ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಸೌರಶಕ್ತಿಯ ಉತ್ಪಾದನೆ ಮಹತ್ವದ ಘಟವನ್ನು ತಲುಪಿದೆ. ಕೊಚ್ಚಿ ಮೆಟ್ರೋ, ಕೊಚ್ಚಿ ಏರ್ಪೋರ್ಟ್, ಕೊಚ್ಚಿ ಯೂನಿವರ್ಸಿಟಿ, ಸರ್ಕಾರಿ ವೈದ್ಯಕೀಯ ಕಾಲೇಜು ಹೀಗೆ ಅಲ್ಲಿನ ಪ್ರಮುಖ ಸಂಸ್ಥೆಗಳು ಸೌರಶಕ್ತಿ ಘಟಕಗಳನ್ನು ಸ್ಥಾಪನೆ ಮಾಡಿವೆ.
ಅಷ್ಟೇ ಅಲ್ಲದೇ ಕೇರಳ ವಿದ್ಯುತ್ ಸರಬರಾಜು ಮಂಡಳಿಯ ‘ಸೌರ ರೂಫ್ಟಾಪ್’ ಸೋಲಾರ್ ಪವರ್ ಪ್ರಾಜೆಕ್ಟ್ನಡಿ ಬಂದಿರುವ 10 ಸಾವಿರ ಅರ್ಜಿಗಳ ಪೈಕಿ ಬಹುತೇಕ ಅರ್ಜಿಗಳು ಕೊಚ್ಚಿಯ ಜನರದ್ದೇ ಆಗಿದೆ.
ಅಲ್ಲಿನ ಮೆಡಿಕಲ್ ಕಾಲೇಜು, ರೂ.1ಕೋಟಿ ವೆಚ್ಚದಲ್ಲಿ 153 ಕೆಡಬ್ಲ್ಯೂ ಸೋಲಾರ್ ಪವರ್ ಪ್ಲಾಂಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕೂಡ 4ಎಂಡಬ್ಲ್ಯೂ ಸೌರ ಘಟಕವನ್ನು ಸ್ಥಾಪಿಸಲು ಮಾತುಕತೆ ನಡೆಸುತ್ತಿದೆ. ಕೊಚ್ಚಿ ಮೆಟ್ರೋ ಈಗಾಗಲೇ 2,760 ಕೆಡಬ್ಲ್ಯೂಪಿ ಸೋಲಾರ್ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಿದೆ. ಮುಟ್ಟೊಮ್ ದಿಪೋದಲ್ಲಿ 2,700 ಕೆಡಬ್ಲ್ಯೂಪಿ ಸೋಲಾರ್ ಉತ್ಪಾದನಾ ಘಟಕವಿದೆ.
ಕೇರಳದ ವಿದ್ಯುತ್ ಸರಬರಾಜು ಮಂಡಳಿ ಮುಂದಿನ ಎರಡು ವರ್ಷದಲ್ಲಿ 10 ಸಾವಿರ ಮೆಗಾವ್ಯಾಟ್ ಸೋಲಾರ್ ಉತ್ಪಾದನೆಯನ್ನು ಮಾಡುವ ಯೋಜನೆಯನ್ನು ರೂಪಿಸಿದೆ.
ಒಟ್ಟಿನಲ್ಲಿ ಕೊಚ್ಚಿ ದೇಶದ ಸೋಲಾರ್ ಹಬ್ ಆಗಿ ಪರಿವರ್ತನೆಯಾಗುತ್ತಿದ್ದು, ಅಲ್ಲಿನ ಜನತೆಗೆ ಸೋಲಾರ್ ಬಗೆಗಿನ ಅರಿವು ಕೂಡ ಹೆಚ್ಚಾಗಿದೆ.
source: timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.