ನವದೆಹಲಿ: ಕೇಂದ್ರದ ಮಟ್ಟದಿಂದಲೇ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪರಿಶ್ರಮವನ್ನು ಇನ್ಫೋಸಿಸ್ ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಕೊಂಡಾಡಿದ್ದು, ಇದೇ ಸರ್ಕಾರ ಇನ್ನಷ್ಟು ದಿನ ಅಧಿಕಾರದಲ್ಲಿದ್ದರೆ ಉತ್ತಮ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಮೋದಿ ಮತ್ತು ಅವರ ಸಂಪುಟ ಭ್ರಷ್ಟಾಚಾರ ಹೋಗಲಾಡಿಸಲು ಸಾಕಷ್ಟು ಶ್ರಮಿಸುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಕೇಂದ್ರದ ಮಟ್ಟದಲ್ಲಿ ಭ್ರಷ್ಟಾಚಾರದ ಬಗ್ಗೆ ಕೇಳಿದ್ದು ಅತೀ ಕಡಿಮೆ. ರಫೇಲ್ ಡೀಲ್ ಬಗ್ಗೆ ದತ್ತಾಂಶ ಲಭ್ಯವಿಲ್ಲದ ಕಾರಣ ಸತ್ಯ ಯಾವುದು ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾರೆ.
’ಮೋದಿಯವರು ಬಲಿಷ್ಠ ಆರ್ಥಿಕ ಪ್ರಗತಿಯ ಯೋಚನೆ ಹೊಂದಿದ ಸರ್ಕಾರದ ನೇತೃತ್ವವನ್ನು ವಹಿಸಿದ್ದಾರೆ. ಅನುಷ್ಠಾನದ ಬಗ್ಗೆ ನಾವು ಪ್ರಧಾನಿಯನ್ನು ಟೀಕಿಸಲು ಸಾಧ್ಯವಿಲ್ಲ, ಅದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅನುಷ್ಠಾನದಲ್ಲಿ ಉದಾಸೀನ ಪ್ರವೃತ್ತಿ ಭಾರತೀಯರ ಮನಸ್ಥಿತಿಯಾಗಿದೆ, ಈ ಮನಸ್ಥಿತಿಯನ್ನು ಬದಲಾಯಿಸಲು ಸಾಂಸ್ಕೃತಿಕ ಪರಿವರ್ತನೆ ಅಗತ್ಯ’ ಎಂದರು.
source: economictimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.