ ಪಡೆಯುವುದರೊಂದಿಗೆ ಬಾಂಗ್ಲಾ ವಿಮೋಚನೆಯ ಯುದ್ಧದ ಕಿಡಿಯು ಹತ್ತಿಕೊಂಡಿತು. ಅವಾಮಿ ಲೀಗ್ ನ ಮುಖ್ಯಸ್ಥ ಶೇಖ್ ಮುಜೀಬುರ್ ರಹಮಾನ್ ಅವರು ಪಾಕಿಸ್ತಾನ ಅಧ್ಯಕ್ಷರನ್ನು ಭೆಟ್ಟಿಯಾಗಿ ಸರಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸಿದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಝುಲ್ಫೀಕರ್ ಅಲಿ ಭುಟ್ಟೋ, ಪಾಕಿಸ್ತಾನದ ನಾಯಕತ್ವವನ್ನು ಮುಜೀಬುರ್ ಗೆ ಒಪ್ಪಿಸಲು ನಿರಾಕರಿಸಿದ ಮೇಲೆ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಬಹುತೇಕ ಪಶ್ಚಿಮ ಪಾಕಿಸ್ತಾನೀಯರನ್ನೇ ಹೊಂದಿದ್ದ ಸೈನ್ಯವನ್ನು ಕರೆಸಿದರು.
ಭಿನ್ನಮತೀಯರ ಸಾಮೂಹಿಕ ಬಂಧನಗಳು ಆರಂಭವಾದವು. ಪೂರ್ವ ಪಾಕಿಸ್ತಾನದ ಸೈನಿಕರನ್ನು, ಪೋಲೀಸರನ್ನು ನಿಶ್ಶಸ್ತ್ರಗೊಳಿಸುವ ಯತ್ನಗಳು ನಡೆದವು. ಅನೆಕ ದಿನಗಳ ಮುಷ್ಕರ ಮತ್ತು ಅಸಹಕಾರದ ನಂತರ ಪಾಕಿಸ್ತಾನದ ಸೈನ್ಯವು ಮಾರ್ಚ್ 25 , 1971 ಢಾಕಾ ಮೇಲೆ ಎರಗಿತು. ಅವಾಮಿ ಲೀಗ್ ಅನ್ನು ಪ್ರತಿಬಂಧಿಸಲಾಯಿತು, ಅದರ ಅನೇಕ ಸದಸ್ಯರು ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದರು. ಮುಜೀಬರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು.
27 ಮಾರ್ಚ್ 1971 ರಂದು, ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದು ಬಂಡೆದ್ದ ಝಿಯಾ ಉರ್ ರಹಮಾನ್ ಮುಜಿಬುರ್ ಪರವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಏಪ್ರಿಲ್ ನಲ್ಲಿ ದೇಶಭ್ರಷ್ಟರಾದ ಅವಾಮೀ ಲೀಗ್ ನಯಕರು ಒಂದು ದೇಶಭ್ರಷ್ಟ ಸರಕಾರವನ್ನು ಮೆಹೆರ್ ಪುರದ ಹತ್ತಿರ ಸ್ಥಾಪಿಸಿದರು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಎಂಬ ಅರೆಸೈನಿಕ ಪಡೆಯೂ ಬಂಡುಕೋರರೊಂದಿಗೆ ಸೇರಿಕೊಂಡಿತು. ಮುಕ್ತಿವಾಹಿನಿ ಎಂಬ ಗೆರಿಲ್ಲಾ ಮಾದರಿಯ ನಾಗರಿಕರ ಸೈನ್ಯವೊಂದನ್ನು ಬಾಂಗ್ಲಾ ಸೈನ್ಯಕ್ಕೆ ಸಹಾಯಮಾಡುವುದಕ್ಕಾಗಿ ರಚಿಸಲಾಯಿತು.
ನವೆಂಬರ್ ಹೊತ್ತಿಗೆ ಯುದ್ಧ ಅನಿವಾರ್ಯ ಎನಿಸಿತು. ಪೂರ್ವ ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ದೊಡ್ಡಪ್ರಮಾಣದಲ್ಲಿ ಭಾರತೀಯ ಪಡೆಗಳ ಜಮಾವಣೆ ಆರಂಭವಾಗಿತ್ತು. ಭಾರತೀಯ ಸೈನ್ಯವು ಚಳಿಗಾಲಕ್ಕಾಗಿ ಕಾಯಿತು. ಚಳಿಗಾಲದಲ್ಲಿ ಒಣದಾದ ನೆಲದಲ್ಲಿ ಕಾರ್ಯಾಚರಣೆಗಳು ಸುಲಭವಾಗಿದ್ದವು ಮತ್ತು ಹಿಮಾಲಯದ ಕಣಿವೆಗಳು ಹಿಮದಿಂದಾವೃತವಾಗಿ ಚೀನಾದ ಮಧ್ಯಪ್ರವೇಶವನ್ನು ತಡೆಯುತ್ತಿದ್ದವು. ನವೆಂಬರ್ 23ರಂದು, ಯಾಹ್ಯಾಖಾನರು ಇಡೀ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿಯನ್ನು ಸಾರಿ ತಮ್ಮ ಜನತೆಗೆ ಯುದ್ಧಕ್ಕಾಗಿ ಸಿದ್ಧರಾಗಲು ಹೇಳಿದರು.
ರವಿವಾರ ಡಿಸೆಂಬರ್ 3ರಂದು ಪಾಕಿಸ್ತಾನೀ ವಾಯುಪಡೆಯು ಆಗ್ರಾ ಸೇರಿದಂತೆ ವಾಯುವ್ಯಭಾರತದ ಎಂಟು ವಿಮಾನನೆಲೆಗಳ ಮೇಲೆ ದಾಳಿಮಾಡಿತು. ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಸಾರಿತು. ಪೂರ್ವಗಡಿಯಲ್ಲಿ ಭಾರತದ ಸೈನ್ಯವು ಮುಕ್ತಿವಾಹಿನಿಯ ಜತೆ ಸೇರಿ ಮಿತ್ರವಾಹಿನಿಯನ್ನು ರಚಿಸಿತು . ಮರುದಿನ ಪೂರ್ವ ಪಾಕಿಸ್ತಾನದ ಪಶ್ಚಿಮ ಪಾಕಿಸ್ತಾನದ ಸೈನ್ಯದ ಮೇಲೆ ಭೂಮಿ, ಅಕಾಶ ಮತ್ತು ಜಲಮಾರ್ಗವಾಗಿ ಆಕ್ರಮಣ ಮಾಡಿತು.
ಪಾಕಿಸ್ತಾನವು ಯುದ್ಧಸಮಯದಲ್ಲಿ ಎರಡು ಗುರಿಗಳನ್ನು ಹೊಂದಿತ್ತು:
1)ಭಾರತದ ಪಡೆಗಳನ್ನು ಪೂರ್ವಪಾಕಿಸ್ತಾನದಿಂದ ಸಾಧ್ಯವಾದಷ್ಟು ದೂರ ಇಡುವುದು. ಬಾಂಗ್ಲಾದೇಶದಲ್ಲಿ ಅನೇಕ ನದಿಗಳೂ ಉಪನದಿಗಳೂ ಇದ್ದು ಭೂಭಾಗವನ್ನು ಬೇರ್ಪಡಿಸಿರುವದರಿಂದ ಬಾಂಗ್ಲಾದೇಶದ ಒಳಕ್ಕೆ ಬಹಳ ದೂರ ಸಾಗುವದು ಭಾರತದ ಪಡೆಗಳಿಗೆ ಸುಲಭವಾಗಿರಲಿಲ್ಲ.
2)ಭಾರತದ ಪಶ್ಚಿಮಭಾಗದಲ್ಲಿ ಸಾಧ್ಯವಿದ್ದಷ್ಟು ಭೂಮಿಯನ್ನು ಆಕ್ರಮಿಸಉದ್ದೇಶವಿರಲಿಲ್ಲ. ಪಶ್ಚಿಮ ಭಾಗದಲ್ಲಿ ಭಾರತದ ಮುಖ್ಯ ಗುರಿಯು ಪಾಕಿಸ್ತಾನವು ತನ್ನ ಪ್ರದೇಶದೊಳಕ್ಕೆ ಬರುವುದನ್ನು ತಡೆಯುವದಾಗಿತ್ತು. ಅದಕ್ಕೆ ಪಾಕಿಸ್ತಾನವನ್ನು ಅತಿಕ್ರಮಿಸುವ ಉದ್ದೇಶವರಲಿಲ್ಲ. ಹೀಗೆ ಯುದ್ಧ ನಡೆಯಿತು ಅದರ ರೋಚಕತೆಯಲ್ಲಿ 1971ರ ದಿನ ಅತ್ಯಂತ ವಿಶೇಷ.
1971ರ ಡಿಸೆಂಬರ್ 4ರ ರಾತ್ರಿ ರಾಜಸ್ಥಾನದ ಲಾಂಗೆವಾಲಾ ಗಡಿಯಲ್ಲಿ 40 ಟ್ಯಾಂಕ್ಗಳೊಂದಿಗೆ ಬಂದಿದ್ದ 2,000 ಪಾಕಿಸ್ತಾನಿ ಸೈನಿಕರನ್ನು ಕೇವಲ 100 – 120 ಭಾರತೀಯ ಸೈನಿಕರಿದ್ದ ಸಣ್ಣ ತುಕಡಿ ಮಣಿಸಿತ್ತು. ಹಾಗೆ ತಾವಿನ್ನು ಇಂತಹ ವೀರರ ಎದುರು ಏನಿಲ್ಲ ಎಂದು ತಿಳಿದ ಪಾಪಿ ಪಾಕೀಸ್ತಾನೀ ಸೈನ್ಯವು ಕಡೆಗೆ ಡಿಸೆಂಬರ್ 16ಕ್ಕೆ ಕದನ ವಿರಾಮವನ್ನು ಘೋಷಿಸಿತು.
ಈ ತುಕಡಿಯ ನೇತೃತ್ವವಹಿಸಿದ್ದು ಪಾಪಿ ಪಾಕಿಸ್ತಾನದ ಸೈನ್ಯವನ್ನು ಧೂಳಿಪಟಮಾಡಿ ಮಣ್ಣು ಮುಕ್ಕಿಸಿದ ಕುಲ್ದೀಪ್ ಸಿಂಗ್ ನಮ್ಮೆಲ್ಲರ ಪಾಲಿಗೆ ಹಿರೋನೇ ಸರಿ. ಏನನ್ನುತೀರ!!!! ಇಂತಹ ಮಹಾನ್ ಸೇನಾನಿಯನ್ನು ಭಾರತ ಇಂದು ಕಳೆದುಕೊಂಡಿದೆ….. ಇವರ ಸಾಹಸ ಪರಾಕ್ರಮ ಅನೇಕರಿಗೆ ಪ್ರೇರಣೆಯಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.