ನೀರು ಪ್ರತಿ ಜೀವ ಸಂಕುಲಕ್ಕೆ ಅತ್ಯವಶ್ಯಕ. ನೀರಿಲ್ಲದೆ ಯಾವ ಪ್ರಾಣಿಯೂ ಬದುಕಲಾರದು. ಹೀಗಿದ್ದರೂ ಕೆಲವೊಂದು ಬರ ಪೀಡಿತ ಪ್ರದೇಶಗಳಲ್ಲೀ ನೀರು ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ನೀರು ಇದ್ದರೂ ಅದು ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿ ಇರುತ್ತದೆ.
ಜನರ ನೀರಿನ ಈ ಸಂಕಷ್ಟವನ್ನು ಅರಿತ ಬಡ ಕುಟುಂಬದ ಬಡ ರೈತನ ಎಂಜಿನಿಯರಿಂಗ್ ಪದವೀಧರ ಮಗನೊನೊಬ್ಬ ಈಗ ವಿದ್ಯುತ್ ಸಹಾಯವಿಲ್ಲದೆಯೇ ನೀರು ಶುದ್ಧೀಕರಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಆ ಯುವಕನ ಹೆಸರೇ ಜಿತೇಂದ್ರ ಚೌಧರಿ. ಮಧ್ಯಪ್ರದೇಶದ ಕುಗ್ರಾಮ ರತ್ಲಂನವರು.
ತನ್ನ ಗ್ರಾಮದ ಸಮೀಪದ ಶಾಲೆಯಲ್ಲಿ ಓದಿದ್ದ ಈತ 10ನೇ ತರಗತಿಯಲ್ಲಿ ಫೇಲ್ ಆಗಿದ್ದ. ಬಳಿಕ ಮತ್ತೆ ಶಿಕ್ಷಣಕ್ಕೆ ಎರಡನೇ ಅವಕಾಶ ನೀಡುವ ಸಲುವಾಗಿ ರಾಜಸ್ಥಾನಕ್ಕೆ ತೆರಳಿ ಅಲ್ಲಿ 12ನೇ ತರಗತಿಯನ್ನೂ ಪಾಸ್ಸಾದ. ಬಳಿಕ ತನ್ನ ಹುಟ್ಟೂರಿಗೆ ವಾಪಸ್ಸಾಗಿ, ಉಜೈನಿ ಎಂಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ.
ತನ್ನ ಸುತ್ತಮುತ್ತಲ ಪ್ರದೇಶಗಳ ಜನರು ನೀರಿಗಾಗಿ ಪಡುತ್ತಿರುವ ಕಷ್ಟವನ್ನು ಕಣ್ಣಾರಿ ಕಂಡಿದ್ದ ಆತನಿಗೆ ಏನಾದರು ಮಾಡಲೇ ಬೇಕು ಎಂಬ ಹಠ ಬೆಳೆಯಿತು. ಇದರ ಪರಿಣಾಮವಾಗಿಯೇ ಮೂಡಿ ಬಂತು ‘ಶುದ್ಧಂ’-ಅತೀ ಕಡಿಮೆ ದರ ವಿದ್ಯುತ್ ಬಳಸದೆಯೇ ನೀರು ಶುದ್ಧೀಕರಣಗೊಳಿಸುವ ಯಂತ್ರ.
ಆರು ತಿಂಗಳಲ್ಲಿ ಈ ಯಂತ್ರ 90 ಸಾವಿರ ಲೀಟರ್ ನೀರನ್ನು ಶುದ್ಧೀಕರಿಸಬಲ್ಲದು. ದಿನಕ್ಕೆ 500 ಲೀಟರ್ ನೀರಿನ ಕಸವನ್ನು ತೆಗೆಯುವ ಸಾಮರ್ಥ್ಯ ಈ ಯಂತ್ರಕ್ಕಿದೆ.
ಈ ಯಂತ್ರದ ಬೆಲೆ ರೂ.7 ಸಾವಿರವಾಗಿದ್ದು, ವರ್ಷಕ್ಕೆ ಒಂದು ಬಾರಿ ಇದರ ಕಣವನ್ನು ತೆಗೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ ರೂ.500 ರಿಂದ 700. ಗುರುತ್ವಾಕರ್ಷಣೆಯ ತತ್ವದೊಂದಿಗೆ ಈ ಯಂತ್ರ ಕಾರ್ಯನಿರ್ವಹಿಸುತ್ತದೆ. ಬಡ ಹುಡುಗನ ಈ ಆವಿಷ್ಕಾರ ಜನರಿಗೆ ಕುಡಿಯಲು ಶುದ್ಧ ನೀರು ದೊರಕುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.