ನವದೆಹಲಿ: ಹವಾಮಾನ ಮತ್ತು ಉತ್ಪಾದನಾ ರಂಗಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಸವಾಲುಗಳನ್ನು ಎದುರಿಸಲು ಕೃಷಿಯ ಆಧುನೀಕರಣ ಅಗತ್ಯತೆ ಇದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರತಿಪಾದಿಸಿದ್ದಾರೆ.
ಡಾ.ರಾಜೇಂದ್ರ ಪ್ರಸಾದ್ ಸೆಂಟ್ರಲ್ ಅಗ್ರಿಕಲ್ಚರ್ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಈ ಯೂನಿವರ್ಸಿಟಿ 2016ರಲ್ಲಿ ಸ್ಥಾಪನೆಗೊಂಡಿದೆ.
ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು 33 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನಿಸಿದರು.
‘ಬಿಹಾರದಲ್ಲಿ ಬೆಳೆ ಉತ್ಪಾದನೆ ಉತ್ತೇಜಿಸಲು ಈ ಯೂನಿವರ್ಸಿಟಿ ಸಾಕಷ್ಟು ಕೊಡುಗೆ ನೀಡಿದೆ. ರೈತರಿಗೆ ಉತ್ತಮ ಸ್ಥಿತಿಯನ್ನು ನಿರ್ಮಾಣ ಮಾಡಿಕೊಟ್ಟಿದೆ. ಇಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಬೀಜದಿಂದಾಗಿ ಮೆಕ್ಕೆಜೋಳ ಉತ್ಪಾದನೆ ಬಿಹಾರದಲ್ಲಿ ಹೆಚ್ಚಳವಾಗಿದೆ’ ಎಂದರು.
‘ಇಂದು ಜಾಗ ಕಡಿಮೆಯಾಗಿದೆ. ಹೀಗಾಗಿ ಕಡಿಮೆ ಜಾಗದಲ್ಲಿ, ಕಡಿಮೆ ನೀರು ಬಳಸಿ ಹೆಚ್ಚಿನ ಫಸಲು ನೀಡುವ ಬೆಳೆಗಳತ್ತ ನಾವು ಗಮನವಹಿಸಬೇಕಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.