ಬೆಂಗಳೂರು: ದೇಶದ ಇತರ ಜನಪ್ರತಿನಿಧಿಗಳಿಗೆ ಹೋಲಿಸಿದರೆ ಕರ್ನಾಟಕದವರೇ ಹೆಚ್ಚು ನಿಷ್ಠಾವಂತರು ಎಂಬ ಮಾಹಿತಿಯೊಂದು ಹೊರಬಿದ್ದಿದೆ.
ಇತರ ರಾಜ್ಯಗಳ ಶಾಸಕರಿಗೆ ಹೋಲಿಸಿದರೆ ಕರ್ನಾಟಕದ ಶಾಸಕರು ಹೆಚ್ಚು ದಿನಗಳ ಕಾಲ ವಿಧಾನಸಭಾ ಕಲಾಪಕ್ಕೆ ಹಾಜರಾಗುತ್ತಾರೆ ಎಂದು ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ಹೇಳಿದೆ.
26 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 2011-2016ರ ನಡುವಣ ವಿಧಾನಸಭಾ ಕಾರ್ಯಚಟುವಟಿಕೆಯನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.
ಈ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ 46 ದಿನ, ಕೇರಳದಲ್ಲಿ 46 ದಿನ, ಮಹಾರಾಷ್ಟ್ರದಲ್ಲಿ 45 ದಿನ, ಒರಿಸ್ಸಾದಲ್ಲಿ 42 ದಿನ, ಜಮ್ಮು ಕಾಶ್ಮೀರದಲ್ಲಿ 39 ದಿನ ಕಲಾ ನಡೆದಿದೆ. ಶಾಸಕರ ಭಾಗವಹಿಸುವಿಕೆಯಲ್ಲಿ ರಾಜ್ಯವೇ ಮುಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.